Dailyhunt
Assembly Elections: ಅಸ್ಸಾಂನಲ್ಲಿ ಶೇ 85, ಕೇರಳದಲ್ಲಿ ಶೇ 78ರಷ್ಟು ಮತದಾನ

Assembly Elections: ಅಸ್ಸಾಂನಲ್ಲಿ ಶೇ 85, ಕೇರಳದಲ್ಲಿ ಶೇ 78ರಷ್ಟು ಮತದಾನ

ವದೆಹಲಿ: ಅಸ್ಸಾಂ, ಕೇರಳ ಮತ್ತು ಪುದುಚೆರಿ ವಿಧಾನಸಭೆಗಳಿಗೆ ಗುರುವಾರ ಬಿರುಸಿನ ಮತದಾನ ನಡೆದಿದ್ದು, ಕೆಲವೆಡೆ ಸಣ್ಣಪುಟ್ಟ ಘರ್ಷಣೆ, ಪ್ರತಿಭಟನೆಗಳನ್ನು ಹೊರತುಪಡಿಸಿದರೆ ಬಹುತೇಕ ಶಾಂತಿಯುತವಾಗಿ ನಡೆದಿದೆ.

ಅಸ್ಸಾಂನಲ್ಲಿ ಶೇ 85.49, ಕೇರಳದಲ್ಲಿ 78.13, ಪುದುಚೆರಿಯಲ್ಲಿ ಶೇ 89.87ರಷ್ಟು ಮತದಾನ ದಾಖಲಾಗಿದೆ.

ಅಸ್ಸಾಂನ 126, ಕೇರಳದ 140 ಮತ್ತು ಪುದುಚೆರಿಯ 30 ಕ್ಷೇತ್ರಗಳಿಗೆ ಮತದಾನ ನಡೆಯಿತು. ಬೆಳಿಗ್ಗೆಯಿಂದಲೇ ಮತದಾರರು ಮತಗಟ್ಟೆಗಳ ಬಳಿ ಬಂದು ಮತಚಲಾಯಿಸಿದರು. ಮಧ್ಯಾಹ್ನ ಬಿಸಿಲನ್ನೂ ಲೆಕ್ಕಿಸದೆ ಸಾಲಿನಲ್ಲಿ ನಿಂತು ಮತದಾನ ಮಾಡಿದರು. ಮತಗಟ್ಟೆಗಳ ಬಳಿ ಬಿಗಿ ಬಂದೋಬಸ್ತ್‌ ವ್ಯವಸ್ಥೆ ಕಲ್ಪಿಸಲಾಗಿತ್ತು.

ಬೆಳಿಗ್ಗೆ 7 ಗಂಟೆಗೆ ಆರಂಭವಾದ ಮತದಾನ ಸಂಜೆ 6 ಗಂಟೆಯವರೆಗೆ ನಡೆಯಿತು. ಮತ ಎಣಿಕೆ ಮೇ 4ರಂದು ನಡೆಯಲಿದೆ.

Dailyhunt
Disclaimer: This content has not been generated, created or edited by Dailyhunt. Publisher: Prajavani