ಸ್ವಾತಂತ್ರ್ಯೋತ್ಸವವನ್ನು ಸಂಭ್ರಮದಲ್ಲಿ ನಾವಿದ್ದೇವೆ. ತ್ರಿವರ್ಣ ಧ್ವಜವನ್ನು ಹಾರಿಸಿ, ಅದಕ್ಕೊಂದು ಸಲ್ಯೂಟ್ ಹೊಡೆದು ದೇಶಾಭಿಮಾನದಿಂದ ಬೀಗಲು ಇಡಿ ದೇಶವೇ ಸಜ್ಜಾಗಿದೆ.
ಸಂಕ್ಷಿಪ್ತ ಮಾಹಿತಿ - ಪೂರ್ಣ ವಿವರಣೆಗೆ ಕ್ಲಿಕ್ ಮಾಡಿಪ್ರಮುಖ ಮುಖ್ಯಾಂಶಗಳ ಸಂಕ್ಷಿಪ್ತ ಸಾರಾಂಶ
ಅರಿವು ಹರಿವು: ಧ್ವಜದ ಕಥನ ಬಗೆದಷ್ಟೂ ಕೌತುಕದ ಸುರುಳಿ
ಒಂದು ಸಾಲಿನಲ್ಲಿಧ್ವಜದ ಸುದೀರ್ಘ ಇತಿಹಾಸ, ಅದರ ಸಂವಹನ ಮಹತ್ವ ಮತ್ತು ಭಾರತದ ರಾಷ್ಟ್ರಧ್ವಜದ ಹಿನ್ನೆಲೆ ಕುರಿತ ಆಸಕ್ತಿದಾಯಕ ಮಾಹಿತಿಗಳ ಸಮಗ್ರ ನೋಟ.
ಏನು? ಏಕೆ? ಹೇಗೆ?
ಭಾರತದ ರಾಷ್ಟ್ರಧ್ವಜವನ್ನು ಅಧಿಕೃತವಾಗಿ ಯಾವಾಗ ಘೋಷಿಸಲಾಯಿತು?
ಭಾರತದ ರಾಷ್ಟ್ರಧ್ವಜವನ್ನು 1947ರ ಜುಲೈ 22ರಂದು ಅಧಿಕೃತವಾಗಿ ರಾಷ್ಟ್ರದ ಧ್ವಜ ಎಂದು ಘೋಷಿಸಲಾಯಿತು.
ತ್ರಿವರ್ಣ ಧ್ವಜದ ವಿನ್ಯಾಸಕಾರರು ಯಾರು?
ನಮ್ಮ ದೇಶದ ಹೆಮ್ಮೆಯ ಸಂಕೇತವಾದ ತ್ರಿವರ್ಣ ಧ್ವಜವನ್ನು ಪಿಂಗಳಿ ವೆಂಕಯ್ಯ ಅವರು ವಿನ್ಯಾಸಗೊಳಿಸಿದ್ದಾರೆ.
ಧ್ವಜಗಳನ್ನು ಮೊದಲು ಯಾವ ಉದ್ದೇಶಕ್ಕಾಗಿ ಬಳಸಲಾಗುತ್ತಿತ್ತು?
ಆರಂಭದಲ್ಲಿ ಧ್ವಜಗಳನ್ನು ಸೈನಿಕರು ತಾವು ಯಾವ ಕಡೆಗೆ ಸೇರಿದವರು ಎಂದು ಗುರುತಿಸಲು ಮತ್ತು ಸಂವಹನ ಸಾಧನವಾಗಿ ಬಳಸುತ್ತಿದ್ದರು.
ಜಗತ್ತಿನ ಅತ್ಯಂತ ಹಳೆಯ ರಾಷ್ಟ್ರಧ್ವಜ ಯಾವುದು?
1478ರಲ್ಲಿ ಡೆನ್ಮಾರ್ಕ್ ಅಳವಡಿಸಿಕೊಂಡ ಧ್ವಜವು ಜಗತ್ತಿನ ಅತ್ಯಂತ ಹಳೆಯ ರಾಷ್ಟ್ರಧ್ವಜ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಧ್ವಜಗಳು ಸಂವಹನದಲ್ಲಿ ಹೇಗೆ ನೆರವಾಗುತ್ತವೆ?
