Dailyhunt
'ಬಸವಣ್ಣ ವೃತ್ತಕ್ಕೆ ಹೆಸರು ಅಧಿಕೃತಗೊಳಿಸಿ'

'ಬಸವಣ್ಣ ವೃತ್ತಕ್ಕೆ ಹೆಸರು ಅಧಿಕೃತಗೊಳಿಸಿ'

ಶ್ರೀರಂಗಪಟ್ಟಣ: 'ಪಟ್ಟಣದ ಜಯಲಕ್ಷ್ಮಿ ಕಲ್ಯಾಣ ಮಂಟಪದ ಬಳಿಯ ವೃತ್ತಕ್ಕೆ ಬಸವಣ್ಣನ ಹೆಸರು ನಾಮಕರಣ ಮಾಡುವಂತೆ ಎರಡು ವರ್ಷಗಳಿಂದ ಒತ್ತಾಯಿಸುತ್ತಿದ್ದು, ಸ್ಥಳೀಯ ‍ಪುರಸಭೆ ಆ ಹೆಸರನ್ನು ಅಧಿಕೃತಗೊಳಿಸಬೇಕು' ಎಂದು ಪ್ರಜ್ಞಾವಂತರ ವೇದಿಕೆ ಸಂಚಾಲಕ ಹಾಗೂ ವಕೀಲ ಸಿ.ಎಸ್‌.

ವೆಂಕಟೇಶ್ ಆಗ್ರಹಿಸಿದರು. ಪಟ್ಟಣದ ಜಯಲಕ್ಷ್ಮಿ ಕಲ್ಯಾಣ ಮಂಟಪದ ಬಳಿ ಪ್ರಜ್ಞಾವಂತರ ವೇದಿಕೆ ಬರೆಸಿರುವ ಫಲಕದ ಬಳಿ ಸೋಮವಾರ ನಡೆದ ಬಸವ ಜಯಂತಿಯಲ್ಲಿ ಅವರು ಮಾತನಾಡಿದರು.

ಮುಖಂಡರಾದ ಪಟೇಲ್‌ ಶಿವರಾಮೇಗೌಡ, ಕ್ಯಾತನಹಳ್ಳಿ ಚಂದ್ರಣ್ಣ, ಕೆ.ಟಿ.ರಂಗಯ್ಯ, ಎಸ್‌.ಎಂ. ಶಿವಕುಮಾರ್, ಸುಜಾತ ಅರಸ್, ಚಿಕ್ಕತಮ್ಮೇಗೌಡ, ಕೆ.ಎಸ್‌. ಸುರೇಶ್, ಅಯೂಬ್, ಜಯಸ್ವಾಮಿ, ಬಿ.ಟಿ. ದಾಸಪ್ರಕಾಶ್, ಸೋಮಶೇಖರ್‌, ಎಸ್‌.ಡಿ. ಬೆನ್ನೂರ, ನಾಗರಾಜು ಬಸವಣ್ಣ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.

ಸಾರ್ವಜನಿಕ ಆಸ್ಪತ್ರೆ: ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಸೋಮವಾರ ಬಸವ ಜಯಂತಿಯನ್ನು ಆಚರಿಸಲಾಯಿತು. ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ಸಿ.ಎಂ. ಶ್ರೀಧರ್‌ ಮತ್ತು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಸ್‌.ಡಿ.ಬೆನ್ನೂರ ಬಸವಣ್ಣ ಅವರ ವಚನಗಳ ಸಾರವನ್ನು ತಿಳಿಸಿದರು. ಶಸ್ತ್ರಚಿಕಿತ್ಸಕ ಡಾ.ಶ್ರೀನಿವಾಸ್, ಶುಶ್ರೂಣಾಧಿಕಾರಿ ಕುಸುಮಾ, ಶಿಲ್ಪಾ ಎನ್. ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260422-40-935957333

Dailyhunt
Disclaimer: This content has not been generated, created or edited by Dailyhunt. Publisher: Prajavani