Dailyhunt Logo
  • Light mode
    Follow system
    Dark mode
    • Play Story
    • App Story
75 ವರ್ಷಗಳ ಹಿಂದೆ: ಕೇಂದ್ರದ  ಹತೋಟಿ ಅಧಿಕಾರ' ಅನ್ವಯಕ್ಕೆ ಉಗ್ರ ಪ್ರತಿಭಟನೆ

75 ವರ್ಷಗಳ ಹಿಂದೆ: ಕೇಂದ್ರದ ಹತೋಟಿ ಅಧಿಕಾರ' ಅನ್ವಯಕ್ಕೆ ಉಗ್ರ ಪ್ರತಿಭಟನೆ

ಭಾನುವಾರ, 4-11-1951

ಕೇಂದ್ರದ 'ಹತೋಟಿ ಅಧಿಕಾರ'ದ ಅನ್ವಯಕ್ಕೆ ಉಗ್ರ ಪ್ರತಿಭಟನೆ

ಬೆಂಗಳೂರು, ನ. 3- ಭಾರತ ರಾಜ್ಯಾಂಗ ಜಾರಿಗೆ ಬಂದ ಮೇಲೆ ಪ್ರಥಮವಾಗಿ ಭಾರತದ ಅಧ್ಯಕ್ಷರು ರಾಜ್ಯಾಂಗದ 371ನೇ ವಿಧಿಯ ಪ್ರಕಾರವಿರುವ ಅಧಿಕಾರವನ್ನು ಮೈಸೂರಿನ ಮೇಲೆ ಚಲಾಯಿಸಿದ್ದಾರೆ.

ಆ ವಿಧಿಯ ರೀತ್ಯಾ ಅಧ್ಯಕ್ಷರು ಕೊಟ್ಟಿರುವ ಸೂಚನೆಯೊಂದರ ಬಗ್ಗೆ ಇಂದು ನಡೆದ ಶಾಸನ ಸಭೆ 3 ಗಂಟೆಗಳ ಕಾಲ ದೀರ್ಘ ಚರ್ಚೆ ನಡೆಸಿ, ತನ್ನ ತೀವ್ರ ಅಸಮಾಧಾನವನ್ನು ವ್ಯಕ್ತಪಡಿಸಿತು.

ಸರ್ವಾನುಮತದಿಂದ ನಿರ್ಣಯವೊಂದನ್ನು ಅಂಗೀಕರಿಸಿ, 'ಸಂಸ್ಥಾನದ ಗೌರವ ಪ್ರತಿಷ್ಠೆಗಳನ್ನು ರಕ್ಷಿಸಿಕೊಳ್ಳಲು ಎಲ್ಲ ಅವಶ್ಯ ಕ್ರಮಗಳನ್ನು ಕೈಗೊಳ್ಳಬೇಕು' ಎಂದು ಸರ್ಕಾರಕ್ಕೆ ಸೂಚಿಸಿತು.

Dailyhunt
Disclaimer: This content has not been generated, created or edited by Dailyhunt. Publisher: Prajavani