Dailyhunt Logo
  • Light mode
    Follow system
    Dark mode
    • Play Story
    • App Story
ಅರಾಜಕತೆ ಸೃಷ್ಟಿಗೆ ರಾಹುಲ್ ಗಾಂಧಿ ಯತ್ನ: ವಿಜಯೇಂದ್ರ

ಅರಾಜಕತೆ ಸೃಷ್ಟಿಗೆ ರಾಹುಲ್ ಗಾಂಧಿ ಯತ್ನ: ವಿಜಯೇಂದ್ರ

ಗದಗ: 'ರಾಹುಲ್ ಗಾಂಧಿ ಅವರು ಸಾಂವಿಧಾನಿಕ ಸಂಸ್ಥೆಗಳ ಮೇಲೆ ದಾಳಿ ನಡೆಸಿ, ದೇಶದಲ್ಲಿ ಅರಾಜಕತೆ ಸೃಷ್ಟಿಗೆ ಪ್ರಯತ್ನಿಸುತ್ತಿದ್ದಾರೆ' ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಆರೋಪಿಸಿದರು.

'ರಾಹುಲ್ ಗಾಂಧಿ ಅವರನ್ನು ಖುಷಿಪಡಿಸಲು ರಾಜ್ಯದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಚುನಾವಣಾ ಆಯೋಗದ ಮುಂದೆ ಧರಣಿಯ ನಾಟಕವಾಡಿದ್ದಾರೆ' ಎಂದು ಅವರು ಬುಧವಾರ ಸುದ್ದಿಗಾರರಿಗೆ ತಿಳಿಸಿರು.

'ಲಂಚ ಪಡೆಯುವಾಗ ಬಾಗಿಲು ಹಾಕಿಕೊಳ್ಳಲು ಮತ್ತು ಮೊಬೈಲ್ ಫೋನ್‌ ಸ್ವಿಚ್ ಆಫ್‌ ಮಾಡಲು ಡಿ.ಕೆ. ಶಿವಕುಮಾರ್ ಅವರೇ ಸಚಿವರಿಗೆ ಕಿವಿಮಾತು ಹೇಳಿದ್ದಾರೆ. ಇತ್ತೀಚೆಗೆ ಸರ್ಕಾರದ ಅತ್ಯುನ್ನತ ಸ್ಥಾನದಲ್ಲಿರುವ ಪ್ರಭಾವಿ ನಾಯಕರು ರಿಯಲ್ ಎಸ್ಟೇಟ್‌ ಉದ್ಯಮಿಗಳನ್ನು ತಮ್ಮಲ್ಲಿಗೆ ಕರೆಸಿಕೊಂಡು, ಮೊಬೈಲ್‌ ಫೋನ್‌ ಸ್ವಿಚ್ ಆಫ್ ಮಾಡಿಸಿ, ಲಂಚ ಕೇಳಿದ್ದಾರೆ. ಅಷ್ಟು ಮೊತ್ತ ಕೊಡಲಾಗದಿದ್ದರೆ ರಾಜ್ಯ ತೊರೆಯಲು ತಿಳಿಸಿದ್ದಾರೆ. ಇದನ್ನು ಮುಖ್ಯಮಂತ್ರಿಯವರೇ ಬಹಿರಂಗಪಡಿಸಬೇಕು' ಎಂದರು.

ಸರ್ಕಾರಿ ನೌಕರರಿಗೆ ಸಂಬಳ ನೀಡಲು ಹಣ ಇಲ್ಲ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ರಾಜ್ಯದ ಆರ್ಥಿಕ ಸ್ಥಿತಿ ಬಗ್ಗೆ ಶ್ವೇತಪತ್ರ ಹೊರಡಿಸಲಿ ಬಿ.ವೈ.ವಿಜಯೇಂದ್ರ, ಅಧ್ಯಕ್ಷ, ಬಿಜೆಪಿ ರಾಜ್ಯ ಘಟಕ

261008-51-52123410

Dailyhunt
Disclaimer: This content has not been generated, created or edited by Dailyhunt. Publisher: Prajavani