Dailyhunt Logo
  • Light mode
    Follow system
    Dark mode
    • Play Story
    • App Story
75 ವರ್ಷಗಳ ಹಿಂದೆ: ತತ್‌ಕ್ಷಣ ತುಟ್ಟಿಭತ್ಯೆ ಏರಿಕೆ ಅತ್ಯಗತ್ಯ: ನೌಕರರ ನಿರ್ಣಯ

75 ವರ್ಷಗಳ ಹಿಂದೆ: ತತ್‌ಕ್ಷಣ ತುಟ್ಟಿಭತ್ಯೆ ಏರಿಕೆ ಅತ್ಯಗತ್ಯ: ನೌಕರರ ನಿರ್ಣಯ

ತತ್‌ಕ್ಷಣ ತುಟ್ಟಿಭತ್ಯೆ ಏರಿಕೆ ಅತ್ಯಗತ್ಯ: ನೌಕರರ ನಿರ್ಣಯ

ಬೆಂಗಳೂರು, ನ. 2- 'ನಾನ್‌ ಗೆಜೆಟೆಡ್‌ ನೌಕರರ ತುಟ್ಟಿಭತ್ಯೆ ಏರಿಕೆಯ ಬಗ್ಗೆ ಪದೇ ಪದೇ ಭರವಸೆ ನೀಡುತ್ತಿರುವ ಜನಪ್ರಿಯ ಸರ್ಕಾರದವರು ಈ ಅತಿ
ಮುಖ್ಯ ಪ್ರಶ್ನೆಯ ಬಗ್ಗೆ ತತ್‌ಕ್ಷಣ ಅನುಕೂಲಕರ ನಿರ್ಧಾರ ಮಾಡಿ ಈಗಿನ ತೀವ್ರ ಪರಿಸ್ಥಿತಿಯಲ್ಲಿ ಆಡಳಿತದ ಬೆನ್ನೆಲುಬಾದ ಕೆಳದರ್ಜೆ ನೌಕರರು ಶಾಂತರಾಗಿಯೂ ನಿಷ್ಠ ರಾಗಿಯೂ ಕರ್ತವ್ಯ ನಿರ್ವಹಿಸಲು ಅನುವಾಗಿ ಇದೇ ನವೆಂಬರ್‌ 15ನೇ ತಾರೀಖಿನೊಳಗೆ ನೌಕರರಿಗೆ ಪರಿಹಾರ ಒದಗಿಸಬೇಕು' ಎಂಬ ನಿರ್ಣಯವನ್ನು ಈದಿನ ಸಂಜೆ 5.30 ಗಂಟೆಗೆ ಜೆಆರ್‌ಎಸ್‌ ಕ್ಲಬ್ಬಿನ ಆವರಣದಲ್ಲಿ ಸೇರಿದ ಮೈಸೂರು ಸಂಸ್ಥಾನದ ನಾನ್‌ ಗೆಜೆಟೆಡ್‌ ನೌಕರರ ಸಭೆಯು ಸರ್ವಾನುಮತದಿಂದ ಅಂಗೀಕರಿಸಿತು.

ಸರ್ಕಾರ ತೊಂದರೆಗಳನ್ನು ನಿವಾರಿ
ಸುವವರೆಗೂ ನೌಕರರು ಕೆಲಸ ಮಾಡು
ವಾಗ 'ಸಂಕಟ ಸಂಕೇತ ಸೂಚಕ' ಬ್ಯಾಡ್ಜ್‌ ಧರಿಸಲು ಸಭೆ ಅಂಗೀಕರಿಸಿತು.

Dailyhunt
Disclaimer: This content has not been generated, created or edited by Dailyhunt. Publisher: Prajavani