Dailyhunt Logo
  • Light mode
    Follow system
    Dark mode
    • Play Story
    • App Story
ಅಫ್ಗನ್: ನಗರದ ಮುಖ್ಯಚೌಕದಲ್ಲಿ ಮೃತದೇಹ ನೇತುಹಾಕಿದ ತಾಲಿಬಾನ್

ಅಫ್ಗನ್: ನಗರದ ಮುಖ್ಯಚೌಕದಲ್ಲಿ ಮೃತದೇಹ ನೇತುಹಾಕಿದ ತಾಲಿಬಾನ್

ಕಾಬೂಲ್: ಪಶ್ಚಿಮ ಅಫ್ಗಾನಿಸ್ತಾನದ ಹೆರಾತ್ ನಗರದ ಮುಖ್ಯ ಚೌಕದಲ್ಲಿ ಕ್ರೇನ್‌ನಿಂದ ತಾಲಿಬಾನ್‌ಗಳು ಮೃತದೇಹವೊಂದನ್ನು ನೇಣು ಹಾಕಿದ್ದಾರೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಶನಿವಾರ ತಿಳಿಸಿದ್ದಾರೆ.

'ಕ್ರೇನ್‌ನಲ್ಲಿ ನಾಲ್ಕು ಮೃತದೇಹಗಳನ್ನು ತರಲಾಯಿತು.

ಒಂದನ್ನು ಇಲ್ಲಿ ಹಾಕಿ, ಉಳಿದ ಮೂರು ಮೃತದೇಹಗಳನ್ನು ನಗರದ ಇತರೆಡೆ ಇರುವ ಚೌಕಗಳ ಕಡೆಗೆ ಒಯ್ಯಲಾಯಿತು' ಎಂದು ಚೌಕದ ಬಳಿ ಔಷಧಿ ಅಂಗಡಿಯನ್ನು ನಡೆಸುವ ಅಹಮದ್ ಸಿದ್ಧಿಕಿ ಅವರು ಮಾಹಿತಿ ನೀಡಿದ್ದಾರೆ.

'ಈ ನಾಲ್ವರು ಅಪಹರಣಕ್ಕೆ ಪ್ರಯತ್ನಿಸಿದ್ದರು. ಹಾಗಾಗಿ, ಅವರನ್ನು ಪೊಲೀಸರು ಹತ್ಯೆ ಮಾಡಿದ್ದಾರೆ ಎಂದು ತಾಲಿಬಾನ್ ಘೋಷಿಸಿದೆ' ಎಂದೂ ಅವರು ತಿಳಿಸಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Prajavani