ಮೂಡಲಗಿ: ತಾಲ್ಲೂಕಿನ ಕಲ್ಲೋಳಿಯ ಪ್ರಗತಿಪರ ರೈತ ಬಾಳಪ್ಪ ಬಸಪ್ಪ ಬೆಳಕೂಡ ಅವರು ಕೃಷಿ ಮತ್ತು ಸಹಕಾರ ರಂಗದಲ್ಲಿ ಮಾಡಿರುವ ಅಪಾರ ಸಾಧನೆ ಪರಿಗಣಿಸಿ 2026ನೇ ಸಾಲಿನ ಬೆಳಗಾವಿ ಜಿಲ್ಲಾಡಳಿತ ಹಾಗೂ ಕೃಷಿ ಇಲಾಖೆಯಿಂದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗಿದೆ.
ಅವರು ಕೃಷಿಯಲ್ಲಿ ಶೇ 75 ಸಾವಯವ ಮತ್ತ ಶೇ 25ರಷ್ಟು ರಾಸಾಯನಿಕ ಪದ್ಧತಿ ಅಳವಡಿಸಿಕೊಂಡು ಅಪಾರ ಸಾಧನೆ ಮಾಡಿದ್ದಾರೆ.
1 ಎಕರೆಗೆ 130 ಟನ್ ಕಬ್ಬು ಬೆಳೆದು ದಾಖಲೆ ಸೃಷ್ಟಿಸಿದ್ದಾರೆ. 1 ಎಕರೆಯಲ್ಲಿ 55ರಿಂದ 60 ಕ್ವಿಂಟಲ್ ಅರಿಸಿಣ, 25ರಿಂದ 35 ಕ್ವಿಂಟಲ್ ಹುರುಳಿ, 50ರಿಂದ 60 ಕ್ವಿಂಟಲ್ ಗೋವಿನಜೋಳ ಬೆಳೆದು ಮಾದರಿಯೆನಿಸಿದ್ದಾರೆ.
261104-21-1539144756

