Saturday, 28 Nov, 3.55 pm ಪ್ರಜಾವಾಣಿ

ಜಿಲ್ಲೆ
ಅಂಗನವಾಡಿ ಕಾರ್ಯಕರ್ತೆಯರಿಗೆ ಸ್ಮಾರ್ಟ್‌ ಫೋನ್‌ ವಿತರಣೆ

ರಾಯಬಾಗ:‌ 'ಅಂಗನವಾಡಿ ಕಾರ್ಯಕರ್ತೆಯರು ತಮ್ಮ ಕೇಂದ್ರದ ಕಾರ್ಯ ಚಟುವಟಿಕೆಗಳ ಮಾಹಿತಿಯನ್ನು ಪ್ರತಿ ದಿನ ಕಳುಹಿಸಲು ಸರ್ಕಾರದಿಂದ ಸ್ಮಾರ್ಟ್ ಫೋನ್‌ಗಳನ್ನು ವಿತರಿಸಲಾಗುತ್ತಿದೆ. ಅದನ್ನು ಸದ್ಬಳಕೆ ಮಾಡಿಕೊಳ್ಳಬೇಕು' ಎಂದು ಶಾಸಕ ಡಿ.ಎಂ. ಐಹೊಳೆ ಹೇಳಿದರು.

ಇಲ್ಲಿನ ತಮ್ಮ ನಿವಾಸದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಸ್ಮಾರ್ಟ್‌ ಫೋನ್‌ಗಳನ್ನು ಕಾರ್ಯಕರ್ತೆಯರಿಗೆ ವಿತರಿಸಿ ಅವರು ಮಾತನಾಡಿದರು.

'ಕೊರೊನಾ ಸಂಕಷ್ಟದಲ್ಲೂ ಜೀವದ ಹಂಗು ತೊರೆದು ಕಾರ್ಯಕರ್ತೆಯರು ನಿರ್ವಹಿಸಿದ ಕಾರ್ಯವನ್ನು ಸರ್ಕಾರ ಮೆಚ್ಚುಗೆ ವ್ಯಕ್ತಪಡಿಸಿ ಹೆಚ್ಚಿನ ಜವಾಬ್ದಾರಿ ನೀಡಿದೆ' ಎಂದರು.

ಸಿಡಿಪಿಒ ಸಂತೋಷ ಕಾಂಬಳೆ, ಪೋಷಣ್‌ ಅಭಿಯಾನದ ಸಂಯೋಜಕ ಅನ್ನಪೂರ್ಣಾ ಘಟನಟ್ಟಿ, ಲಖನ್ ದುಂಡಗಿ, ಮೇಲ್ವಿಚಾರಕಿಯರಾದ ಎಸ್.ಎಸ್. ಪಾಟೀಲ, ಎಸ್.ಎಸ್. ದೊಡಮನಿ, ಇಂದಿರಾ ಅಸ್ಕಿ, ಜಿ.ಕೆ. ಕಾಂಬಳೆ, ಉಮಾ ಗಡಕರಿ, ಮಹಾದೇವಿ ತರಾಳ, ಶಾಜಾದ ಜಮಾದಾರ, ಭಾರತಿ ಮುರನಾಳ, ಶೀಲಾ ಕುಲಕರ್ಣಿ, ಶ್ರೀದೇವಿ ಜಾಧವ, ಅರ್ಚನಾ ಕುಲಕರ್ಣಿ ಇದ್ದರು.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Prajavani
Top