Dailyhunt Logo
  • Light mode
    Follow system
    Dark mode
    • Play Story
    • App Story
ಅಯೋಗ್ಯ -2: 'ಮುದ್ದ್ ಮುದ್ದು ಪುಟ್‌ಲಕ್ಷ್ಮಿ'ಯಲ್ಲಿ ಸತೀಶ್-ರಚಿತಾ ಮೋಡಿ

ಅಯೋಗ್ಯ -2: 'ಮುದ್ದ್ ಮುದ್ದು ಪುಟ್‌ಲಕ್ಷ್ಮಿ'ಯಲ್ಲಿ ಸತೀಶ್-ರಚಿತಾ ಮೋಡಿ

ತೀಶ್ ನೀನಾಸಂ ಹಾಗೂ ರಚಿತಾ ರಾಮ್ ನಟನೆಯ 'ಅಯೋಗ್ಯ-2' ಸಿನಿಮಾದ 'ಮುದ್ದ್ ಮುದ್ದು ಪುಟ್‌ಲಕ್ಷ್ಮಿ' ಹಾಡು ಇದೇ ಜೂನ್ 20ರಂದು ಬಿಡುಗಡೆಯಾಗಲಿದೆ. ಆದರೆ ಇದಕ್ಕೂ ಮುನ್ನ ಹಾಡಿದ ಪ್ರೋಮೊವನ್ನು ಚಿತ್ರತಂಡವು ಬಿಡುಗಡೆ ಮಾಡಿದೆ.

ಸಿನಿಮಾದ ಹಾಡು ಬಿಡುಗಡೆಯಾಗುವ ದಿನಾಂಕವುಳ್ಳ ಪ್ರೋಮೊವನ್ನು ಸಾಮಾಜಿಕ ಮಾಧ್ಯಮ ಇನ್‌ಸ್ಟಾಗ್ರಾಮ್‌ನಲ್ಲಿ ರಚಿತಾ ರಾಮ್ ಅವರು ‌ಹಂಚಿಕೊಂಡಿದೆ.

ಅಯೋಗ್ಯ-2 ಚಿತ್ರದ ಮೊದಲ ಭಾಗ 'ಅಯೋಗ್ಯ' ಸಿನಿಮಾದಲ್ಲಿಯೂ ಸತೀಶ್ ನೀನಾಸಂ ಮತ್ತು ರಚಿತಾ ರಾಮ್ ಜೋಡಿಯಾಗಿದ್ದರು. ಜೊತೆಗೆ ಈ ಸಿನಿಮಾದ 'ಏನಮ್ಮಿ ಏನಮ್ಮಿ' ಹಾಡು ಜನಪ್ರಿಯತೆ ಗಳಿಸಿತ್ತು. ಅಯೋಗ್ಯ-2 ಸಿನಿಮಾದಲ್ಲಿರುವ 'ಮುದ್ದ್ ಮುದ್ದು ಪುಟ್‌ಲಕ್ಷ್ಮಿ' ಹಾಡು ಜೂನ್ 20 ರ ಮಧ್ಯಾಹ್ನ 12:12ಕ್ಕೆ ಬಿಡುಗಡೆಯಾಗಲಿದ್ದು, ಜನಪ್ರಿಯಗೊಳ್ಳುವ ನಿರೀಕ್ಷೆ ಇದೆ.

ಬಿಡುಗಡೆಗೊಂಡಿರುವ ಹಾಡಿನ ಪ್ರೋಮೊದಲ್ಲಿ ರಚಿತಾ ರಾಮ್ ಮತ್ತು ಸತೀಶ್ ನೀನಾಸಂ ಅವರು ಹಳ್ಳಿ ಸೊಗಡಿನ ವೇಷಭೂಷಣದಲ್ಲಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ಹಳ್ಳಿಯ ಸಂಸ್ಕೃತಿ ಒಳಗೊಂಡ ದೃಶ್ಯಗಳಿಂದ ಹಾಡು ಕೂಡಿದೆ. ಈ ಹಾಡಿಗೆ ಸಂಗೀತ ನಿರ್ದೇಶನವನ್ನು ಅರ್ಜುನ್ ಜನ್ಯ ಮಾಡಿದ್ದಾರೆ.

ಮುದ್ದ್ ಮುದ್ದು ಪುಟ್‌ಲಕ್ಷ್ಮಿ ಹಾಡನ್ನು ಚೇತನ್ ಕುಮಾರ್ ಬರೆದಿದ್ದು, ಸಿದ್ ಶ್ರೀರಾಮ್ ಮತ್ತು ಪೃಥ್ವಿ ಭಟ್ ಧ್ವನಿಯಾಗಿದ್ದಾರೆ. ಸಿನಿಮಾದ ಆಡಿಯೊ ಹಕ್ಕನ್ನು ಆನಂದ್ ಆಡಿಯೊ ₹2 ಕೋಟಿಗೆ ಖರೀದಿಸಿದೆ. ಎಂ.ಮುನೇಗೌಡ ಅವರು ತಮ್ಮ ಎಸ್ ವಿ ಸಿ ಪ್ರೊಡಕ್ಷನ್‌ನಡಿ ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ.

ಸದ್ಯ ಅಯೋಗ್ಯ 2 ಸಿನಿಮಾಗೆ ಈಗಾಗಲೇ ಸ್ಯಾಟಲೈಟ್ ಹಕ್ಕು ಹಾಗೂ ಒಟಿಟಿ ಹಕ್ಕುಗಳಿಗೆ ‌ಬೇಡಿಕೆ ಬಂದಿದೆ. ಸಿನಿಮಾ ಬಿಡುಗಡೆಗೂ ಮುನ್ನ ಹಕ್ಕುಗಳು ಮಾರಾಟವಾಗುವ ಸಾಧ್ಯತೆ ಇದೆ ಎಂದು ನಿರ್ದೇಶಕ ಮಹೇಶ್ ಕುಮಾರ್ ಹೇಳಿಕೊಂಡಿದ್ದರು. ಈ ಸಿನಿಮಾ ಆಗಸ್ಟ್‌ನಲ್ಲಿ ಬಿಡುಗಡೆಗೊಳ್ಳುವ ನಿರೀಕ್ಷೆ ಇದೆ.

Dailyhunt
Disclaimer: This content has not been generated, created or edited by Dailyhunt. Publisher: Prajavani