Dailyhunt Logo
  • Light mode
    Follow system
    Dark mode
    • Play Story
    • App Story
ಬಸವನಗುಡಿ ಈಜುಕೇಂದ್ರ ಚಾಂಪಿಯನ್‌ಷಿಪ್‌ನ ಸಮಗ್ರ ಪ್ರಶಸ್ತಿ ಗೆದ್ದುಕೊಂಡಿತು

ಬಸವನಗುಡಿ ಈಜುಕೇಂದ್ರ ಚಾಂಪಿಯನ್‌ಷಿಪ್‌ನ ಸಮಗ್ರ ಪ್ರಶಸ್ತಿ ಗೆದ್ದುಕೊಂಡಿತು

ಮಂಗಳೂರು: ಮೂರೂ ದಿನ ಪಾರಮ್ಯ ಮೆರೆದ ಬೆಂಗಳೂರಿನ ಬಸವನಗುಡಿ ಈಜುಕೇಂದ್ರ (ಬಿಎಸಿ) ಇಲ್ಲಿ ಭಾನುವಾರ ಮುಕ್ತಾಯಗೊಂಡ ರಾಜ್ಯ ಸಬ್‌ ಜೂನಿ ಯರ್ ಈಜು ಚಾಂಪಿಯನ್‌ಷಿಪ್‌ನ ಸಮಗ್ರ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು. ಬೆಂಗಳೂರಿನ ನೆಟ್ಟಕಲ್ಲಪ್ಪ ಈಜು ಕೇಂದ್ರ ರನ್ನರ್ಸ್‌ ಅಪ್ ಆಯಿತು.

ಕರ್ನಾಟಕ ರಾಜ್ಯ ಈಜು ಸಂಸ್ಥೆಯ ಸಹಯೋಗದಲ್ಲಿ 'ಎಮ್ಮೆಕೆರೆ'ಯ ವಿ-ವನ್‌ಈಜುಕೇಂದ್ರದಲ್ಲಿ ಆಯೋಜಿಸಿದ್ದ ಚಾಂಪಿಯನ್‌ಷಿ‍ಪ್‌ನಲ್ಲಿ ಬಿಎಸಿ ಒಟ್ಟು 769 ಪಾಯಿಂಟ್ ಕಲೆ ಹಾಕಿತು. ನೆಟ್ಟಕಲ್ಲಪ್ಪ ಈಜುಕೇಂದ್ರ 270 ಪಾಯಿಂಟ್ ಗಳಿಸಿತು.

ಬಿಎಸಿಯ ಡ್ಯಾನಿಯಲ್ ಇಮ್ಯಾನು ಯೆಲ್ ಸಲ್ಡಾನ ಬಾಲಕರ ಡಿ-1 ವಿಭಾಗದಲ್ಲಿ ವೈಯಕ್ತಿಕ ಚಾಂಪಿಯನ್ ಆದರು. ಡಿ-2 ವಿಭಾಗದಲ್ಲಿ ಎನ್‌ಎಂಎಸ್‌ಎಯ ಇಶಾನ್ ಪಾಲ್‌, ಸಿ-1ನಲ್ಲಿ ಬಿಎಸಿಯ ಕೃಷ್‌ ಮತ್ತು ಸಿ-2 ವಿಭಾಗದಲ್ಲಿ ಜೆಐಆರ್‌ಎಸ್‌ನ ಅಮಿತ್ ಪವನ್‌ ಚಾಂಪಿಯನ್ ಆದರು. ಬಾಲಕಿಯರ ಡಿ-1ನಲ್ಲಿ ಏಕಲವ್ಯ ಅಕಾಡೆಮಿಯ ಜಾರ್ನ ಸಿಸೋಡಿಯ, ಡಿ-2ನಲ್ಲಿ ಕೆಎಸ್‌ಎಯ ಆನ್ವಿ ಜಾ, ಸಿ-1ನಲ್ಲಿ ಜೀ ಸಂಸ್ಥೆಯ ಇಡಿಕಾ ಭಟ್‌ ಮತ್ತು ಸಿ-2ನಲ್ಲಿ ಸ್ವಿಮ್‌ಲೈಫ್‌ನ ನೈರಾ ಬೋಪಣ್ಣ ಪ್ರಶಸ್ತಿ ಗೆದ್ದರು.

