ನವದೆಹಲಿ: ವಿದೇಶ ಪ್ರವಾಸಕ್ಕೆ ಹೋಗುವವರಿಗೆ ವಿಧಿಸಲಾಗುವ ಟಿಸಿಎಸ್ ಅನ್ನು (ಮೂಲದಲ್ಲೇ ತೆರಿಗೆ ಕಡಿತ) ಶೇ 2 ರಷ್ಟು ಕಡಿತಗೊಳಿಸಿ ಬಜೆಟ್‌ನಲ್ಲಿ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ. ಇದರಿಂದ ವಿದೇಶ ಪ್ರವಾಸ ಪ್ಯಾಕೇಜ್‌ಗಳು ಅಗ್ಗವಾಗಲಿದೆ.
Union Budget 2026: ದೇಶದ ಪ್ರತಿ ಜಿಲ್ಲೆಗೆ ಬಾಲಕಿಯರ ಹಾಸ್ಟೆಲ್ ಘೋಷಣೆಜೊತೆಗೆ ವಿದೇಶದಲ್ಲಿ ಶಿಕ್ಷಣ ಹಾಗೂ ಚಿಕಿತ್ಸೆ ಪಡೆಯುವವರ ಹೊರೆಯೂ ಕಡಿಮೆಯಾಗಲಿದೆ.
ಉದಾರೀಕೃತ ಹಣ ರವಾನೆ ಯೋಜನೆ (ಎಲ್‌ಆರ್‌ಎಸ್)ಯಡಿ ವಿಧಿಸಲಾಗುತ್ತಿರುವ ಟಿಸಿಎಸ್ ಅನ್ನು ಶೇ 5ರಿಂದ ಶೇ 2ಕ್ಕೆ ಇಳಿಸುವ ಘೋಷಣೆ ಮಾಡಲಾಗಿದೆ . ಇದರಿಂದ ವಿದೇಶಕ್ಕೆ ಹಣ ಕಳುಹಿಸುವುಕ್ಕೆ ಇದ್ದ ಶುಲ್ಕ ಇಳಿಕೆಯಾಗಲಿದೆ.
ತೆರಿಗೆ ಕಡಿತ ನಿಯಮಗಳಲ್ಲಿನ ಗೊಂದಲವನ್ನು ತೆಗೆದುಹಾಕಲು, ಕಾರ್ಮಿಕರನ್ನು ಒದಗಿಸುವ ಸೇವೆಗಳ ಗುತ್ತಿಗೆದಾರರಿಗೆ ಪಾವತಿಗಳ ಅಡಿಯಲ್ಲಿ ಬರಲಿದೆ. ಹೀಗಾಗಿ ಅಂತಹ ಸೇವೆಗಳ ಮೇಲಿನ ಟಿಡಿಎಸ್ ಕೇವಲ ಶೇ 1 ಅಥವಾ ಶೇ 2 ಆಗಿರಲಿದೆ.

