ನವದೆಹಲಿ: ಜಂತರ್ ಮಂತರ್‌ನಲ್ಲಿ ನಡೆಯುತ್ತಿರುವ ವಿದ್ಯಾರ್ಥಿಗಳ ಪ್ರತಿಭಟನೆಗೆ ಆಹಾರ ಹಾಗೂ ಇತರೆ ಅಗತ್ಯ ವಸ್ತುಗಳ ಪೂರೈಕೆಯನ್ನು ದೆಹಲಿ ಪೊಲೀಸರು ತಡೆಹಿಡಿದಿದ್ದಾರೆ ಎಂದು ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಆರೋಪಿಸಿದೆ.
ಜಂತರ್ ಮಂತರ್ ಸುತ್ತಮುತ್ತ 5ರಿಂದ 10 ಕಿಲೋಮೀಟರ್ ವ್ಯಾಪ್ತಿಯಲ್ಲಿ ದೆಹಲಿ ಪೊಲೀಸರು ತಪಾಸಣಾ ಕೇಂದ್ರಗಳನ್ನು ಸ್ಥಾಪಿಸಿದ್ದು, ಪ್ರತಿಭಟನೆಗೆ ತೆರಳುತ್ತಿರುವ ವಿದ್ಯಾರ್ಥಿಗಳನ್ನು ತಡೆಯುತ್ತಿದ್ದಾರೆ ಎಂದು ಆ ವಾಟ್ಸ್‌ಆಯಪ್ ಸಂದೇಶದಲ್ಲಿದೆ.
ಸಿಜೆಪಿ ಪ್ರತಿಭಟನೆ: ಜುಲೈ 27ರಂದು 'ಸುಪ್ರೀಂ'ನಲ್ಲಿ ವಿಚಾರಣೆಜಂತರ್ ಮಂತರ್‌ಗೆ ಆಹಾರ ಪೂರೈಸುತ್ತಿದ್ದ ರೆಸ್ಟೊರೆಂಟ್‌ಗಳಿಗೆ ಪೊಲೀಸರು ತೆರಳಿ, ಪ್ರತಿಭಟನಾಕಾರರಿಗೆ ಆಹಾರ ಕಳುಹಿಸದಂತೆ ಬೆದರಿಕೆ ಹಾಕುತ್ತಿದ್ದಾರೆ ಎಂದೂ ಅವರು ಹಂಚಿಕೊಂಡ ಸ್ಕ್ರೀನ್‌ಶಾಟ್‌ನಲ್ಲಿದೆ. ಇದರ ಜತೆಗೆ, ಪ್ರತಿಭಟನಾ ಸ್ಥಳಕ್ಕೆ ಬರುವ ಮತ್ತು ಅಲ್ಲಿಂದ ತೆರಳುವ ವಿದ್ಯಾರ್ಥಿಗಳು ಹಾಗೂ ಯುವಕರ ಆಧಾರ್ ಸಂಖ್ಯೆಗಳನ್ನೂ ಪೊಲೀಸರು ದಾಖಲಿಸಿಕೊಳ್ಳುತ್ತಿದ್ದಾರೆ ಎಂದೂ ಇದೆ.
ಏನೇ ಮಾಡಿದರೂ ಪ್ರಧಾನ್ ರಾಜೀನಾಮೆ ನೀಡುವುದನ್ನು ತಡೆಯುವುದಕ್ಕೆ ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ. ಆದರೆ, ಈ ಆರೋಪಗಳಿಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರಿಂದ ಯಾವುದೇ ಅಧಿಕೃತ ಪ್ರತಿಕ್ರಿಯೆ ಲಭ್ಯವಾಗಿಲ್ಲ.
ಸಿಜೆಪಿ ಪ್ರತಿಭಟನೆ: ಅರ್ಜಿ ಸಲ್ಲಿಕೆಯಾಗಿಲ್ಲ ಎಂದ ಸಿಜೆಐ