ಕೊನೆಯ ದಿನದ ಫಲಿತಾಂಶಗಳು (ಚಿನ್ನ ಗೆದ್ದವರು): ಬಾಲಕರು: 50 ಮೀಟರ್ಸ್ ಫ್ರೀಸ್ಟೈಲ್‌: 14 ವರ್ಷದೊಳಗಿನವರು: ಕೃಷ್ (ಬಿಎಸಿ). ಕಾಲ: 25.20ಸೆಕೆಂಡು; 13 ವರ್ಷದೊಳಗಿನವರು: ಸಿದ್ಧಾಂತ್ ಹೊನ್ನಪ್ಪ (ಬಿಎಸಿ) ಕಾಲ: 28.02ಸೆ; 100 ಮೀ ಬಟರ್‌ಫ್ಲೈ: 14 ವರ್ಷದೊಳಗಿನವರು: ವ್ಯಾಸ್ ವಿಜಯ್‌ (ಡಿಕೆವಿ) ಕಾಲ: 1ನಿ 2:37ಸೆ; 13 ವರ್ಷದೊಳಗಿನವರು: ಅಮಿತ್ ಪವನ್‌ (ಜೆಐಆರ್‌ಎಸ್) ಕಾಲ:1ನಿ1:45ಸೆ; 12 ವರ್ಷದೊಳಗಿನವರು: ಋತ್ವಾ (ಡಾಲ್ಫಿನ್‌) ಕಾಲ: 1 ನಿ 08.22ಸೆ; 11 ವರ್ಷದೊಳಗಿನವರು: ಲೋಚನ್ ವೇದಾಂತ್ (ಗ್ಲೋಬಲ್‌) ಕಾಲ: 1ನಿ 14:90ಸೆ; 200 ಮೀ ಫ್ರೀಸ್ಟೈಲ್‌: 14 ವರ್ಷದೊಳಗಿನವರು: ಜಸ್ ಸಿಂಗ್ (ಎಸಿಇ) ಕಾಲ: 2ನಿ 2:81ಸೆ; 13 ವರ್ಷದೊಳಗಿನವರು: ಅಮಿತ್ ಪವನ್‌ (ಜೆಐಆರ್‌ಎಸ್‌) ಕಾಲ: 2ನಿ 5:79ಸೆ; 12 ವರ್ಷದೊಳಗಿವರು: ವಿವಾನ್ ಕೃಷ್ಣ (ರೇ) ಕಾಲ: 2ನಿ15:90ಸೆ; 11 ವರ್ಷದೊಳಗಿನವರು: ಇಶಾನ್ ಪಾಲ್ (ಎನ್‌ಎಂಎಸ್‌ಎ) ಕಾಲ: 2ನಿ26:20 ಸೆ.

ಬಾಲಕಿಯರು: 50 ಮೀಟರ್ಸ್ ಫ್ರೀಸ್ಟೈಲ್‌: 14 ವರ್ಷದೊಳಗಿನವರು: ದಿಶಾ ರಾಜೇಶ ಹೊಂಡಿ28.74ಸೆ; 13 ವರ್ಷದೊಳಗಿನವರು: ಸ್ವಿತಿ ದಿವಾಕರ್ ಸುವರ್ಣ (ಬಿಎಸಿ) ಕಾಲ: 28.97ಸೆ; 100 ಮೀ ಬಟರ್‌ಫ್ಲೈ: 14 ವರ್ಷದೊಳಗಿನವರು: ಮಾನ್ಯಾ ವಾದ್ವ (ಡಾಲ್ಫಿನ್‌) ಕಾಲ: 1ನಿ 8:16ಸೆ; 13 ವರ್ಷದೊಳಗಿನವರು: ಸ್ವಿತಿ ಸುವರ್ಣ (ಬಿಎಸಿ) ಕಾಲ: 1ನಿ 9:14ಸೆ; 12 ವರ್ಷದೊಳಗಿನವರು: ಪನಿಷ್ಕಾ ಕೆ (ಎಐಎಂಎಸ್‌) ಕಾಲ: 1ನಿ13:55ಸೆ; 11 ವರ್ಷದೊಳಗಿನವರು: ಆನ್ವಿ ಜಾ (ಕೆಎಸ್‌ಎ) ಕಾಲ: 1ನಿ 14:28ಸೆ; 200 ಮೀ ಫ್ರೀಸ್ಟೈಲ್‌: 14 ವರ್ಷದೊಳಗಿನವರು: ಇಡಿಕಾ ಭಟ್‌ (ಝಡ್‌ಎಸ್‌ಎ) ಕಾಲ: 2ನಿ16:45ಸೆ; 13 ವರ್ಷದೊಳಗಿನವರು: ನೈರಾ ಬೋಪಣ್ಣ (ಸ್ವಿಮ್‌ಲೈಫ್‌) ಕಾಲ: 2ನಿ17:47ಸೆ; 12 ವರ್ಷದೊಳಗಿವರು: ಗಾಯತ್ರಿ ಸೋಮಯಾಜಿ (ಸ್ವಿಮ್ ಲೈಫ್‌) ಕಾಲ: 2ನಿ22:74ಸೆ; 11 ವರ್ಷ ದೊಳಗಿವನರು: ಅವನಿ ನಲ್ಲೋಡೆ (ನೆಟ್ಟಕಲ್ಲಪ್ಪ ಈಜುಕೇಂದ್ರ) ಕಾಲ: 2ನಿ30:01ಸೆ;

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260706-51-1223505982

Dailyhunt
Disclaimer: This content has not been generated, created or edited by Dailyhunt. Publisher: Prajavani