ಬೆಂಗಳೂರು: ಜನಪ್ರಿಯ ಮೊಬೈಲ್ ತಯಾರಕ ನೋಕಿಯಾ ಕಂಪನಿ 'ನೋಕಿಯಾ ಪವರ್ ಈಯರ್ ಬಡ್ಸ್ ಲೈಟ್ ' ಅನ್ನು ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.
ಫೆ. 27ರಿಂದ ಈಯರ್ ಬಡ್ಸ್ ಲೈಟ್ ಮಾರುಟ್ಟೆಯಲ್ಲಿ ಖರೀದಿಗೆ ಲಭ್ಯವಿವೆ. ಇಕಾಮರ್ಸ್ ತಾಣ ಅಮೆಜಾನ್.ಇನ್ ಹಾಗೂ ನೋಕಿಯಾ.ಕಾಮ್ನಲ್ಲಿ ಇವು ದೊರೆಯಲಿವೆ. ಆರಂಭಿಕ ಬೆಲೆ ₹ 3599 ಆಗಿದ್ದು, ಒಂದು ವರ್ಷದ ವಾರೆಂಟಿ ಇರಲಿದೆ.
ಈ ಬಡ್ಗಳು ಪ್ರೀಮಿಯಮ್ ನೊರ್ಯಾಡಿಕ್ ವಿನ್ಯಾಸವನ್ನು ಹೊಂದಿದ್ದು ಬಿಳಿ ಮತ್ತು ಕಪ್ಪು ಬಣ್ಣಗಳಲ್ಲಿ ಲಭ್ಯವಿರುತ್ತದೆ. ಹೊರಾಂಗಣದಲ್ಲೂ ಪರಿಪೂರ್ಣ ಆರಾಮದಾಯಕ ಮತ್ತು ಸ್ಪಷ್ಟವಾಗಿ ಆಲಿಸುವಂತಹ ತಂತ್ರಜ್ಞಾನ ಈ ಬಡ್ಸ್ಗಳಲ್ಲಿ ಇದೆ.
35 ಗಂಟೆಗಳ ಪ್ಲೇ ಟೈಮ್ ಮತ್ತು ಐಪಿಎಕ್ಸ್7 ನೀರು ನಿರೋಧಕ ರೇಟಿಂಗ್ ಇರುವುದರಿಂದ ಹೊರಾಂಗಣದಲ್ಲಿ ಮಳೆ ಹಾಗೂ ಬೆವರಿನ ವಾತಾವರಣದಲ್ಲೂ ಈ ಬಡ್ಗಳು ಸುರಕ್ಷಿತವಾಗಿರಲಿವೆ.
ಗರಿಷ್ಠ 2 ದಿನಗಳವರೆಗೂ ಬ್ಯಾಟರಿ ಬಾಳಿಕೆ ಬರಲಿದೆ. 5.4 ಬ್ಲೂಟೂತ್ ವೈಶಿಷ್ಟ್ರ ಸ್ಪಷ್ಟವಾಗಿ ಧ್ವನಿ ಆಲಿಸಲು ಪೂರಕವಾಗಿದೆ ಎಂದು ತಯಾರಿಕೆ ಮೆನುವಿನಲ್ಲಿ ಬರೆಯಲಾಗಿದೆ. ಪ್ರಕೃತಿಯ ಮಧ್ಯೆ ಸೈಕ್ಲಿಂಗ್ ಹಾಗೂ ಜಾಗಿಂಗ್ ಮಾಡುವ ಸಮಯದಲ್ಲೂ ಸಂಗೀತ ಆಲಿಸಬಹುದು.
ಭಾರತದಲ್ಲಿ ಹೊಸ ನೋಕಿಯಾ ಪವರ್ ಈಯರ್ ಬಡ್ ಲೈಟ್ ಬಿಡುಗಡೆ ಮಾಡಲು ನಮಗೆ ಸಂತೋಷವಾಗುತ್ತಿದೆ ಎಂದು ಎಚ್ಎಂಡಿ ಗ್ಲೋಬಲ್ನ ಉಪಾಧ್ಯಕ್ಷ ಸುಮೀತ್ ಸಿಂಗ್ ಕೊಚಾರ್ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗೆ: www.nokia.com/phones ಅಥವಾ www.amazon.in ನೋಡಬಹುದು.

