ಬೆಳಗಾವಿ: ಬಿಜೆಪಿ ಬೆಳಗಾವಿ ಗ್ರಾಮೀಣ ಮಂಡಳ ಅಧ್ಯಕ್ಷ ಧನಂಜಯ ಜಾಧವ ಅವರ ನೇತೃತ್ವದಲ್ಲಿ ಪಕ್ಷದ ಕಾರ್ಯಕರ್ತರು, ಕೋವಿಡ್‌ನಿಂದ ಮೃತರಾದ ವ್ಯಕ್ತಿಯ ಅಂತ್ಯಕ್ರಿಯೆ ನೆರವೇರಿಸಿ ಅಸಹಾಯಕ ಕುಟುಂಬಕ್ಕೆ ನೆರವಾಗಿದ್ದಾರೆ.
ತಾಲ್ಲೂಕಿನ ಅಂಬೆವಾಡಿಯ 40 ವರ್ಷದ ವ್ಯಕ್ತಿ ಮೃತ. ಅವರ ಕುಟುಂಬದವರು ಧನಂಜಯ ಅವರಿಗೆ ಕರೆ ಮಾಡಿ ಸಹಾಯ ಕೋರಿದ್ದರು. ಸ್ಪಂದಿಸಿದ ಅವರು ಮಿತಿಲ ಜಾಧವ, ಸಾಯಿನಾಥ ಪಾಟೀಲ, ಲೋಕೇಶ ರಜಪೂತ, ಬಾಳು ಪಾಟೀಲ, ಪ್ರವೀಣ ಸಂತಾಜಿ ಮೊದಲಾದ ಕಾರ್ಯಕರ್ತರ ಜೊತೆ ಸೇರಿ ನೆರವಾಗಿದ್ದಾರೆ. ಶವ ಸಾಗಿಸುವ ವಾಹನದ ಉಚಿತ ಸೇವೆ ಒದಗಿಸಿ, ಕೋವಿಡ್ ನಿಯಮಗಳನ್ನು ಪಾಲಿಸಿ ಹಿಂದೂ ವಿಧಿ-ವಿಧಾನಗಳ ಪ್ರಕಾರ ಅಂಬೆವಾಡಿ ಗ್ರಾಮದ ಸ್ಮಶಾನದಲ್ಲಿ ಅಂತ್ಯಕ್ರಿಯೆ ನೆರವೇರಿಸಿದ್ದಾರೆ.
ಬುಧವಾರ ರಾತ್ರಿ 11ರ ಸುಮಾರಿಗೆ ಮೆಟಗುಡ್ಡ ಆಸ್ಪತ್ರೆಯಲ್ಲಿ ಕೋವಿಡ್‌ನಿಂದ ಮೃತಪಟ್ಟ ಬಸವನಕುಡಚಿ ಮೂಲಕ ವ್ಯಕ್ತಿಯ ಅಂತ್ಯಸಂಸ್ಕಾರವನ್ನು ನೆರವೇರಿಸಿದ್ದಾರೆ.

