Dailyhunt Logo
  • Light mode
    Follow system
    Dark mode
    • Play Story
    • App Story
ಬೇಲೂರಿನ ಛತ್ರದಲ್ಲಿ ಎಸ್‌ಐಆರ್ ಪ್ರಕ್ರಿಯೆ: ಸಾರ್ವಜನಿಕರಿಗೆ ತೊಂದರೆ

ಬೇಲೂರಿನ ಛತ್ರದಲ್ಲಿ ಎಸ್‌ಐಆರ್ ಪ್ರಕ್ರಿಯೆ: ಸಾರ್ವಜನಿಕರಿಗೆ ತೊಂದರೆ

ಬೇಲೂರು (ಹಾಸನ): ಇಲ್ಲಿನ ಪುರಸಭೆ ವ್ಯಾಪ್ತಿಯ ಐದನೇ ವಾರ್ಡ್‌ನ ಕನ್ನಿಕಾ ಪರಮೇಶ್ವರಿ ಛತ್ರದಲ್ಲಿ ಬಿಎಲ್‌ಒಗಳು ಸಾರ್ವಜನಿಕರನ್ನು ಒಂದೇ ಸ್ಥಳಕ್ಕೆ ಕರೆಸಿ ಮತದಾರರ ಪರಿಷ್ಕರಣೆ ಕಾರ್ಯ ನಡೆಸುತ್ತಿದ್ದಾರೆ.

ಮನೆ ಮನೆಗೆ ತೆರಳಿ ಮತದಾರರ ವಿವರ ಪರಿಶೀಲಿಸಿ ಅಗತ್ಯ ದಾಖಲಾತಿ ಸಂಗ್ರಹಿಸುವ ಬದಲು ಸಾರ್ವಜನಿಕರಿಗೆ ಕಲ್ಯಾಣಮಂಟಪಕ್ಕೆ ಬರುವಂತೆ ಸೂಚಿಸಲಾಗಿದೆ.

'ಎಲ್ಲಾ ದಾಖಲೆಗಳು ಮತ್ತು ಫೈಲ್‌ಗಳನ್ನು ಮನೆ, ಮನೆಗೆ ತೆಗೆದುಕೊಂಡು ಹೋಗಲು ಸಾಧ್ಯವಿಲ್ಲ. ಸಾರ್ವಜನಿಕರು ಇಲ್ಲಿಗೇ ಬಂದು ಎಸ್‌ಐಆರ್ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಬಿಎಲ್‌ಒಗಳು ಹೇಳುತ್ತಿದ್ದಾರೆ' ಎಂದು ಜನರು ದೂರಿದ್ದಾರೆ. ಇದರಿಂದ ವಯೋವೃದ್ಧರು, ಅಂಗವಿಕಲರು ಹಾಗೂ ಕೆಲಸದ ನಿಮಿತ್ತ ಹೊರಗಿರುವವರಿಗೆ ತೊಂದರೆಯಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. 'ಮಳೆ ಬರುತ್ತಿತ್ತು ಹಾಗಾಗಿ ಕಲ್ಯಾಣ ಮಂಟಪದ ಒಳಗೆ ಕುಳಿತು ಬರೆದುಕೊಳ್ಳುತ್ತಿದೆ. ಎಲ್ಲರಿಗೂ ಕಲ್ಯಾಣ ಮಂಟಪಕ್ಕೆ ಬರುವಂತೆ ಹೇಳಿಲ್ಲ' ಎಂದು ಬಿಎಲ್‌ಒ ರವಿ ಸ್ಪಷ್ಟಪಡಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260704-51-1366350719

Dailyhunt
Disclaimer: This content has not been generated, created or edited by Dailyhunt. Publisher: Prajavani