ವಾಷಿಂಗ್ಟನ್: ಬಾಹ್ಯಾಕಾಶದಲ್ಲಿ ತಾನು ಶಸ್ತ್ರಾಸ್ತ್ರ ನಿಯೋಜಿಸಿರುವುದಾಗಿ ಇದೇ ಮೊದಲ ಬಾರಿಗೆ ಅಮೆರಿಕ ಖಚಿತಪಡಿಸಿದೆ.
'ಶತ್ರು ದೇಶಗಳ ಕ್ರಮದಿಂದ ಜಂಟಿ ಪಡೆಗಳನ್ನು ರಕ್ಷಿಸಲು ಬಾಹ್ಯಾಕಾಶದಲ್ಲಿ ಶಸ್ತ್ರಾಸ್ತ್ರವನ್ನು ನಿಯೋಜಿಸಲಾಗಿದೆ' ಎಂದು ವಾಯುಪಡೆ ಕಾರ್ಯದರ್ಶಿ ತಿಳಿಸಿದ್ದಾರೆ.
ಆದರೆ ಅವುಗಳ ಕಾರ್ಯವೈಖರಿ ಬಗ್ಗೆ ಹೆಚ್ಚಿನ ವಿವರ ನೀಡಲಿಲ್ಲ.
'ವಾಯುಪಡೆಯು ಹೆಚ್ಚು ಹೆಚ್ಚು ಸ್ವಾಯತ್ತ ವ್ಯವಸ್ಥೆಯನ್ನು ಅಳವಡಿಸಿಕೊಳ್ಳುತ್ತಿದ್ದು, 2032ರ ಹೊತ್ತಿಗೆ ಆಮೂಲಾಗ್ರ ಬದಲಾವಣೆ ಕಾಣಲಿದ್ದೇವೆ. ಸಂಭವನೀಯ ಬೆದರಿಕೆಯನ್ನು ಎದುರಿಸಲು ಸಿದ್ಧತೆಗಳನ್ನು ಹೆಚ್ಚಿಸುತ್ತಿದ್ದೇವೆ' ಎಂದು ಹೇಳಿದ್ದಾರೆ.
ಬಾಹ್ಯಾಕಾಶದಿಂದ ಉಡಾವಣೆ ಮಾಡಬಲ್ಲ ಹೊಸ ಉಪಗ್ರಹ ನಿಗ್ರಹ ಶಸ್ತ್ರಾಸ್ತ್ರಗಳನ್ನು ರಷ್ಯಾ ಅಭಿವೃದ್ಧಿಪಡಿಸುತ್ತಿದೆ ಎಂದು ಅಮೆರಿಕ 2024ರಲ್ಲಿ ಹೇಳಿತ್ತು.

