Dailyhunt
ಆನ್‌ಲೈನ್ ರಮ್ಮಿ ನಿಷೇಧ: ಸರ್ಕಾರದ ಆದೇಶ ರದ್ದುಪಡಿಸಿದ ಕೇರಳ ಹೈಕೋರ್ಟ್‌

ಆನ್‌ಲೈನ್ ರಮ್ಮಿ ನಿಷೇಧ: ಸರ್ಕಾರದ ಆದೇಶ ರದ್ದುಪಡಿಸಿದ ಕೇರಳ ಹೈಕೋರ್ಟ್‌

ಕೊಚ್ಚಿ: ಆನ್‌ಲೈನ್ ರಮ್ಮಿಯನ್ನು ನಿಷೇಧಿಸುವ ಕೇರಳ ರಾಜ್ಯ ಸರ್ಕಾರದ ಆದೇಶವನ್ನು ಹೈಕೋರ್ಟ್ ಸೋಮವಾರ ರದ್ದುಪಡಿಸಿದ್ದು, ಸರ್ಕಾರ ಹೇಳುವಂತೆ ಇದು ಜೂಜಾಟಕ್ಕೆ ಸಮನಾದುದು ಅಲ್ಲ ಎಂದು ಹೇಳಿದೆ.

ನ್ಯಾಯಮೂರ್ತಿ ಟಿ.ಆರ್. ರವಿ ಅವರು ಕೇರಳ ಸರ್ಕಾರದ ನಿರ್ಧಾರ ರದ್ದುಪಡಿಸಿದರು ಹಾಗೂ ಸರ್ಕಾರದ ಆದೇಶ ಅಸಾಂವಿಧಾನಿಕ ಎಂದು ಅಭಿಪ್ರಾಯಪಟ್ಟರು.

ಆನ್‌ಲೈನ್ ರಮ್ಮಿಯನ್ನು ನಿಷೇಧಿಸುವ ರಾಜ್ಯ ಸರ್ಕಾರದ ಅಧಿಸೂಚನೆಯ ವಿರುದ್ಧ ಹಲವು ಆನ್‌ಲೈನ್ ಗೇಮಿಂಗ್ ಕಂಪನಿಗಳು ಸಲ್ಲಿಸಿದ ಅರ್ಜಿಗಳನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಈ ತೀರ್ಪು ನೀಡಿದ್ದಾರೆ.

ಆನ್‌ಲೈನ್ ರಮ್ಮಿ ಜೂಜಾಟಕ್ಕೆ ಸಮ. ಹೀಗಾಗಿ ಈ ಆಟವನ್ನು ನಿಷೇಧಿಸಲಾಗಿದೆ ಎಂದು ರಾಜ್ಯ ಸರ್ಕಾರ ಹೇಳಿತ್ತು. ಭೌತಿಕ ಸ್ವರೂಪದ ಕಾರ್ಡ್ ಆಟಕ್ಕೆ ಅನುಮತಿ ನೀಡಿರುವಾಗ ಆನ್‌ಲೈನ್ ರಮ್ಮಿ ಆಟ ಆಡುವುದನ್ನು ನಿಷೇಧಿಸುವುದು ಸರಿಯಲ್ಲ ಎಂದು ಗೇಮಿಂಗ್ ಕಂಪನಿಗಳು ವಾದಿಸಿದ್ದವು.

Dailyhunt
Disclaimer: This content has not been generated, created or edited by Dailyhunt. Publisher: Prajavani