Dailyhunt Logo
  • Light mode
    Follow system
    Dark mode
    • Play Story
    • App Story
ಬೆಂಗಳೂರಲ್ಲಿ ಬೆಂಕಿ ಅವಘಡ: ಮೊಬೈಲ್‌, ಹೆಲ್ಮೆಟ್‌ ಮಳಿಗೆ ಭಸ್ಮ

ಬೆಂಗಳೂರಲ್ಲಿ ಬೆಂಕಿ ಅವಘಡ: ಮೊಬೈಲ್‌, ಹೆಲ್ಮೆಟ್‌ ಮಳಿಗೆ ಭಸ್ಮ

ಬೆಂಗಳೂರು: ಸುಧಾಮ ನಗರದ ನಾಲ್ಕು ಅಂತಸ್ತಿನ ಕಟ್ಟಡದಲ್ಲಿ ಶುಕ್ರವಾರ ತಡರಾತ್ರಿ ಬೆಂಕಿ ಅವಘಡ ಸಂಭವಿಸಿದ್ದು, ನೆಲಮಹಡಿಯಲ್ಲಿದ್ದ ಹೆಲ್ಮೆಟ್ ಹಾಗೂ ಮೊಬೈಲ್‌ ಮಳಿಗೆಗಳು ಭಸ್ಮವಾಗಿವೆ.

ಮಳಿಗೆಯಲ್ಲಿದ್ದ ಹೆಲ್ಮೆಟ್‌, ಮೊಬೈಲ್‌ ಹಾಗೂ ಮೊಬೈಲ್‌ ಬಿಡಿಭಾಗಗಳು, ಪೀಠೋಪಕರಣಗಳು ಭಸ್ಮವಾಗಿವೆ.

ಶಾರ್ಟ್‌ ಸರ್ಕಿಟ್‌ನಿಂದ ಬೆಂಕಿ ಅವಘಡ ಸಂಭವಿಸರಬಹುದು ಎಂದು ಶಂಕಿಸಲಾಗಿದೆ.

ಮೇಲಿನ ಮಹಡಿಗಳಲ್ಲಿ ಮನೆಗಳಿದ್ದು ಜನರು ವಾಸ ಮಾಡುತ್ತಿದ್ದರು. ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆಯೇ ಅವರೆಲ್ಲರೂ ಹೊರಗೆ ಬಂದು ಪಾರಾಗಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ ನಿರಂತರ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Prajavani