Dailyhunt Logo
  • Light mode
    Follow system
    Dark mode
    • Play Story
    • App Story
ಅಮೆರಿಕ | ಜನ್ಮದತ್ತ ಪೌರತ್ವ: ವಿಚಾರಣೆಗೆ ಸುಪ್ರೀಂ ಕೋರ್ಟ್‌ ಅಸ್ತು

ಅಮೆರಿಕ | ಜನ್ಮದತ್ತ ಪೌರತ್ವ: ವಿಚಾರಣೆಗೆ ಸುಪ್ರೀಂ ಕೋರ್ಟ್‌ ಅಸ್ತು

ವಾಷಿಂಗ್ಟನ್‌: ಜನ್ಮದತ್ತ ಪೌರತ್ವಕ್ಕೆ ಸಂಬಂಧಿಸಿದಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಹೊರಡಿಸಿರುವ ಆದೇಶದ ಸಾಂವಿಧಾನಿಕ ಸಿಂಧುತ್ವ ಕುರಿತು ವಿಚಾರಣೆ ನಡೆಸಲು ಇಲ್ಲಿನ ಸುಪ್ರೀಂ ಕೋರ್ಟ್‌ ಸಮ್ಮತಿಸಿದೆ.

ವಲಸಿಗರಿಗೆ ಜನಿಸುವ ಮಕ್ಕಳು ಅಮೆರಿಕದ ಪ್ರಜೆಗಳಲ್ಲ, ಹೀಗಾಗಿ ಅವರಿಗೆ ಹುಟ್ಟಿನಿಂದಲೇ ಸಿಗುತ್ತಿದ್ದ ಪೌರತ್ವದ ಹಕ್ಕನ್ನು ರದ್ದುಗೊಳಿಸಬೇಕು ಎಂಬ ಆದೇಶವನ್ನು ಟ್ರಂಪ್‌ ಹೊರಡಿಸಿದ್ದರು.

ಅಮೆರಿಕ ಸಂವಿಧಾನದ 14ನೇ ತಿದ್ದುಪಡಿಯು ಅಮೆರಿಕದಲ್ಲಿ ಜನಿಸುವ ಪ್ರತಿಯೊಬ್ಬರಿಗೂ ಜನ್ಮದತ್ತ ಪೌರತ್ವದ ಖಾತರಿ ನೀಡಿದೆ. ಹೀಗಿದ್ದರೂ ಜನ್ಮದತ್ತ ಪೌರತ್ವಕ್ಕೆ ಸಂಬಂಧಿಸಿದಂತೆ ನಿರ್ಬಂಧ ಹೇರುವುದು ಅಸಂವಿಧಾನಿಕ ನಡೆ ಎಂದು ನಿರ್ಧರಿಸಿ, ಕೆಳ ಹಂತದ ನ್ಯಾಯಾಲಯವೊಂದು ಟ್ರಂಪ್‌ ಅವರ ಆದೇಶವನ್ನು ರದ್ದುಗೊಳಿಸಿತ್ತು.

ಕೆಳ ಹಂತದ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ, ಟ್ರಂಪ್‌ ಸುಪ್ರೀಂ ಮೆಟ್ಟಿಲೇರಿದ್ದರು. ಇದೀಗ ಅವರ ಅರ್ಜಿಯನ್ನು ಆಲಿಸಲು ಸುಪ್ರೀಂ ಕೋರ್ಟ್ ಸಮ್ಮತಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಅಂತಿಮ ತೀರ್ಪು ಜೂನ್‌ ವೇಳೆಗೆ ಹೊರಬೀಳುವ ನಿರೀಕ್ಷೆ ಇದೆ.

Dailyhunt
Disclaimer: This content has not been generated, created or edited by Dailyhunt. Publisher: Prajavani