ಯುದ್ಧದಲ್ಲಿ ಶರಣಾಗತಿಯನ್ನು ಸೂಚಿಸಲು ಬಿಳಿ ಧ್ವಜ, ಅಪಾಯದ ಸಂಕೇತವಾಗಿ ಕೆಂಪು ಧ್ವಜ ಮತ್ತು ಚಾಲನೆಗೆ ಅನುಮತಿಯನ್ನು ಸೂಚಿಸಲು ಹಸಿರು ಧ್ವಜಗಳನ್ನು ಬಳಸಲಾಗುತ್ತದೆ.
ಪ್ರಮುಖ ಅಂಕಿಅಂಶಗಳು
ಕ್ರಿ.ಪೂ 3000ಧ್ವಜದ ಇತಿಹಾಸದ ಆರಂಭ1947ರ ಜುಲೈ 22ರಾಷ್ಟ್ರಧ್ವಜ ಘೋಷಣೆಯಾದ ದಿನಾಂಕ1478ಡೆನ್ಮಾರ್ಕ್ ರಾಷ್ಟ್ರಧ್ವಜ ಅಳವಡಿಸಿಕೊಂಡ ವರ್ಷ
ಎಐ ಬಳಸಿ ಸಂಸ್ಕರಿಸಲಾಗಿದೆ. ಪಿವಿ ಡಿಜಿಟಲ್ ತಂಡ ಪರಿಶೀಲಿಸಿದೆ
ಕೇಸರಿ, ಬಿಳಿ ಮತ್ತು ಹಸಿರು ಬಣ್ಣ, ಮಧ್ಯದಲ್ಲಿ ನೀಲಿ ಬಣ್ಣದ ಅಶೋಕ ಚಕ್ರದಿಂದ (ಪ್ರತಿ ಬಣ್ಣವೂ ಒಂದೊಂದು ಅರ್ಥವನ್ನು ಧ್ವನಿಸುತ್ತದೆ) ಕೂಡಿದ ಬಾವುಟವನ್ನು ನೋಡಿದ ತಕ್ಷಣ ಎದೆಯುಬ್ಬುತ್ತದೆ. ರೋಮಗಳೆಲ್ಲ ಎದ್ದು ನಿಲ್ಲುತ್ತವೆ ಅಲ್ಲವೇ? ಏಕೆಂದರೆ, ತ್ರಿವರ್ಣ ಧ್ವಜ ನಮ್ಮ ದೇಶದ ಸಂಕೇತ. ಪ್ರತಿಯೊಬ್ಬ ನಾಗರಿಕನಲ್ಲಿ ರಾಷ್ಟ್ರ ಪ್ರಜ್ಞೆಯನ್ನು ಜಾಗೃತಿಗೊಳಿಸುವ ಶಕ್ತಿ ಅದಕ್ಕಿದೆ.
1947ರ ಜುಲೈ 22ರಂದು ತ್ರಿವರ್ಣ ಧ್ವಜವನ್ನು ನಮ್ಮ ರಾಷ್ಟ್ರದ ಅಧಿಕೃತ ಧ್ವಜ ಎಂದು ಘೋಷಿಸಲಾಯಿತು. ಅದಕ್ಕೂ ಮೊದಲು ಇದ್ದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಸ್ವರಾಜ್ಯ ಧ್ವಜವನ್ನೇ ಆಧರಿಸಿ ಈ ಧ್ವಜವನ್ನು ರೂಪಿಸಲಾಗಿದೆ. ಅಂದ ಹಾಗೆ, ನಮ್ಮ ಧ್ವಜವನ್ನು ವಿನ್ಯಾಸ ಮಾಡಿದವರು ಪಿಂಗಳಿ ವೆಂಕಯ್ಯ.
