'ಕುಲಾಂತರಿ ಉತ್ಪನ್ನಕ್ಕೆ ಅವಕಾಶವಿಲ್ಲ'
ನವದೆಹಲಿ (ಪಿಟಿಐ): ಕುಲಾಂತರಿ ಉತ್ಪನ್ನಗಳ ಆಮದಿಗೆ ಕೇಂದ್ರ ಸರ್ಕಾರವು ಅವಕಾಶ ಕೊಡುವುದಿಲ್ಲ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪೀಯೂಷ್ ಗೋಯಲ್ ತಿಳಿಸಿದ್ದಾರೆ.ಯಾವುದೇ ಮುಕ್ತ ವ್ಯಾಪಾರ ಒಪ್ಪಂದದಲ್ಲಿ (ಎಫ್ಟಿಎ) ಕೇಂದ್ರ ಸರ್ಕಾರವು ದೇಶದ ಹೈನುಗಾರಿಕೆ ವಲಯವನ್ನು ಮುಕ್ತವಾಗಿಸಿಲ್ಲ ಎಂಬುದನ್ನು ಅವರು ಸ್ಪಷ್ಟಪಡಿಸಿದ್ದಾರೆ.
ಪ್ರಜಾವಾಣಿ
• 15m ago








