Dailyhunt Logo
  • Light mode
    Follow system
    Dark mode
    • Play Story
    • App Story

ಆಯನಿಮೇಷನ್‌ ತಂತ್ರಜ್ಞಾನ ಸಹಕಾರ ವೃದ್ಧಿಗೆ ಒಪ್ಪಂದ: ಸಚಿವ ಖರ್ಗೆ

ಬೆಂಗಳೂರು: ಆಯನಿಮೇಷನ್‌ ಮತ್ತು ಸೃಜನಶೀಲ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಸಹಕಾರ ವೃದ್ಧಿಗೆ ರಾಜ್ಯ ಸರ್ಕಾರ ಮತ್ತು ಫಿನ್‌ಲ್ಯಾಂಡ್‌ನ ಕಂಪನಿಗಳ ಮಧ್ಯೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದ್ದಾರೆ.

ಪತ್ರಿಕಾ ಪ್ರಕಟಣೆ ನೀಡಿರುವ ಅವರು, 'ಕರ್ನಾಟಕ ಇನ್ನೋವೇಷನ್ ಆಯಂಡ್ ಟೆಕ್ನಾಲಜಿ ಸೊಸೈಟಿ (ಕೆಐಟಿಎಸ್) ಹಾಗೂ ಫಿನ್‌ಲ್ಯಾಂಡ್‌ನ ಬಿಸಿನೆಸ್ ಟ್ಯಾಂಪೆರೆ ಸಂಸ್ಥೆಗಳು ಒಪ್ಪಂದಕ್ಕೆ ಸಹಿ ಹಾಕಿವೆ' ಎಂದು ಮಾಹಿತಿ ನೀಡಿದ್ದಾರೆ.

'ಕರ್ನಾಟಕದ ತಂತ್ರಜ್ಞಾನ ಮತ್ತು ನಾವೀನ್ಯತೆ ವಲಯವನ್ನು ಸಾಂಪ್ರದಾಯಿಕ ಐಟಿ ಕ್ಷೇತ್ರಗಳಾಚೆಗೆ ವಿಸ್ತರಿಸಿ, ಜಾಗತಿಕ ಕ್ರಿಯೇಟಿವ್ ಟೆಕ್ನಾಲಜಿ ಕೇಂದ್ರವಾಗಿ ರೂಪಿಸುವ ನಿಟ್ಟಿನಲ್ಲಿ ಈ ಒಪ್ಪಂದ ಮಹತ್ವದ್ದಾಗಿದೆ' ಎಂದಿದ್ದಾರೆ.

'ಗ್ಲೋಬಲ್ ಇನ್ನೋವೇಷನ್ ಅಲಯನ್ಸ್ (ಜಿಐಎ) ಉಪಕ್ರಮದಡಿ ರೂಪಿಸಲಾಗುತ್ತಿರುವ ಈ ಸಹಯೋಗವು ಕರ್ನಾಟಕ ಮತ್ತು ಟ್ಯಾಂಪೆರೆ ನಡುವೆ ಜಾಗತಿಕ ಕ್ರಿಯೇಟಿವ್ ಎಕಾನಮಿ ಕಾರಿಡಾರ್ ನಿರ್ಮಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ. ಎರಡೂ ಪ್ರದೇಶಗಳಲ್ಲಿರುವ ಸೃಜನಶೀಲ ತಂತ್ರಜ್ಞಾನ ಉದ್ಯಮಗಳ ಸಾಮರ್ಥ್ಯಗಳನ್ನು ಒಗ್ಗೂಡಿಸಿ, ನವೋದ್ಯಮಗಳು, ಹೂಡಿಕೆದಾರರು, ವಿಶ್ವವಿದ್ಯಾಲಯಗಳು ಹಾಗೂ ಸಂಶೋಧನಾ ಸಂಸ್ಥೆಗಳ ನಡುವೆ ಅಂತರರಾಷ್ಟ್ರೀಯ ಸಂಪರ್ಕ ಮತ್ತು ಸಹಭಾಗಿತ್ವಕ್ಕೆ ವೇದಿಕೆ ಕಲ್ಪಿಸುವುದು ಇದರ ಪ್ರಮುಖ ಉದ್ದೇಶವಾಗಿದೆ' ಎಂದು ವಿವರಿಸಿದ್ದಾರೆ.

261104-51-1037086766

Dailyhunt
Disclaimer: This content has not been generated, created or edited by Dailyhunt. Publisher: Prajavani