ಭಾರತದಂತೆಯೇ ಎಲ್ಲ ರಾಷ್ಟ್ರಗಳೂ ತಮ್ಮದೇ ಆದ ಧ್ವಜ ಹೊಂದಿವೆ. ಅವುಗಳು ಆಯಾ ದೇಶಗಳ ರಾಷ್ಟ್ರೀಯತೆಯ ಸಂಕೇತ. ಈ ಕಾರಣಕ್ಕೆ ಅದಕ್ಕೆ ಅಷ್ಟೊಂದು ಮಹತ್ವ. ಬಹುತೇಕ ರಾಷ್ಟ್ರಗಳು ಇತ್ತೀಚೆಗೆ, ಅದರೆ ಒಂದೆರಡು ಶತಮಾನಗಳ ಹಿಂದೆಯಷ್ಟೇ ತಮ್ಮದೇ ಆದ ಧ್ವಜವನ್ನು ಅಳವಡಿಸಿಕೊಂಡಿವೆ.
ಅದಕ್ಕೂ ಮೊದಲು ಧ್ವಜಗಳು ಬೇರೆ ಬೇರೆ ಉದ್ದೇಶಗಳಿಗಾಗಿ ಬಳಕೆಯಲ್ಲಿದ್ದವು. ಧ್ವಜಗಳ ಇತಿಹಾಸ ಬಗೆದಷ್ಟೂ ಕೌತುಕದ ಸುರುಳಿಗಳು ಒಂದೊಂದೇ ತೆರೆದುಕೊಳ್ಳುತ್ತಾ ಹೋಗುತ್ತವೆ. ಅವುಗಳ ಬಗ್ಗೆ ದೊಡ್ಡ ಪ್ರಬಂಧವನ್ನೇ ಬರೆಯಬಹುದೇನೋ. ಇಲ್ಲಿ ಧ್ಜಜಗಳ ಹಿನ್ನೋಟವನ್ನು ಸಂಕ್ಷಿಪ್ತವಾಗಿ ಕಟ್ಟಿಕೊಡುವ ಪ್ರಯತ್ನ ಮಾತ್ರ ಮಾಡಲಾಗಿದೆ.
ಧ್ವಜ ಅಥವಾ ಬಾವುಟ ಅಥವಾ ಪತಾಕೆಗೆ ಸುಮಾರು ನಾಲ್ಕು ಸಾವಿರ ವರ್ಷಗಳ ಇತಿಹಾಸವಿದೆ. ಕ್ರಿ.ಪೂ 3000ರಲ್ಲಿ ಇರಾನಿನಲ್ಲಿ ಬಳಕೆಯಲ್ಲಿದ್ದ, ಲೋಹದಿಂದ ಮಾಡಿದ ಕಚ್ಚಾ ಧ್ವಜದ ಮಾದರಿ ಪತ್ತೆಯಾಗಿದೆ.
ಆಗಿನ ಕಾಲದಲ್ಲಿ ಧ್ವಜ ಎಂಬುದು ಸಂವಹನ ಸಾಧನವಾಗಿತ್ತು. ಸೈನಿಕರು ಇದನ್ನು ಹಿಡಿದಿರುತ್ತಿದ್ದರು. ಸೇನಾ ಸಿಬ್ಬಂದಿಯನ್ನು ಗುರುತಿಸಲು (ಯಾವ ಕಡೆಗೆ ಸೇರಿದವರು ಎಂದು) ಧ್ವಜ ಅಥವಾ ಪತಾಕೆಯನ್ನು ಬಳಸಲಾಗುತ್ತಿತ್ತು. ಪತಾಕೆ ಹಿಡಿದಿರುವುದನ್ನು ಪರಿಗಣಿಸಿ ಸೈನಿಕರು ವೈರಿಗಳೇ ಅಥವಾ ತಮ್ಮ ಕಡೆಯವರೇ ಎಂಬುದನ್ನು ಗುರುತಿಸುತ್ತಿದ್ದರು. ಎರಡು ಸಾವಿರ ವರ್ಷಗಳ ಹಿಂದೆ, ಧ್ವಜಗಳನ್ನು ಮತ್ತಷ್ಟು ಸಿಂಗರಿಸಲು ಬಟ್ಟೆಗಳನ್ನು ಬಳಸಲಾಯಿತು ಎಂದು ಹೇಳುತ್ತದೆ ಇತಿಹಾಸ. ಹಿಂದಿನ ಲೋಹದ ಬಾವುಟಗಳಿಗೆ ಹೋಲಿಸಿದರೆ ಇದು ಆಕರ್ಷಕವಾಗಿತ್ತು.
