Dailyhunt Logo
  • Light mode
    Follow system
    Dark mode
    • Play Story
    • App Story
ಅಕ್ಟೋಬರ್ 11ರಿಂದ ರಣಜಿ ಟ್ರೋಫಿ: ದೇಶಿ ಕ್ರಿಕೆಟ್ ವೇಳಾಪಟ್ಟಿ ಪ್ರಕಟಿಸಿದ ಬಿಸಿಸಿಐ

ಅಕ್ಟೋಬರ್ 11ರಿಂದ ರಣಜಿ ಟ್ರೋಫಿ: ದೇಶಿ ಕ್ರಿಕೆಟ್ ವೇಳಾಪಟ್ಟಿ ಪ್ರಕಟಿಸಿದ ಬಿಸಿಸಿಐ

ವದೆಹಲಿ (ಪಿಟಿಐ): ದೇಶಿ ಕ್ರಿಕೆಟ್‌ನ ಸಾರ್ವಭೌಮ ತಂಡವನ್ನು ನಿರ್ಧರಿಸಲಿರುವ ರಣಜಿ ಟ್ರೋಫಿ ಟೂರ್ನಿಯು ಅಕ್ಟೋಬರ್ 11ರಂದು ಆರಂಭವಾಗಲಿದ್ದು ಈ ಬಾರಿಯೂ ಎರಡು ಹಂತಗಳಲ್ಲಿ ನಡೆಯಲಿದೆ. 2026-27ನೇ ಸಾಲಿನ ದೇಶಿ ಕ್ರಿಕೆಟ್‌ ಋತು ಆಗಸ್ಟ್‌ 23ರಂದು ದುಲೀಪ್ ಟ್ರೊಫಿ ಟೂರ್ನಿಯೊಂದಿಗೆ ಆರಂಭವಾಗಲಿದೆ ಎಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಬುಧವಾರ ಪ್ರಕಟಿಸಿದೆ.

ವಯೋವರ್ಗ (16, 19 ಮತ್ತು 23 ವರ್ಷದೊಳಗಿನವರು) ಮತ್ತು ಸೀನಿಯರ್ ವಿಭಾಗಗಳಲ್ಲಿ ಮಂಡಳಿಯು ಒಟ್ಟು 1,788 ಪಂದ್ಯಗಳನ್ನು ಆಯೋಜಿಸಲಿದೆ. ಇದರಲ್ಲಿ ಮಹಿಳೆಯರ ವಿಭಾಗದ 15, 19 ಮತ್ತು 23 ವರ್ಷದೊಳಗಿನವರ, ಸೀನಿಯರ್ ವಿಭಾಗದ ಪಂದ್ಯಗಳು ಒಳಗೊಂಡಿವೆ.

ಸಮಯದ ಇತಿಮಿತಿ ಗಮನದಲ್ಲಿಟ್ಟುಕೊಂಡು 23 ವರ್ಷದೊಳಗಿನವರ ನಿಯಮಿತ ಓವರುಗಳ ಟೂರ್ನಿ, ವಿಝಿ ಟ್ರೋಫಿ ಅಂತರ ವಲಯ ವಿಶ್ವವಿದ್ಯಾಲಯಗಳ ಕ್ರಿಕೆಟ್‌ ಟೂರ್ನಿಗಳನ್ನು ಟಿ20 ಮಾದರಿಯಲ್ಲಿ ನಡೆಸಲು ನಿರ್ಧರಿಸಲಾಗಿದೆ.

ರಣಜಿ ಟ್ರೋಫಿಯ ಮೊದಲ ಹಂತ ನಡೆದ ಬಳಿಕ ರಾಷ್ಟ್ರೀಯ ಟಿ20 ಟೂರ್ನಿಯಾದ ಸೈಯ್ಯದ್ ಮುಷ್ತಾಕ್ ಅಲಿ ಟ್ರೋಫಿ (ಎಸ್‌ಎಂಎಟಿ) ಮತ್ತು ವಿಜಯ್ ಹಜಾರೆ ಟ್ರೋಫಿ ಏಕದಿನ ಟೂರ್ನಿಗಳು ನಡೆಯಲಿವೆ. ಈ ಎರಡು ಟೂರ್ನಿಗಳ ಬಳಿಕ ರಣಜಿ ಟ್ರೋಫಿ ಎರಡನೇ ಹಂತ ನಡೆಯಲಿದೆ.

16 ವರ್ಷದೊಳಗಿನವರಿಗೆ ನಡೆಯುವ ವಿಜಯ್ ಮರ್ಚೆಂಟ್‌ ಟ್ರೋಫಿ ನವೆಂಬರ್‌ನಿಂದ ಜನವರಿ ಅವಧಿಯಲ್ಲಿ ನಡೆಯಲಿದೆ. ಹೀಗಾಗಿ ಹಿಂದಿಗಿಂತ ಸುಧಾರಿತ ರೀತಿಯಲ್ಲಿ ವೇಳಾಪಟ್ಟಿ ರೂಪಿಸಲು ಮತ್ತು ಸಿದ್ಧತೆಗೆ ಅನುಕೂಲವಾಗಿದೆ. ಶಾಲಾ ಕ್ರಿಕೆಟಿಗರಿಗೆ ವಾರ್ಷಿಕ ಪರೀಕ್ಷೆಗೆ ಸಿದ್ಧತೆ ನಡೆಸಲೂ ಸಮಯ ಸಿಗಲಿದೆ.

 ವಲಯ ಮಟ್ಟಕ್ಕೆ ಮರಳಿರುವ ದುಲೀಪ್ ಟ್ರೋಫಿ ಟೂರ್ನಿಯ ಎಲ್ಲ ಪಂದ್ಯಗಳು ಬೆಂಗಳೂರಿನ ಬಿಸಿಸಿಐ ಶ್ರೇಷ್ಠತಾ ಕೇಂದ್ರದಲ್ಲಿ ಆಗಸ್ಟ್‌- ಸೆಪ್ಟೆಂಬರ್‌ನಲ್ಲಿ ನಡೆಯಲಿದೆ. ಎಸ್‌ಎಂಎಟಿ ಟೂರ್ನಿಯ ಲೀಗ್ ಹಂತದ ಪಂದ್ಯಗಳು ಮುಂಬೈ, ಮೊಹಾಲಿ, ವಿಶಾಖಪಟ್ಟಣ ಮತ್ತು ಕೋಲ್ಕತ್ತ ದಲ್ಲಿ ನಡೆಯಲಿವೆ. ನಾಕೌಟ್‌ ಹಂತ ನಾಗ್ಪುರದಲ್ಲಿ ನಡೆಯಲಿದೆ.ಬೆಂಗಳೂರಿನಲ್ಲಿ ದುಲೀಪ್ ಟ್ರೋಫಿ ಪಂದ್ಯಗಳು
Dailyhunt
Disclaimer: This content has not been generated, created or edited by Dailyhunt. Publisher: Prajavani