Dailyhunt Logo
  • Light mode
    Follow system
    Dark mode
    • Play Story
    • App Story
ಅತ್ತಿಬೆಲೆ ಪುರಸಭೆಯಿಂದ ಬ್ಯಾನರ್ ಮುಕ್ತ ನಗರ ನಿರ್ಮಾಣಕ್ಕೆ ಚಿಂತನೆ

ಅತ್ತಿಬೆಲೆ ಪುರಸಭೆಯಿಂದ ಬ್ಯಾನರ್ ಮುಕ್ತ ನಗರ ನಿರ್ಮಾಣಕ್ಕೆ ಚಿಂತನೆ

ಅತ್ತಿಬೆಲೆ (ಆನೇಕಲ್): 'ಬ್ಯಾನರ್ ಮುಕ್ತ ಪುರಸಭೆ ಮಾಡಲು ಶ್ರಮಿಸಲಾಗುತ್ತಿದ್ದು, ಪ್ರಮುಖ ರಸ್ತೆಗಳಲ್ಲಿ ಅಳವಡಿಸಿದ್ದ ಬ್ಯಾನರ್ ತೆರವುಗೊಳಿಸಲಾಗಿದೆ. ಮುಂದಿನ ದಿನಗಳಲ್ಲಿ ಡಿಜಿಟಲ್ ಫಲಕಗಳನ್ನು ಅಳವಡಿಸಲು ಚಿಂತನೆ ನಡೆಸಲಾಗಿದೆ' ಎಂದು ಪುರಸಭಾ ಮುಖ್ಯಾಧಿಕಾರಿ ದೊಡ್ಡ ಮಲ್ಲವಯ್ಯ ಮಂಗಳವಾರ ತಿಳಿಸಿದರು.

ಪುರಸಭೆಯಿಂದ ಆಚರಿಸಲಾದ ಪೌರಕಾರ್ಮಿಕರ ದಿನದಲ್ಲಿ ಮಾತನಾಡಿದ ಅವರು, ಪಟ್ಟಣದ ಸ್ವಚ್ಛತೆ ಕಾಪಾಡುವ ಪೌರಕಾರ್ಮಿಕರನ್ನು ಅಭಿನಂದಿಸಬೇಕಾದದ್ದು ಸಮಾಜದ ಜವಾಬ್ದಾರಿಯಾಗಿದೆ. ಆರೋಗ್ಯಕರ ಸಮಾಜ ನಿರ್ಮಿಸಲು ಮತ್ತು ಸ್ವಚ್ಛ ಪರಿಸರ ರೂಪಿಸುವಲ್ಲಿ ಪೌರಕಾರ್ಮಿಕರ ಪಾತ್ರ ಪ್ರಮುಖವಾದುದ್ದು ಎಂದು ಹೇಳಿದರು.

ಸ್ವಚ್ಛ, ಸುಂದರ ಅತ್ತಿಬೆಲೆ ನಿರ್ಮಿಸಲು ಸಾರ್ವಜನಿಕರು ಸಹಕಾರ ನೀಡಬೇಕು. ಈ ನಿಟ್ಟಿನಲ್ಲಿ ಅತ್ತಿಬೆಲೆ ಪುರಸಭಾ ವ್ಯಾಪ್ತಿಯ ಎಲ್ಲ ವಾರ್ಡ್‌ಗಳಲ್ಲಿ ಜಾಗೃತಿ ಮೂಡಿಸಲಾಗಿದೆ. ಶಾಲಾ-ಕಾಲೇಜುಗಳಲ್ಲಿ ಸ್ವಚ್ಛತಾ ಅರಿವು ಕಾರ್ಯಕ್ರಮ ರೂಪಿಸಲಾಗಿದೆ. ಎಲ್ಲೆಂದರಲ್ಲಿ ಕಸ ಎಸೆಯುವವರ ವಿರುದ್ಧ ಕಠಿಣ ಕ್ರಮವಹಿಸಲು ಪುರಸಭೆ ನಿರ್ಧರಿಸಿದೆ ಎಂದು ತಿಳಿಸಿದರು.

ಸಮಾರಂಭದಲ್ಲಿ ಪೌರಕಾರ್ಮಿಕರನ್ನು ಅಭಿನಂದಿಸಲಾಯಿತು. ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತರಾದ ಪೌರಕಾರ್ಮಿಕರಿಗೆ ಬಹುಮಾನ ವಿತರಿಸಲಾಯಿತು. ಪುರಸಭೆಯ ಪರಿಸರ ಎಂಜಿನಿಯರ್ ಯಾಸ್ಮಿನ್ ಸುಲ್ತಾನ, ಕಂದಾಯ ಅಧಿಕಾರಿ ಶಹನಾಜ್ ಉಪಸ್ಥಿತರಿದ್ದರು.

261104-15-362198651

Dailyhunt
Disclaimer: This content has not been generated, created or edited by Dailyhunt. Publisher: Prajavani