Dailyhunt Logo
  • Light mode
    Follow system
    Dark mode
    • Play Story
    • App Story
ಬಾಲ ಯೇಸು ಜಾತ್ರೆಗೆ ಆಹ್ವಾನ ನೀಡಿದ ಪಟ್ಟದ್ದೇವರ ವಿರುದ್ಧ ಕ್ರಮಕ್ಕೆ ಆಗ್ರಹ

ಬಾಲ ಯೇಸು ಜಾತ್ರೆಗೆ ಆಹ್ವಾನ ನೀಡಿದ ಪಟ್ಟದ್ದೇವರ ವಿರುದ್ಧ ಕ್ರಮಕ್ಕೆ ಆಗ್ರಹ

ಬೀದರ್: ಭಾಲ್ಕಿಯಲ್ಲಿ ನಡೆಯುತ್ತಿರುವ ಬಾಲ ಯೇಸು ಜಾತ್ರೆಗೆ ಸಾಮಾಜಿಕ ಜಾಲತಾಣದ ಮೂಲಕ ಸಾರ್ವಜನಿಕವಾಗಿ ಮುಕ್ತ ಆಹ್ವಾನ ನೀಡಿದ ಭಾಲ್ಕಿ ಹಿರೇಮಠ ಸಂಸ್ಥಾನದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಶ್ರೀರಾಮ ಸೇನೆಯು ಜಿಲ್ಲಾಡಳಿತವನ್ನು ಆಗ್ರಹಿಸಿದೆ.

ಈ ಸಂಬಂಧ ಸೇನೆಯ ಪದಾಧಿಕಾರಿಗಳು ನಗರದಲ್ಲಿ ಮಂಗಳವಾರ ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಿ ಒತ್ತಾಯಿಸಿದರು.

ಸ್ವಾಮೀಜಿಯವರ ಈ ಮುಕ್ತ ಆಹ್ವಾನದಿಂದ ಹಿಂದೂ ಹಾಗೂ ಲಿಂಗಾಯತ ಸಮಾಜಕ್ಕೆ ತೀವ್ರ ನೋವುಂಟಾಗಿದೆ. ಶರಣರ ಮಠದ ಶ್ರೀಗಳು ಇಂತಹ ಆಹ್ವಾನ ನೀಡಿರುವುದು ಸಾರ್ವಜನಿಕರಲ್ಲಿ ಗೊಂದಲ ಮೂಡಿಸಿದೆ. ಈ ಪ್ರದೇಶದಲ್ಲಿ ಈಗಾಗಲೇ ನಿರಂತರ ಮತಾಂತರದ ವಿರುದ್ಧ ಹಿಂದೂ ಸಮಾಜ ಹೋರಾಟ ನಡೆಸುತ್ತಿದೆ. ಇಂತಹ ಸಂದರ್ಭದಲ್ಲಿ ಧಾರ್ಮಿಕ ಮುಖಂಡರ ಈ ನಡೆ ಸಮಾಜದ ಶಾಂತಿ ಹಾಗೂ ಸಾಮರಸ್ಯಕ್ಕೆ ಭಂಗ ತರುವಂತಿದ್ದು, ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿದೆ ಎಂದು ಹೇಳಿದರು.

ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತಹ ಮತ್ತು ಮತಾಂತರಕ್ಕೆ ಪರೋಕ್ಷ ಪ್ರೋತ್ಸಾಹ ನೀಡುವಂತಹ ಇಂತಹ ಚಟುವಟಿಕೆಗಳ ಬಗ್ಗೆ ತನಿಖೆ ನಡೆಸಿ, ಸಮಾಜದಲ್ಲಿ ಶಾಂತಿ-ಸುವ್ಯವಸ್ಥೆ ಕಾಪಾಡಲು ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ತಕ್ಷಣ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಸೇನೆಯ ಜಿಲ್ಲಾಧ್ಯಕ್ಷ ರವಿ ಕೊಡಗಿ, ಉಪಾಧ್ಯಕ್ಷ ಚಿದಾನಂದ ಹಿಂಡೆ, ಕಾರ್ಯದರ್ಶಿ ಬಸವರಾಜ್ ರೇಷ್ಮೆ, ತಾಲ್ಲೂಕು ಅಧ್ಯಕ್ಷ ಜೇತೇಂದ್ರ ಗುರುಜಡೆ, ಕಾರ್ಯದರ್ಶಿ ಲಾಲಪ್ಪ ಗಾಯಕವಾಡ್‌ , ಸಂಘಟನಾ ಕಾರ್ಯಾಧ್ಯಕ್ಷ ಯಲ್ಲೇಶ್ ಶಿವಗೊಂಡ, ಸಂಘಟನಾ ಕಾರ್ಯದರ್ಶಿ ಲೋಕೇಶ್ ವಾಲಿ, ಸಂಘಟನಾ ಸಹ ಕಾರ್ಯದರ್ಶಿ ಸೋಮುನಾಥ ಗಣಪುರ ಉಪಸ್ಥಿತರಿದ್ದರು.

261104-33-1937962703

Dailyhunt
Disclaimer: This content has not been generated, created or edited by Dailyhunt. Publisher: Prajavani