Dailyhunt

ಬೆಳಗಾವಿ: 2.39 ಲಕ್ಷ ಮಂದಿಗೆ ಲಸಿಕೆ

ಬೆಳಗಾವಿ: ಜಿಲ್ಲೆಯಾದ್ಯಂತ ಶುಕ್ರವಾರ ಆಯೋಜಿಸಿದ್ದ ಮೇಳದಲ್ಲಿ ಒಟ್ಟು 2,39,137 ಮಂದಿಗೆ ಕೋವಿಡ್ ಲಸಿಕೆ ನೀಡಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.

ಇದರೊಂದಿಗೆ ಜಿಲ್ಲೆಯಲ್ಲಿ 35,00,156 ಮಂದಿ ಲಸಿಕೆ ಪಡೆದುಕೊಂಡಂತಾಗಿದೆ.

ಈ ಪೈಕಿ 27,66,898 ಮಂದಿ ಮೊದಲ ಡೋಸ್ ಹಾಗೂ 7,33,258 ಮಂದಿ ಎರಡೂ ಡೋಸ್‌ಗಳನ್ನು ತೆಗೆದುಕೊಂಡಿದ್ದಾರೆ ಎಂದು ಮಾಹಿತಿ ನೀಡಿದೆ.

ಜಿಲ್ಲಾಡಳಿತದಿಂದ ಜಿಲ್ಲೆಯಲ್ಲಿ ಶುಕ್ರವಾರ ಒಂದೇ ದಿನ ಒಟ್ಟು 3.76 ಲಕ್ಷ ಡೋಸ್ ನೀಡುವ ಗುರಿ ಹೊಂದಲಾಗಿತ್ತು. ಇದಕ್ಕಾಗಿ ವ್ಯಾಪಕ ಪ್ರಚಾರವನ್ನೂ ನೀಡಲಾಗಿತ್ತು. ಜಾಗೃತಿಯನ್ನೂ ಮೂಡಿಸಲಾಗಿತ್ತು. ಆದರೆ, ಗುರಿ ತಲು‍ಪಲು ಸಾಧ್ಯವಾಗಿಲ್ಲ. 1,208 ಸ್ಥಳಗಳಲ್ಲಿ ಲಸಿಕಾ ಮೇಳ ನಡೆಯಿತು.

Dailyhunt
Disclaimer: This content has not been generated, created or edited by Dailyhunt. Publisher: Prajavani