ಅರಸೀಕೆರೆ: ನಗರದಲ್ಲಿರುವ ಪುರಾತನ ಕಾಲದ ರುದ್ರಗುಡಿ ದೇವಾಲಯದ ಪುನರ್ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದ್ದು ದೇವಾಲಯದ ಮುಖ್ಯದ್ವಾರದ ಕಲ್ಲು ಕಂಬ ಪ್ರತಿಷ್ಠಾಪನೆ ನೆರೆವೇರಿತು.
ನೂರಾರು ವರ್ಷಗಳ ಇತಿಹಾಸವಿರುವ ರುದ್ರ ಗುಡಿಯಲ್ಲಿ ನೆಲೆಸಿರುವ ರುದ್ರ ದೇವರಿಗೆ ತಾಲ್ಲೂಕಿನಲ್ಲಿ ಮಾತ್ರವಲ್ಲ ರಾಜ್ಯದ ವಿವಿಧ ಜಿಲ್ಲೆಗಳಲ್ಲೂ ಭಕ್ತರಿದ್ದಾರೆ.
ಶಿಥಿಲವಸ್ಥೆಯಲ್ಲಿದ್ದ ದೇವಾಲಯವನ್ನು ತೆರವು ಮಾಡಿ ಸಂಪೂರ್ಣವಾಗಿ ಕಲ್ಲಿನಿಂದ ದೇವಾಲಯವನ್ನು ನಿರ್ಮಿಸಲು ದೇವಾಲಯದ ಸೇವಾ ಸಮಿತಿ ಹಾಗೂ ಭಕ್ತ ವೃಂದ ಮುಂದಾಗಿದೆ.
ಈ ಕುರಿತು ರುದ್ರೇಶ್ವರ ಸ್ವಾಮಿ ಸೇವಾ ಟ್ರಸ್ಟ್ ಕಾರ್ಯದರ್ಶಿ ಪ್ರಭು ಮಾತನಾಡಿ, ದೇವಾಲ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ದೇವಾಲಯದ ನಿರ್ಮಾಣಕ್ಕೆ ಹೆಚ್ಚಿನ ಧನ ಸಹಾಯದ ಅವಶ್ಯಕತೆ ಇದೆ ಎಂದರು.
ಈ ನಿಟ್ಟಿನಲ್ಲಿ ಭಕ್ತರಿಂದ ಮತ್ತಷ್ಟು ಸಹಕಾರವನ್ನು ಸೇವಾ ಸಮಿತಿ ಬಯಸಿದ್ದು, ದಾನ ಮಾಡುವ ಭಕ್ತರು ಮುಂದೆ ಬಂದು ರುದ್ರದೇವರ ಅನುಗ್ರಹಕ್ಕೆ ಪಾತ್ರರಾಗುವಂತೆ ಮನವಿ ಮಾಡಿದರು.
ಸೇವಾ ಸಮಿತಿಯ ಖಜಾಂಚಿ ಬಸವರಾಜು, ಸಮಿತಿಯ ನಾಗೇಶ್, ಹೇಮರಾಜ್, ಎಸ್. ವಿಜಯಕುಮಾರ್, ಶಿಲ್ಪಾ, ಸೌಜನ್ಯ ವಿಜಯ್, ವಿಜಯಮ್ಮ, ದೇವಸ್ಥಾನದ ಶಿಲ್ಪಿ ಕಾರ್ತಿಕ್ ಇದ್ದರು.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260623-36-813487088

