Dailyhunt
ಬಾಲಿವುಡ್ ಸೆಲೆಬ್ರಿಟಿ ಫಿಟ್ನೆಸ್ ತರಬೇತುದಾರ ಕೈಜಾದ್ ನಿಗೂಢ ಸಾವು

ಬಾಲಿವುಡ್ ಸೆಲೆಬ್ರಿಟಿ ಫಿಟ್ನೆಸ್ ತರಬೇತುದಾರ ಕೈಜಾದ್ ನಿಗೂಢ ಸಾವು

ಮುಂಬೈ; ನಟ ಟೈಗರ್ ಶ್ರಾಫ್ ಸೇರಿದಂತೆ ಬಾಲಿವುಡ್‌ನ ಅನೇಕ ಸೆಲೆಬ್ರಿಟಿ ಗಳಿಗೆ ಫಿಟ್ನೆಸ್ ತರಬೇತುದಾರರಾಗಿದ್ದ ಕೈಜಾದ್ ಕಪಾಡಿಯಾ ಅವರು ನಿಗೂಢವಾಗಿ ಸಾವನ್ನಪ್ಪಿದ್ದಾರೆ.

ಅವರ ಸಾವನ್ನು ದೃಢಪಡಿಸಿರುವ ಟೈಗರ್ ಶ್ರಾಫ್ ಸಂತಾಪ ಸೂಚಿಸಿ ಇನ್ಸ್ಟಾಗ್ರಾಂ ಪೋಸ್ಟ್ ಹಾಕಿದ್ದಾರೆ.

ಆದರೆ, ಅವರ ಸಾವಿನ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದು ಬಂದಿಲ್ಲ.

ಮುಂಬೈನಲ್ಲಿ 'ಕೆ11 ಅಕಾಡೆಮಿ ಆಪ್ ಫಿಟ್ನೆಸ್ ಸೈನ್ಸಸ್' ಎಂಬ ಸಂಸ್ಥೆ ಆರಂಭಿಸಿದ್ದ ಕೈಜಾದ್ ಕಪಾಡಿಯಾ, ಅನೇಕ ಬಾಲಿವುಡ್ ಸೆಲೆಬ್ರಿಟಿಗಳಿಗೆ ವೈಯಕ್ತಿಕ ಫಿಟ್ನೆಸ್ ತರಬೇತುದಾರ ಆಗಿದ್ದರು.

ಕೈಜಾದ್ ನಿಧನಕ್ಕೆ ಅನೇಕ ಬಾಲಿವುಡ್ ಸೆಲೆಬ್ರಿಟಿಗಳು‌ ಸಂತಾಪ ಸೂಚಿಸಿದ್ದಾರೆ.

ಡ್ರಗ್ಸ್: ಆರ್ಯನ್ ಇನ್ನೂ ಮಗು, ಅವನಿಗೆ ಉಸಿರಾಡಿಸಲು ಬಿಡಿ- ನಟ ಸುನೀಲ್ ಶೆಟ್ಟಿ

Dailyhunt
Disclaimer: This content has not been generated, created or edited by Dailyhunt. Publisher: Prajavani