Saturday, 28 Nov, 12.55 pm ಪ್ರಜಾವಾಣಿ

ವಿದೇಶ
ಬೈಡನ್‌ ಅಮೆರಿಕವನ್ನು ಅತ್ಯುತ್ತಮವಾಗಿ ಪ್ರತಿನಿಧಿಸಲಿದ್ದಾರೆ: ಕಮಲಾ ಹ್ಯಾರಿಸ್‌

ವಾಷಿಂಗ್ಟನ್‌: ಜೋ ಬೈಡನ್‌ ಅವರು ಅಮೆರಿಕವನ್ನು ಅತ್ಯುತ್ತಮವಾಗಿ ಪ್ರತಿನಿಧಿಸುವ ಅಧ್ಯಕ್ಷರಾಗಲಿದ್ದಾರೆ ಎಂದು ಅಮೆರಿಕದ ಉಪಾಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಆಯ್ಕೆಯಾಗಿರುವ ಕಮಲಾ ಹ್ಯಾರಿಸ್‌ ಅವರು ಹೇಳಿದ್ದಾರೆ.

'ಜೋ ಬೈಡನ್‌ ಅವರು ಎಲ್ಲಾ ಅಮೆರಿಕನ್ನರಿಗೆ ಅಧ್ಯಕ್ಷರಾಗಲಿದ್ದಾರೆ. ಅವರು ಇಡೀ ಜಗತ್ತು ಗೌರವಿಸುವ ನಾಯಕರಾಗಲಿದ್ದಾರೆ. ಮಕ್ಕಳಿಗೆ ಉತ್ತಮ ಮಾರ್ಗದರ್ಶಿಯಾಗಲಿದ್ದಾರೆ' ಎಂದು ಕಮಲಾ ಅವರು ಟ್ವೀಟ್‌ ಮಾಡಿದ್ದಾರೆ.

'ರಾಷ್ಟ್ರದ ಹೊಸ ಅಧ್ಯಾಯವನ್ನು ಹೆಚ್ಚು ಧೈರ್ಯಶಾಲಿಯಾಗಿ, ಸಹಾನುಭೂತಿಯಿಂದ ಒಗ್ಗಟಾಗಿ ಬರೆಯುವ ಅವಕಾಶ ನಮಗೆ ಸಿಕ್ಕಿದೆ. ಇದು ನಮ್ಮ ಕ್ಷಣವಾಗಿದೆ' ಎಂದು ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಆಯ್ಕೆ ಆಗಿರುವ ಜೋ ಬೈಡನ್‌ ಅವರೂ ಟ್ವೀಟ್‌ ಮಾಡಿದ್ದಾರೆ.

'ವೈರಸ್‌ ಅನ್ನು ನಿಯಂತ್ರಿಸುವುದು ನಮ್ಮೆಲ್ಲರ ಜವಾಬ್ದಾರಿ. ನಾವು ಮಾಡುವ ಎಲ್ಲಾ ನಿರ್ಧಾರಗಳು ಮಹತ್ವಪೂರ್ಣವಾಗಿದೆ. ನಮ್ಮ ಪ್ರತಿಯೊಂದು ನಿರ್ಧಾರ ಒಂದು ಜೀವವನ್ನು ಉಳಿಸಬಹುದು. ಕೊರೊನಾ ವಿರುದ್ಧ ಹೋರಾಡಲು ನಮ್ಮನ್ನು ನಾವು ಸದೃಢಗೊಳಿಸೋಣ. ದ್ವಿಗುಣ ಪ್ರಯತ್ನಗಳನ್ನು ಮಾಡೋಣ. ಸೋಂಕಿನ ವಿರುದ್ಧ ಒಟ್ಟಾಗಿ ಹೋರಾಡೋಣ' ಎಂದು ಅವರು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Prajavani
Top