Dailyhunt Logo
  • Light mode
    Follow system
    Dark mode
    • Play Story
    • App Story
ಬಸ್‌ ಚಲಾಯಿಸಿದ ಸಚಿವ ಬಿ.ಸಿ. ನಾಗೇಶ್‌

ಬಸ್‌ ಚಲಾಯಿಸಿದ ಸಚಿವ ಬಿ.ಸಿ. ನಾಗೇಶ್‌

ಬೆಂಗಳೂರು: ‍ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ ಅವರು ವಿಧಾನಸೌಧದ ಆವರಣದಲ್ಲಿ ಶುಕ್ರವಾರ ಬಸ್‌ ಚಲಾಯಿಸಿ ಗಮನ ಸೆಳೆದರು.

'ಸೇವ್‌ ದಿ ಚಿಲ್ಡ್ರನ್‌' ಸಂಸ್ಥೆಯಿಂದ ಹಮ್ಮಿಕೊಳ್ಳಲಾಗಿದ್ದ ಮಕ್ಕಳ ಸಂಚಾರ ಕಲಿಕಾ ಕೇಂದ್ರ ಉದ್ಘಾಟಿಸಿದ ಬಳಿಕ ಬಸ್‌ ಏರಿದ ಅವರು ಚಾಲಕನ ಆಸನದಲ್ಲಿ ಕುಳಿತು ಆವರಣದಲ್ಲೇ ಒಂದು ಸುತ್ತು ಬಸ್‌ ಚಲಾಯಿಸಿದರು.

'ಸೇವ್‌ ದಿ ಚಿಲ್ಡ್ರನ್‌' ಸಂಸ್ಥೆಯು ಮೂರು ಬಸ್‌ಗಳು, ಪುಸ್ತಕ ಹಾಗೂ ಡಿಜಿಟಲ್‌ ರೂಪದ ಕಲಿಕಾ ಸಾಮಗ್ರಿಗಳನ್ನು ಕೊಡುಗೆ ನೀಡಿದೆ. ಬಡವರು ಹಾಗೂ ಕೊಳೆಗೇರಿಗಳಲ್ಲಿ ವಾಸಿಸುವ ಮಕ್ಕಳಿಗೆ ಶಿಕ್ಷಣ ಒದಗಿಸುವುದು ಇದರ ಉದ್ದೇಶ. ಇದಕ್ಕಾಗಿ ಶಿಕ್ಷಕರನ್ನೂ ನಿಯೋಜಿಸಲಾಗಿದೆ.

Dailyhunt
Disclaimer: This content has not been generated, created or edited by Dailyhunt. Publisher: Prajavani