Dailyhunt Logo
  • Light mode
    Follow system
    Dark mode
    • Play Story
    • App Story
ಬಡಾ ಎರ್ಮಾಳಿನಲ್ಲಿ ಮೀನುಗಾರಿಕಾ ದೋಣಿ ಪತ್ತೆ

ಬಡಾ ಎರ್ಮಾಳಿನಲ್ಲಿ ಮೀನುಗಾರಿಕಾ ದೋಣಿ ಪತ್ತೆ

ಪಡುಬಿದ್ರಿ: ಬಂದರಿನಿಂದ ಹೊರಟಿದ್ದ ಗಿಲ್ ನೆಟ್ ಮೀನುಗಾರಿಕಾ ದೋಣಿಯು ಬಡಾ ಎರ್ಮಾಳಿನಲ್ಲಿ ಪತ್ತೆಯಾಗಿದೆ.

ಕಳೆದ ಸೋಮವಾರ ಬೆಳಿಗ್ಗೆ 9 ಗಂಟೆಗೆ ಮಲ್ಪೆ ಬಂದರಿನಿಂದ ಈ ದೋಣಿ ಅರಬ್ಬಿ ಸಮುದ್ರಕ್ಕೆ ಮೀನುಗಾರಿಕೆಗೆ ತೆರಳಿತ್ತು. ಮಧ್ಯಾಹ್ನ 2 ಗಂಟೆ ವೇಳೆಗೆ ದೋಣಿಯ ತಳಭಾಗದಿಂದ ನೀರು ಒಳ ನುಗ್ಗುತ್ತಿರುವುದು ಸಿಬ್ಬಂದಿಯ ಗಮನಕ್ಕೆ ಬಂದಿತ್ತು.

ನೀರನ್ನು ಹೊರಹಾಕುವ ಪ್ರಯತ್ನ ನಡೆಸಿದರೂ ಪರಿಸ್ಥಿತಿ ನಿಯಂತ್ರಣಕ್ಕೆ ಬಾರದೆ ಇದ್ದಾಗ, ಮಧ್ಯಾಹ್ನ 3 ಗಂಟೆ ಸುಮಾರಿಗೆ ಭಾರತೀಯ ಕರಾವಳಿ ಕಾವಲು ಪಡೆ ಸಹಾಯವಾಣಿಗೆ ಕರೆ ಮಾಡಿ ನೆರವು ಕೋರಿದ್ದರು.

ಕರಾವಳಿ ಕಾವಲು ಪಡೆಯ ಸಿಬ್ಬಂದಿ, ದೋಣಿಯಲ್ಲಿದ್ದ ಆರು ಮೀನುಗಾರರನ್ನು ರಕ್ಷಿಸಿದ್ದರು. ಗಿಲ್ ನೆಟ್ ದೋಣಿಯನ್ನು ಎಳೆದುಕೊಂಡು ಬರಲು ಸಾಧ್ಯವಾಗದ ಕಾರಣ ಅದನ್ನು ಸಮುದ್ರದಲ್ಲೇ ಬಿಟ್ಟು ರಕ್ಷಣಾ ಕಾರ್ಯ ಪೂರ್ಣಗೊಳಿಸಲಾಗಿತ್ತು. ಈ ದೋಣಿ ಶುಕ್ರವಾರ ಮಧ್ಯಾಹ್ನದ ವೇಳೆಗೆ ಎರ್ಮಾಳು ಬಡಾ ಸಮುದ್ರ ತೀರದಲ್ಲಿ ಪತ್ತೆಯಾಗಿದೆ.

ಹೆಜಮಾಡಿ ಪಿಎಸ್‌ಐ ಪುಷ್ಪಾ ಮಾರ್ಗದರ್ಶನದಲ್ಲಿ ಅಬ್ದುಲ್ ರಝಾಕ್, ಪುನೀತ್, ಕರಾವಳಿ ರಕ್ಷಣಾ ತೀರ್ಥ, ರಾಜೇಶ್ ಹಾಗೂ ಇತರರ ಸಹಕಾರದಲ್ಲಿ ದೋಣಿಯನ್ನು ದಡಕ್ಕೆ ತರಲಾಯಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260704-28-177118558

Dailyhunt
Disclaimer: This content has not been generated, created or edited by Dailyhunt. Publisher: Prajavani