ಭಾರತ ಸೇರಿದಂತೆ ಜಗತ್ತಿನ ವಿವಿಧ ಕಡೆಗಳಲ್ಲಿ ಆಳಿದ ರಾಜವಂಶಗಳು ತಮ್ಮದೇ ಆದ ಧ್ವಜವನ್ನು ಹೊಂದಿದ್ದವು. ಯುದ್ಧರಂಗದ ಹೊರತಾಗಿ ನೌಕಾಯಾನದಲ್ಲಿ ಧ್ವಜವನ್ನು ಪ್ರಮುಖವಾಗಿ ಬಳಸಲಾಗುತ್ತಿತ್ತು. 17ನೇ ಶತಮಾನದ ಆರಂಭದಲ್ಲಿ ನೌಕಾಯಾನದ ಜನಪ್ರಿಯತೆ ತುತ್ತತುದಿಯಲ್ಲಿದ್ದ ಕಾಲದಲ್ಲಿ ಧ್ವಜಗಳ ಬಳಕೆ ಜೋರಾಗಿತ್ತು. ನೌಕೆಗಳು ಪತಾಕೆ ಹೊಂದಿರುವುದು ಕಡ್ಡಾಯವಾಗಿತ್ತು.
ಈಗಲೂ ನೌಕಾಯಾನದಲ್ಲಿ ಧ್ವಜಗಳು ಮಹತ್ವದ ಪಾತ್ರ ನಿರ್ವಹಿಸುತ್ತಿವೆ. ಸಾಗರದಲ್ಲಿ ಇದು ಪ್ರಮುಖ ಸಂವಹನದ ಸಾಧನ. ಧ್ವಜಗಳಿಗೆ ಸಂಬಂಧಿಸಿದಂತೆ ನೌಕಾಯಾನ ಕ್ಷೇತ್ರದಲ್ಲಿ ಜಾಗತಿಕ ಮಟ್ಟದಲ್ಲಿ ಎಲ್ಲರಿಗೂ ಅನ್ವಯವಾಗುವ ನಿಯಮಗಳೇ ಇವೆ.
1478ರಲ್ಲಿ ಡೆನ್ಮಾರ್ಕ್ ಅಳವಡಿಸಿಕೊಂಡಿದ್ದ ಧ್ವಜವು 'ಜಗತ್ತಿನ ಅತ್ಯಂತ ಹಳೆಯ ರಾಷ್ಟ್ರ ಧ್ವಜ' ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈಗಲೂ ಅದೇ ಧ್ವಜ ಬಳಕೆಯಲ್ಲಿದೆ.ಡೆನ್ಮಾರ್ಕ್ ರಾಷ್ಟ್ರಧ್ವಜದಿಂದ ಸ್ಫೂರ್ತಿ ಪಡೆದು ನಾರ್ವೆ, ಸ್ವೀಡನ್, ಫಿನ್ಲೆಂಡ್, ಐಸ್‌ಲೆಂಡ್ ಕೂಡ ತಮ್ಮದೇ ಆದ ರಾಷ್ಟ್ರ ಧ್ವಜಗಳನ್ನು ರೂಪಿಸಿದವು.
18ನೇ ಶತಮಾನದ ಹೊತ್ತಿಗೆ ಧ್ವಜಗಳು ರಾಷ್ಟ್ರೀಯ ಸಂಕೇತವಾಗಿ ಮಾರ್ಪಟ್ಟವು. 19ನೇ ಶತಮಾನದ ವೇಳೆಗೆ ಸ್ವತಂತ್ರಗೊಂಡ ಬಹುತೇಕ ರಾಷ್ಟ್ರಗಳು ತಮ್ಮದೇ ಆದ ಧ್ವಜವನ್ನು ಹೊಂದಿದವು.
