Dailyhunt
ಅಕ್ಟೋಬರ್‌: ರಫ್ತು ಶೇ 40ರಷ್ಟು ಹೆಚ್ಚಳ

ಅಕ್ಟೋಬರ್‌: ರಫ್ತು ಶೇ 40ರಷ್ಟು ಹೆಚ್ಚಳ

ನವದೆಹಲಿ: ದೇಶದ ರಫ್ತು ವಹಿವಾಟು ಅಕ್ಟೋಬರ್‌ 1ರಿಂದ 14ರವರೆಗಿನ ಅವಧಿಯಲ್ಲಿ ಶೇಕಡ 40.5ರಷ್ಟು ಹೆಚ್ಚಳ ಆಗಿದ್ದು, ₹ 1.14 ಲಕ್ಷ ಕೋಟಿಗೆ ತಲುಪಿದೆ.

ಪೆಟ್ರೋಲಿಯಂ ಉತ್ಪನ್ನಗಳು, ಎಂಜಿನಿಯರಿಂಗ್‌ ಮತ್ತು ಔಷಧ ವಲಯಗಳ ಉತ್ತಮ ಬೆಳವಣಿಗೆಯಿಂದ ರಫ್ತು ವಹಿವಾಟು ಈ ಪ್ರಮಾಣದ ಬೆಳವಣಿಗೆ ಕಂಡಿದೆ ಎಂದು ಕೇಂದ್ರ ವಾಣಿಜ್ಯ ಸಚಿವಾಲಯವು ಪ್ರಾಥಮಿಕ ಮಾಹಿತಿ ನೀಡಿದೆ.

ಈ ಅವಧಿಯಲ್ಲಿ ಆಮದು ವಹಿವಾಟು ಶೇ 60.72ರಷ್ಟು ಹೆಚ್ಚಾಗಿ ₹ 1.11 ಲಕ್ಷ ಕೋಟಿ ಆಗಿದೆ. 2020ರ ಏಪ್ರಿಲ್‌-ಸೆಪ್ಟೆಂಬರ್‌ ಅವಧಿಗೆ ಹೋಲಿಸಿದರೆ 2021ರ ಇದೇ ಅವಧಿಯಲ್ಲಿ ರಫ್ತು ವಹಿವಾಟು ಶೇ 57.53ರಷ್ಟು ಹೆಚ್ಚಾಗಿದೆ.

Dailyhunt
Disclaimer: This content has not been generated, created or edited by Dailyhunt. Publisher: Prajavani