Dailyhunt Logo
  • Light mode
    Follow system
    Dark mode
    • Play Story
    • App Story
ಬೆಳ್ಳಿ ದರ ₹72 ಸಾವಿರ ಇಳಿಕೆ

ಬೆಳ್ಳಿ ದರ ₹72 ಸಾವಿರ ಇಳಿಕೆ

ವದೆಹಲಿ: ಇಲ್ಲಿನ ಚಿನಿವಾರ ಪೇಟೆಯಲ್ಲಿ ಶನಿವಾರ ನಡೆದ ವಹಿವಾಟಿನಲ್ಲಿ ಬೆಳ್ಳಿ ಧಾರಣೆಯು ಒಂದೇ ದಿನ ಕೆ.ಜಿಗೆ ₹72,500 (ಶೇ 18.85ರಷ್ಟು) ಇಳಿಕೆ ಆಗಿದೆ.

1 ಕೆ.ಜಿ ಬೆಳ್ಳಿ ದರವು ₹3.12 ಲಕ್ಷದಂತೆ ಮಾರಾಟವಾಗಿದೆ ಎಂದು ಅಖಿಲ ಭಾರತ ಸರಾಫ್ ಅಸೋಸಿಯೇಷನ್ ತಿಳಿಸಿದೆ.

2025ರ ಡಿಸೆಂಬರ್‌ 31ರಂದು ಕೆ.ಜಿ ಬೆಳ್ಳಿ ದರವು ₹2.39 ಲಕ್ಷವಿತ್ತು. ಅದು ಈಗ ₹3.12 ಲಕ್ಷಕ್ಕೆ ತಲುಪಿದ್ದು, ಒಂದೇ ತಿಂಗಳಿನಲ್ಲಿ ₹73 ಸಾವಿರ (ಶೇ 30ರಷ್ಟು) ಹೆಚ್ಚಳವಾಗಿದೆ.

10 ಗ್ರಾಂ ಚಿನ್ನದ (ಶೇ 99.9ರಷ್ಟು ಪರಿಶುದ್ಧತೆ) ದರವು ಶನಿವಾರದಂದು ₹3,500 ಕಡಿಮೆಯಾಗಿ, ₹1,65,500ಕ್ಕೆ ಇಳಿದಿದೆ.

ಕಳೆದ ಡಿಸೆಂಬರ್ 31ರಂದು ಚಿನ್ನದ ದರವು ₹1,37,700 ಇತ್ತು. ಒಂದು ತಿಂಗಳಿನಲ್ಲಿ ಬೆಲೆಯು ₹27,800 ಹೆಚ್ಚಳವಾಗಿದೆ ಎಂದು ತಿಳಿಸಿದೆ.

ಲಾಭದ ಗಳಿಕೆಗಾಗಿ ಹೂಡಿಕೆದಾರರು ಚಿನ್ನ ಮತ್ತು ಬೆಳ್ಳಿ ಮಾರಾಟಕ್ಕೆ ಮುಂದಾಗಿದ್ದಾರೆ. ಇದು ಅಮೂಲ್ಯ ಲೋಹಗಳ ದರದ ಇಳಿಕೆಗೆ ಕಾರಣ ಎಂದು ತಿಳಿಸಿದೆ.

Dailyhunt
Disclaimer: This content has not been generated, created or edited by Dailyhunt. Publisher: Prajavani