Dailyhunt Logo
  • Light mode
    Follow system
    Dark mode
    • Play Story
    • App Story
ಆಯ್ಕೆ ಟ್ರಯಲ್ಸ್ ಚಿತ್ರೀಕರಣ: ಮಾಂಡವೀಯ ಸೂಚನೆ

ಆಯ್ಕೆ ಟ್ರಯಲ್ಸ್ ಚಿತ್ರೀಕರಣ: ಮಾಂಡವೀಯ ಸೂಚನೆ

ವದೆಹಲಿ: ಏಷ್ಯನ್ ಗೇಮ್ಸ್‌ನಂಥ ಪ್ರಮುಖ ಕ್ರೀಡಾಕೂಟಗಳಿಗೆ ಟ್ರಯಲ್ಸ್ ನಡೆಸುವಾಗ ಅದರ ವಿಡಿಯೊ ಚಿತ್ರೀಕರಣ ನಡೆಸುವ ಅಗತ್ಯವನ್ನು ಒತ್ತಿಹೇಳಿರುವ ಕ್ರೀಡಾ ಸಚಿವ ಮನ್ಸುಖ್ ಮಾಡವೀಯ, ವಿದೇಶಿ ತರಬೇತುದಾರರ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಬೇಕು ಎಂದು ರಾಷ್ಟ್ರೀಯ ಕ್ರೀಡಾ ಫೆಡರೇಷನ್‌ಗಳಿಗೆ (ಎನ್‌ಎಸ್‌ಎಫ್‌) ಶುಕ್ರವಾರ ಸೂಚಿಸಿದರು.

ಇಲ್ಲಿ ನಡೆದ ಶೃಂಗಸಭೆಯ ವೇಳೆ ಎನ್‌ಎಸ್‌ಎಫ್‌ಗಳ ಕಾರ್ಯವೈಖರಿಯ ಬಗ್ಗೆ ಸಚಿವರು ಅವಲೋಕನ ನಡೆಸಿದರು. ಈ ಸಭೆಯಲ್ಲಿ ಕ್ರೀಡಾ ಖಾತೆ ರಾಜ್ಯ ಸಚಿವೆ ರಕ್ಷಾ ಖಡ್ಸೆ, ಕ್ರೀಡಾ ಇಲಾಖೆ ಕಾರ್ಯದರ್ಶಿ ಹರಿ ರಂಜನ್ ರಾವ್ ಮತ್ತು ಭಾರತ ಕ್ರೀಡಾ ಪ್ರಾಧಿಕಾರದ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.

ವೀಕ್ಷಕರ ಸಮ್ಮುಖದಲ್ಲಿ ಓಪನ್‌ ಆಯ್ಕೆ ಟ್ರಯಲ್ಸ್‌ನ ವಿಡಿಯೊ ಚಿತ್ರೀಕರಣ ನಡೆಸಬೇಕು. ಆಯ್ಕೆ ಟ್ರಯಲ್ಸ್‌ನಲ್ಲಿ ಪಾರದರ್ಶಕತೆ ಕಾಪಾಡುವಲ್ಲಿ ಯಾವುದೇ ರಾಜಿ ಮಾಡಿಕೊಳ್ಳಬಾರದು ಎಂದು ಸಚಿವರು ಹೇಳಿದರು. ಉತ್ತಮ ದೇಶಿ ಕೋಚ್‌ಗಳನ್ನು ಕಂಡುಕೊಳ್ಳುವಂಥ ವಾತಾವರಣ ನಿರ್ಮಿಸಬೇಕು ಎಂದರು. ಶೂಟಿಂಗ್ ಮತ್ತು ಬಾಕ್ಸಿಂಗ್‌ ತರಬೇತಿಯಲ್ಲಿ ವಿದೇಶಿ ಕೋಚ್‌ಗಳು ಈಗ ಪ್ರಮುಖ ನಿರ್ಣಯಗಳನ್ನು ಕೈಗೊಳ್ಳುತ್ತಿದ್ದಾರೆ.

ಭಾರತದ ಕ್ರೀಡೆಯಲ್ಲಿ ಡೋಪಿಂಗ್ ಪಿಡುಗನ್ನು ಮಟ್ಟಹಾಕಲು ಸಮಗ್ರ ಕಾರ್ಯತಂತ್ರ ರೂಪಿಸಬೇಕಾಗಿದೆ ಎಂದು ಮಾಂಡವೀಯ ಹೇಳಿದರು.

Dailyhunt
Disclaimer: This content has not been generated, created or edited by Dailyhunt. Publisher: Prajavani