ಶಿಗ್ಗಾವಿ: ಸೋಯಾಬಿನ್ ಬೆಳೆ ವಿಮೆ ಹಣ ತುಂಬಿದ ರೈತರಿಗೆ ಪರಿಹಾರ ಕಲ್ಪಿಸುವಂತೆ ಆಗ್ರಹಿಸಿ ತಾಲ್ಲೂಕಿನ ನೊಂದ ರೈತ ಪಡೆಯಿಂದ ಕೃಷಿ ಇಲಾಖೆ ಕಚೇರಿಗೆ ಬೀಗ ಹಾಕಿ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.
ಎಪಿಎಂಸಿ ಮುಖ್ಯಗೇಟಿನಿಂದ ರೈತರು ಪ್ರತಿಭಟನಾ ಮೆರವಣಿಗೆ ಹಲಗೆ ಬಾರಿಸುವ ಮೂಲಕ ನಡೆಸಿದರು.
ನಂತರ ಕೃಷಿ ಇಲಾಖೆ ಕಚೇರಿ ಬೀಗ ಹಾಕಿ ಪ್ರತಿಭಟನೆ ನಡೆಸಿದರು.
ರೈತ ಮುಖಂಡ ಶಶಿಧರ ಹೊನ್ನಣ್ಣವರ ಮಾತನಾಡಿ, 2025-26ನೇ ಸಾಲಿನ ಮುಂಗಾರು ಹಂಗಾವಿನ ಸೋಯಾಬಿನ್ ಬೆಳೆ ವಿಮೆ ಹಣ ಬಾರದ ಹಾಗೆ ಮಾಡಿದ ಎಐಸಿ ವಿಮೆ ಕಂಪನಿ ರೈತರ ವಿರೋಧಿಯಾಗಿದೆ. ಜಂಟಿ ಕೃಷಿ ಅಧಿಕಾರಿಗಳ ತಪ್ಪಿನಿಂದ ಸಾವಿರಾರು ರೈತರಿಗೆ ಅನ್ಯಾಯವಾಗಿದೆ. ರೈತರಿಗೆ ಆಗಿರುವ ಅನ್ಯಾಯ ಸರಿ ಪಡಿಸುವಂತೆ ಆಗ್ರಹಿಸಿ ಮನವಿ ಸಲ್ಲಿಸಿದರು ಈವರೆಗೆ ಯಾವುದೇ ಪ್ರಯೋಜನವಾಗಿಲ್ಲ. ತಕ್ಷಣ ಮೇಲಾಧಿಕಾರಿಗಳು ಈ ಕಡೆ ಗನಮ ಹರಿಸಬೇಕು ಎಂದು ಆಗ್ರಹಿಸಿದರು.
ಮುಂಗಾರು ಋತುವಿನ ಸೋಯಾಬಿನ್ ಮಳೆಯಾಶ್ರಿತ ಬೆಳೆಯ ಬೆಳೆ ವಿಮೆಯಲ್ಲಿ ಎಐಸಿ ವಿಮಾ ಕಂಪನಿಯವರು ಮೋಸ ಮಾಡುವ ಉದ್ದೇಶದಿಂದ ತಪ್ಪು ಲೆಕ್ಕಾಚಾರ ಮಾಡಿ ರೈತರನ್ನು ವಂಚಿಸುತ್ತಿದ್ದಾರೆ. ಮಳೆಯಾಶ್ರಿತ ಸೋಯಾಬಿನ್ ಬೆಳೆಯು ಅತಿ ಹೆಚ್ಚು ಮಳೆಯಾಗಿ ಸೋಯಾಬಿನ್ ಬೆಳೆ ಇಳುವರಿಯಲ್ಲಿ ತುಂಬಾ ಕಡಿಮೆಯಾಗಿದ್ದು, ಮತ್ತು ಕೆಲವೊಂದು ಹೊಲಗಳಲ್ಲಿ ನೀರು ನಿಂತು ಸಂಪೂರ್ಣ ಕೆಟ್ಟು ಹೋಗಿದ್ದು ಇರುತ್ತದೆ. ಹೀಗಿದ್ದು ಕೂಡಾ ಎಐಸಿ ವಿಮೆ ಅಧಿಕಾರಿಗಳು ಸೋಯಾಬಿನ್ ಬೆಳೆ ಲೆಕ್ಕಾಚಾರ ವ್ಯತ್ಯಾಸ ತೋರಿದ ಕಾರಣ ಬೆಳೆ ಬಾರದಂತಾಗಿದೆ. ಅನೇವರಿ ಮಾಡುವ ಸಂದರ್ಭದಲ್ಲಿ ವಿಮೆ ಅಧಿಕಾರಿಗಳ ವರ್ತನೆಗಳನ್ನು ಸರಿಯಾಗಿ ಇಲ್ಲ. ರೈತರಿಗೆ ತಪ್ಪು ಸಂದೇಶವನ್ನು ಕೊಟ್ಟು ಬೇಕಂತಲೆ ದಾರಿ ತಪ್ಪಿಸುವ ಕೆಲಸ ಮಾಡಿದ್ದರು. ಬೆಳೆ ಕಟಾವು ಮಾಡುವ ಸಂದರ್ಭದಲ್ಲಿ ಇಳುವರಿ ಬಹಳ ಕಡಿಮೆ ಬಂದಿದ್ದು ಇರುತ್ತದೆ. ಆದರು ಸಹ ರೈತರಿಗೆ ಬೆಳೆ ವಿಮೆ ನೀಡುತ್ತಿಲ್ಲ ಎಂದರು.
ನಂತರ ಜಿಲ್ಲಾ ಕೃಷಿ ಇಲಾಖೆ ಅಧಿಕಾರಿ ಶಿವಕುಮಾರ ಮಲ್ಲಾಡದ, ತಾಲ್ಲೂಕು ಕೃಷಿ ಅಧಿಕಾರಿ ಕೊಟ್ರೇಶ ಅವರಿಗೆ ಮನವಿ ಸಲ್ಲಿಸಿದರು.ರೈತ ಮುಖಂಡರಾದ ಕಲ್ಲಪ್ಪ ಮಾರಂಬಿಡ, ಸುಭಾಸ ಮರಲಿಂಗಣ್ಣರ, ಪ್ರಕಾಶ ಹುರಳಿ, ವಿನಯಗೌಡ ಪಾಟೀಲ, ಶರಣಪ್ಪ ಕಿವುಡನವರ, ದೇವಣ್ಣ ಹಳವಳ್ಳಿ, ಶಂಭು ಕುರಗೋಡಿ, ನಾಗರಾಜ್ ಅದ್ರಶಪ್ಪನವರ, ಐ. ಬಿ. ಹರಕುಣಿ, ಎಸ್. ಬಿ. ಕುಂದಗೋಳ, ಎಂ. ಬಿ. ಹುಲ್ಲೂರ, ಎಂ. ಜಿ. ಮುಶೇಖನವರ, ಬಿ. ಎಂ. ಹುಲಿಕಟ್ಟಿ, ಪ್ರಕಾಶ ನವಲೂರ, ರಮೇಶ ಮಾಯಣ್ಣವರ ಹಾಜರಿದ್ದರು.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260704-22-1457160398

