Dailyhunt
ಬಸವಕಲ್ಯಾಣ: ಮಠಾಧೀಶರು ಜಾತ್ಯತೀತ ಆಗಿರಲಿ

ಬಸವಕಲ್ಯಾಣ: ಮಠಾಧೀಶರು ಜಾತ್ಯತೀತ ಆಗಿರಲಿ

ಬಸವಕಲ್ಯಾಣ: 'ಮಠಾಧೀಶರು ಜಾತ್ಯತೀತ ತತ್ವದಲ್ಲಿ ನಂಬಿಕೆ ಇಟ್ಟಿರಬೇಕು' ಎಂದು ಚನ್ನವೀರ ಶಿವಾಚಾರ್ಯರು ಹೇಳಿದರು.

ತಾಲ್ಲೂಕಿನ ಹಾರಕೂಡ ಹಿರೇಮಠ ಸಂಸ್ಥಾನದಲ್ಲಿ ಶನಿವಾರ ನಡೆದ ಗುರು ಪೂರ್ಣಿಮೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

'ಜಾತಿ, ಧರ್ಮಕ್ಕೆ ಅಲ್ಲ; ನೀತಿಗೆ, ನಂಬಿಕೆ, ಭಕ್ತಿಗೆ ಪ್ರಾಮುಖ್ಯತೆ ನೀಡಬೇಕು. ಆಗ ಮಾತ್ರ ಮಠವು ಆದರ್ಶ ಮಠವಾಗಿ ಸಕಲ ಜಾತಿ ಮತಗಳ ಶ್ರದ್ಧಾ ಕೇಂದ್ರವಾಗಿ ಬೆಳೆಯಬಲ್ಲದು. ಈ ಮಠ ಸದ್ಗುರು ಚನ್ನಬಸವ ಶಿವಯೋಗಿಗಳ ಕಾಲದಿಂದಲೂ ಜಾತ್ಯತೀತ ಹಾಗೂ ಪಕ್ಷಾತೀತ ಮಠವಾಗಿ ಬೆಳೆದಿದೆ. ಈಗಲೂ ಇಲ್ಲಿ ಯಾವುದೇ ಭೇದಭಾವ ನಡೆಯುವುದಿಲ್ಲ. ಸರ್ವರನ್ನೂ ಸಮನಾಗಿ ಕಾಣಲಾಗುತ್ತದೆ' ಎಂದರು.

ಶಾಸಕ ಶರಣು ಸಲಗರ ಮಾತನಾಡಿ, 'ಮಠದ ಪೀಠಾಧಿಪತಿ ಚನ್ನವೀರ ಶಿವಾಚಾರ್ಯರು ನಡೆದಾಡುವ ದೇವರಾಗಿದ್ದಾರೆ.

ತ್ರಿವಿಧ ದಾಸೋಹಿಗಳು, ಜಾತಿ, ಧರ್ಮ ಎಣಿಸದೆ ಸಕಲರ ಉದ್ಧಾರದ ಧ್ಯೇಯ ಇಟ್ಟುಕೊಂಡು ಕಾರ್ಯಗೈಯುತ್ತಿದ್ದಾರೆ' ಎಂದರು.

ಮಲ್ಲಯ್ಯ ಸ್ವಾಮಿ ಐನಾಪುರ, ವಚನಶ್ರೀ, ಕಾರ್ತಿಕಸ್ವಾಮಿ ಯಲ್ಲದಗುಂಡಿ, ನವಲಿಂಗಕುಮಾರ ಪಾಟೀಲ ಮಾತನಾಡಿದರು. ಮಲ್ಲಿನಾಥ ಹಿರೇಮಠ, ಹೇಮಲತಾ ಅವರು ಸ್ವಾಮೀಜಿಯವರ ಪಾದಪೂಜೆ ನೆರವೇರಿಸಿದರು.

ಶಿವಕುಮಾರ ಶೆಟಗಾರ, ಬಾಬು ಹೊನ್ನಾನಾಯಕ, ಅಶೋಕ ವಕಾರೆ, ರತಿಕಾಂತ ಕೊಹಿನೂರ, ಪಂಚಾಕ್ಷರಿ ಹಿರೇಮಠ, ರೇಣುಕಾ ದಿಲೀಪ ಸ್ವಾಮಿ, ಸುಭಾಷ ಮುರೂಢ, ಮೇಘರಾಜ ನಾಗರಾಳೆ, ಇಜಾಬಾಯಿ ಜಗನ್ನಾಥ ಕುಂಬಾರ, ಶಾಂತಾಬಾಯಿ ಜಯಣ್ಣ ಢೋಲೆ, ಸೂರ್ಯಕಾಂತ ಸಂಗೋಳಗೆ, ರಾಜಕುಮಾರ ದೇಗಾಂವ, ಅಪ್ಪಣ್ಣ ಜನವಾಡಾ, ಭೂಪಾಲರೆಡ್ಡಿ ದೇಶಮುಖ, ಹುಲೆಪ್ಪ ನಾರಾಯಣಪುರ, ಕವಿತಾ ಶಂಕರಯ್ಯ ಪಾಲ್ಗೊಂಡಿದ್ದರು.

Dailyhunt
Disclaimer: This content has not been generated, created or edited by Dailyhunt. Publisher: Prajavani