Dailyhunt Logo
  • Light mode
    Follow system
    Dark mode
    • Play Story
    • App Story
ಅಯೋಧ್ಯೆ ರಾಮಮಂದಿರ ನಿರ್ಮಾಣಕಾರ್ಯ ಪೂರ್ಣ

ಅಯೋಧ್ಯೆ ರಾಮಮಂದಿರ ನಿರ್ಮಾಣಕಾರ್ಯ ಪೂರ್ಣ

ಬೆಂಗಳೂರು: ಅಯೋಧ್ಯೆ ರಾಮಲಲ್ಲಾ ಮಂದಿರ ನಿರ್ಮಾಣ ಸಂಪೂರ್ಣವಾಗಿದೆ ಎಂದು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಇಂದು ತಿಳಿಸಿದೆ.

ರಾಮಮಂದಿರ ಆವರಣದ ಮುಖ್ಯ ರಾಮಲಲ್ಲಾ ಮಂದಿರ, ಅದೇ ಆವರಣದಲ್ಲಿನ ಮಹದೇವ, ಗಣೇಶ, ಹನುಮಾನ್, ಸೂರ್ಯದೇವ, ಭಗವತಿ ಮಾತೆ, ಅನ್ನಪೂರ್ಣೆ, ಶೇಷಾವತಾರ ದೇವರ ದೇವಾಯಲಯಗಳ ನಿರ್ಮಾಣ ಕಾರ್ಯವೂ ಮುಗಿದಿದೆ ಎಂದು ಎಕ್ಸ್ ಪೋಸ್ಟ್ ಮುಖಾಂತರ ತಿಳಿಸಿದೆ.

ಈ ಮಂದಿರಗಳ ಕಳಸಾರೋಹಣ ಹಾಗೂ ಧ್ವಜ ಸ್ಥಾಪನೆಯೂ ಮುಗಿದಿದೆ ಎಂದು ತಿಳಿಸಿದೆ.

ಮುಂದಿನ ತಿಂಗಳು ಪ್ರಧಾನಿ ನರೇಂದ್ರ ಮೋದಿ ಅವರು ರಾಮಲಲ್ಲಾ ಮಂದಿರದ ಧ್ವಜ ಸ್ಥಾಪನೆ ನೆರವೇರಿಸಲಿದ್ದಾರೆ ಎಂದು ಈ ಮೂಲಕ ತಿಳಿದು ಬಂದಿದೆ.

ದೇವಸ್ಥಾನ ಪ್ರಾಂಗಣದ ಎಲ್ಲ ಕಾರ್ಯಗಳು ಪೂರ್ಣವಾಗಿದ್ದು ದರ್ಶನಕ್ಕಾಗಿ ಮಂದಿರಕ್ಕೆ ಭೇಟಿ ನೀಡುವ ಭಕ್ತರಿಗೆ ಸಂಬಂಧಿಸಿದ ಶೇ 100 ರಷ್ಟು ಕಾರ್ಯಗಳು ಸಂಪೂರ್ಣವಾಗಿವೆ ಎಂದು ಟ್ರಸ್ಟ್ ತಿಳಿಸಿದೆ.

ಟ್ರಸ್ಟ್ ಕಚೇರಿ, 3.5 ಕಿ.ಮೀ ಕಾಂಪೌಂಡ್ ಹಾಗೂ ಟ್ರಸ್ಟ್‌ನ ಸಭಾಂಗಣಗಳ ಕಾರ್ಯಗಳು ಬಾಕಿಯಿವೆ. ಶೀಘ್ರದಲ್ಲೇ ಅವೂ ಪೂರ್ಣಗೊಳ್ಳಲಿವೆ ಎಂದು ತಿಳಿಸಿದೆ.

2024 ರ ಜನವರಿಯಲ್ಲಿ ರಾಮಲಲ್ಲಾ ಗರ್ಭಗುಡಿಯ ಭಾಗಶಃ ಮಂದಿರ ನಿರ್ಮಾಣವಾಗಿ ಉದ್ಘಾಟನೆಯಾಗಿತ್ತು.

Dailyhunt
Disclaimer: This content has not been generated, created or edited by Dailyhunt. Publisher: Prajavani