ಟೆಹರಾನ್: ನಮ್ಮ ಮೇಲೆ ಅಮೆರಿಕದ ಆಕ್ರಮಣಕಾರಿ ಕೃತ್ಯಗಳು ನಿಲ್ಲುವವರೆಗೂ ಹೊರ್ಮುಜ್ ಜಲಸಂಧಿಯು ಮುಚ್ಚಿರಲಿದೆ ಎಂದು ಇರಾನ್‌ನ ರೆವಲ್ಯೂಷನರಿ ಗಾರ್ಡ್ ಹೇಳಿದೆ ಎಂದು ಇರಾನ್‌ನ ಸರ್ಕಾರಿ ದೂರದರ್ಶನ ವಾಹಿನಿ ಐಆರ್‌ಐಬಿ ವರದಿ ಮಾಡಿದೆ.
ಪಶ್ಚಿಮ ಏಷ್ಯಾ ಭಾಗದಲ್ಲಿ ಅಮೆರಿಕವು ಮತ್ತೆ ದಾಳಿ ನಡೆಸುತ್ತಿರುವ ಬೆನ್ನಲ್ಲೇ, ಎಲ್ಲ ತೈಲ ಸರಬರಾಜು ಮಾರ್ಗಗಳನ್ನು ಹಿಡಿತಕ್ಕೆ ತೆಗೆದುಕೊಳ್ಳುತ್ತೇವೆ.
ನಮ್ಮ ಇಂಧನವು ಎಲ್ಲರಿಗೂ ಸಿಗಬೇಕು ಇಲ್ಲದಿದ್ದರೆ ಯಾರಿಗೂ ಸಿಗಬಾರದು ಎಂದು ಎಚ್ಚರಿಕೆ ನೀಡಿದೆ.
ಇರಾನ್ ಮೇಲೆ ಅಮೆರಿಕ ದಾಳಿ ನಡೆಸಿದ ನಂತರ, ಬಹರೇನ್ ಮತ್ತು ಕುವೈತ್‌ನಲ್ಲಿರುವ ಅವರ ಸೇನಾ ನೆಲೆಗಳ ಮೇಲೆ ನಾವು ದಾಳಿ ನಡೆಸಿದ್ದೇವೆ ಎಂದು ಹೇಳಿದೆ.
ಅಮೆರಿಕ ಮತ್ತು ಇರಾನ್ ಸಂಘರ್ಷದಿಂದ ಹೊರ್ಮುಜ್ ಜಲಸಂಧಿಯಲ್ಲಿನ ಇಂಧನ ಸಾಗಾಟಕ್ಕೆ ತೊಂದರೆಯಾಗುತ್ತಿದ್ದು, ಜಾಗತಿಕ ತೈಲ ಕೊರತೆಗೆ ಕಾರಣವಾಗಿದೆ.
ಹೊರ್ಮುಜ್ ಜಲಸಂಧಿಯ ಮೂಲಕ ಸಾಗುವ ಸರಕು ಸಾಗಣೆ ಹಡಗುಗಳ ಮೇಲೆ ಶೇ 20ರಷ್ಟು ಶುಲ್ಕ ವಿಧಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದರು. ಆದರೆ, ಆ ಆದೇಶವನ್ನು ಒಂದೇ ದಿನದಲ್ಲಿ ಹಿಂಪಡೆದಿದ್ದಾರೆ. ಇದರ ನಡುವೆಯೇ ಇರಾನ್‌ನ ಸೇನಾ ನೆಲೆಗಳ ಮೇಲೆ ದಾಳಿ ಮಾಡಿರುವುದಾಗಿ ಅಮೆರಿಕ ಸೇನೆಯ ಸೆಂಟ್ರಲ್ ಕಮಾಂಡ್ ತಿಳಿಸಿದೆ.

