ಅಂಕೋಲಾ: ರಾಷ್ಟ್ರೀಯ ಹೆದ್ದಾರಿ 66ರ ಅಂಕೋಲಾ-ಕಾರವಾರ ಮಾರ್ಗ ಮಧ್ಯೆ ಹಾರವಾಡ ಕ್ರಾಸ್ ಸಮೀಪ ಗುರುವಾರ ಖಾಸಗಿ ಬಸ್ ಪಲ್ಟಿಯಾದ ಪರಿಣಾಮ 20ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯವಾಗಿದೆ.
ಬೆಂಗಳೂರಿನಿಂದ ಕಾರವಾರದತ್ತ ತೆರಳುತ್ತಿದ್ದ ಬಸ್, ಅವರ್ಸಾ ಗಡಿ ಪ್ರದೇಶದ ಕಿರು ಸೇತುವೆ ಅಂಚಿನ ತಗ್ಗು ಪ್ರದೇಶದ ಬಳಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ತಗ್ಗು ಪ್ರದೇಶಕ್ಕೆ ಪಲ್ಟಿಯಾಗಿದೆ.
ಘಟನೆಯ ಬಳಿಕ ಸ್ಥಳೀಯರು ಹಾಗೂ ಇತರರು ತಕ್ಷಣ ನೆರವಿಗೆ ಧಾವಿಸಿದ್ದು, 1033 ಎನ್‌ಎಚ್‌ಎಐ ಆಂಬುಲೆನ್ಸ್ ಮೂಲಕ ಕೆಲ ಗಾಯಾಳುಗಳನ್ನು ಅಂಕೋಲಾ ತಾಲ್ಲೂಕು ಆಸ್ಪತ್ರೆಗೆ ತುರ್ತು ಚಿಕಿತ್ಸೆಗೆ ಸಾಗಿಸಲಾಗಿದೆ.