ಈಗ ವಿಶ್ವಸಂಸ್ಥೆ ಸೇರಿದಂತೆ ಜಾಗತಿಕ ಮಟ್ಟದ ಸಂಸ್ಥೆಗಳು, ಕ್ರೀಡಾ ಸಂಘಟನೆಗಳು, ವಿವಿಧ ರಾಷ್ಟ್ರಗಳ ಸೇನಾ ಪಡೆಗಳು ಹಾಗೂ ರಾಜಕೀಯ ಪಕ್ಷಗಳು ತಮ್ಮದೇ ಆದ ಧ್ವಜಗಳನ್ನು ಹೊಂದಿವೆ.
ಭಾರತವನ್ನೇ ಪರಿಗಣಿಸಿ ಹೇಳುವುದಾದರೆ ನಮ್ಮ ಮೂರು ಸೇನಾ ಪಡೆಗಳು ಪ್ರತ್ಯೇಕ ಧ್ವಜಗಳನ್ನು ಹೊಂದಿವೆ. ಕರ್ನಾಟಕ ಸೇರಿದಂತೆ ಕೆಲವು ರಾಜ್ಯಗಳಿಗೆ ಪ್ರತ್ಯೇಕ ಧ್ವಜಗಳಿವೆ. ಇಲ್ಲಿನ ರಾಜಕೀಯ ಪಕ್ಷಗಳು (ಪಕ್ಷದ ಬಣ್ಣ ಮತ್ತು ಚಿಹ್ನೆಗಳನ್ನು ಇವು ಹೊಂದಿರುತ್ತವೆ) ಧಾರ್ಮಿಕ, ಸಾಮಾಜಿಕ ಸಂಘಟನೆಗಳು ಕೂಡ ಧ್ವಜಗಳನ್ನು ಹೊಂದಿವೆ.
ಧ್ವಜಗಳು ಸಂವಹನ ಸಾಧನವಾಗಿಯೂ ಕಾರ್ಯನಿರ್ವಹಿಸುತ್ತವೆ ಎಂಬ ಅಂಶವನ್ನು ಈ ಮೊದಲೇ ಪ್ರಸ್ತಾಪಿಸಲಾಗಿದೆ. ಉದಾಹರಣೆ ನೀಡುವುದಾದರೆ, ಯುದ್ಧರಂಗದಲ್ಲಿ ಬಿಳಿ ಧ್ವಜವನ್ನು ಹಿಡಿದರೆ ಅದು ಶರಣಾಗತಿಯ ಸಂಕೇತ. ಕೆಂಪು ಬಾವುಟವು ಅಪಾಯದ ಸಂದೇಶ ನೀಡುತ್ತದೆ. ಹಸಿರು ಬಾವುಟ ಒಪ್ಪಿಗೆಯನ್ನು (ವಾಹನಗಳ, ರೈಲಿನ ವಿಷಯದಲ್ಲಿ ಚಾಲನೆಗೆ ಅನುಮತಿ) ಸೂಚಿಸುತ್ತದೆ.
ಕ್ರೀಡಾ ಕ್ಷೇತ್ರದಲ್ಲೂ ಪತಾಕೆಗಳ ಬಳಕೆ ಇದೆ. ವಾಹನಗಳ ರೇಸ್ ಸ್ಪರ್ಧೆಗೆ ಚಾಲನೆ ನೀಡುವಾಗ ಮತ್ತು ಮುಕ್ತಾಯದ ಹಂತದಲ್ಲಿ ಬಿಳಿ ಮತ್ತು ಕಪ್ಪು ಪಟ್ಟೆಗಳ ಪತಾಕೆಯನ್ನು ತೋರಿಸುವುದನ್ನು ಗಮನಿಸಿರಬಹುದು.

