Dailyhunt Logo
  • Light mode
    Follow system
    Dark mode
    • Play Story
    • App Story
ಅಥ್ಲೀಟುಗಳ  ಚುನಾವಣಾ ಕಣದಿಂದ ಹಿಂದೆ ಸರಿದ ಕಿದಂಬಿ ಶ್ರೀಕಾಂತ್

ಅಥ್ಲೀಟುಗಳ ಚುನಾವಣಾ ಕಣದಿಂದ ಹಿಂದೆ ಸರಿದ ಕಿದಂಬಿ ಶ್ರೀಕಾಂತ್

ನವದೆಹಲಿ (ಪಿಟಿಐ): ಅನುಭವಿ ಬ್ಯಾಡ್ಮಿಂಟನ್ ಆಟಗಾರ ಕಿದಂಬಿ ಶ್ರೀಕಾಂತ್ ಅವರು ಭಾರತ ಒಲಿಂಪಿಕ್ ಸಂಸ್ಥೆಯ 'ಅಥ್ಲೀಟುಗಳ ಆಯೋಗ'ದ ಸದಸ್ಯ ಸ್ಥಾನದ ಚುನಾವಣಾ ಕಣದಿಂದ ಸೋಮವಾರ ಹಿಂದೆಸರಿದಿದ್ದಾರೆ. ಹೀಗಾಗಿ 9 ಸದಸ್ಯ ಸ್ಥಾನಗಳಿಗೆ 10 ಮಂದಿ ಕಣದಲ್ಲಿ ಉಳಿದಂತಾಗಿದೆ.

ಒಲಿಂಪಿಕ್ ಪದಕ ವಿಜೇತೆ ಪಿ.ವಿ.ಸಿಂಧು, ಮೀರಾಬಾಯಿ ಚಾನು ಅವರು ಕಣದಲ್ಲಿ ಉಳಿದಿರುವ ಅಭ್ಯರ್ಥಿಗಳಲ್ಲಿಪ್ರಮುಖರಾಗಿದ್ದಾರೆ. ಚುನಾವಣೆ ಮಂಗಳವಾರ ವರ್ಚುವಲ್ ಆಗಿ ನಡೆಯಲಿದೆ.

ಐಒಎ ಚುನಾವಣೆ ನಿಯಮಗಳ ಪ್ರಕಾರ ಹತ್ತು ಸದಸ್ಯರಲ್ಲಿ ಕಡೇಪಕ್ಷ ನಾಲ್ವರು (ಇವರಲ್ಲಿ ಇಬ್ಬರು ಪುರುಷ, ಇಬ್ಬರು ಮಹಿಳೆಯರು ಇರುವುದು ಕಡ್ಡಾಯ) ಏಷ್ಯನ್ ಕ್ರೀಡೆ, ಕಾಮನ್‌ವೆಲ್ತ್ ಕ್ರೀಡೆ, ವಿಶ್ವ ಚಾಂಪಿಯನ್‌ಷಿಪ್‌ಗಳಲ್ಲಿ. ರಾಷ್ಟ್ರೀಯ ಕ್ರೀಡೆಗಳ ಕೊನೆಯ ಮೂರು ಆವೃತ್ತಿಗಳಲ್ಲಿ ಕನಿಷ್ಠ ಒಂದಾದರೂ ಪದಕ ಗೆದ್ದಿರಬೇಕು.

ಉಳಿದ ಆರು ಮಂದಿ (ಮೂವರು ಪುರುಷರ ಮತ್ತು ಮೂವರು ಮಹಿಳೆಯರು) ಕೊನೆಯ ಮೂರು ಒಲಿಂಪಿಕ್ ಕ್ರೀಡೆಗಳಲ್ಲಿ ಒಂದರಲ್ಲಾದರೂ ಭಾಗವಹಿಸಿರಬೇಕು.

ಕನೊಯಿಂಗ್- ಕಯಾಕಿಂಗ್‌ನಲ್ಲಿ ಒಬ್ಬರಷ್ಟೇ- ಮಂಜೀತ್ ಸಿಂಗ್- ಕಣದಲ್ಲಿದ್ದು ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಅಧಿಕಾರಿ ಸಂಜಯ್ ಕೆ.ಶ್ರೀವಾಸ್ತವ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಫುಟ್‌ಬಾಲ್‌, ಟೆನಿಸ್‌, ಬಾಕ್ಸಿಂಗ್‌ನಿಂದ ಯಾರೂ ಕಣಕ್ಕಿಳಿದಿಲ್ಲ. ಸಿಂಧು, ಚಾನು ಜೊತೆ ಹಾಕಿ ತಂಡದ ನಾಯಕ ಹರ್ಮನ್‌ಪ್ರೀತ್ ಸಿಂಗ್, ನಾಯಕಿ ಸಲೀಮಾ ಟೇಟೆ, ಶೂಟರ್ ಸ್ವಪ್ನಿಲ್ ಕುಸಳೆ, ಫೆನ್ಸಿಂಗ್ ತಾರೆ ಭವಾನಿ ದೇವಿ, ಅಥ್ಲೆಟಿಕ್ಸ್‌ನಿಂದ ಸುಧಾ ಸಿಂಗ್ ಮತ್ತು ತಜಿಂದರ್ ಸಿಂಗ್, ಮಾಜಿ ಆರ್ಚರ್‌ ಬೊಂಬಾಲ್ಯ ದೇವಿ ಮತ್ತು ಈಜುತಾರೆ ಸಜನ್ ಪ್ರಕಾಶ್ ಕಣದಲ್ಲಿದ್ದಾರೆ.

261103-51-435399905

Dailyhunt
Disclaimer: This content has not been generated, created or edited by Dailyhunt. Publisher: Prajavani