Dailyhunt
ಬೆಂಗಳೂರಿನಲ್ಲಿ ಝಾಂಬಿ ಡ್ರಗ್ಸ್? ಪೊಲೀಸರಿಗೆ ದುನಿಯಾ ವಿಜಯ್ ವಿಶೇಷ ಮನವಿ

ಬೆಂಗಳೂರಿನಲ್ಲಿ ಝಾಂಬಿ ಡ್ರಗ್ಸ್? ಪೊಲೀಸರಿಗೆ ದುನಿಯಾ ವಿಜಯ್ ವಿಶೇಷ ಮನವಿ

ತ್ತೀಚಿನ ದಿನಗಳಲ್ಲಿ ಝಾಂಬಿ ಹೆಸರಿನ ಡ್ರಗ್ಸ್ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಈ ಡ್ರಗ್ಸ್ ತೆಗೆದುಕೊಂಡವರು ನಿಂತಲ್ಲಿಯೇ ನಿಂತಿರುತ್ತಾರೆ. ಯಾವುದೇ ಚಲನೆ ಇರುವುದಿಲ್ಲ. ಸದ್ಯ, ಬೆಂಗಳೂರಿನಲ್ಲಿ ಯುವಕನೊಬ್ಬ ಝಾಂಬಿ ಡ್ರಗ್ಸ್ ಸೇವಿಸಿ, ನಿಂತಲ್ಲೆ ನಿಂತಿದ್ದಾನೆ ಎಂದು ಹೇಳುವ ವಿಡಿಯೊ ಒಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.

ಈ ಕುರಿತು ನಟ ದುನಿಯಾ ವಿಜಯ್ ಅವರು ಪ್ರತಿಕ್ರಿಯಿಸಿದ್ದಾರೆ.

ಚಂಡೀಗಢದ ಸೆಕ್ಟರ್ 33Bನಲ್ಲಿ ಮಾರ್ಚ್ 24ರಂದು ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೊ ಒಂದು ಹರಿದಾಡಿತ್ತು. ಅದು ದಿನಬಳಕೆ ವಸ್ತುಗಳನ್ನು ಗ್ರಾಹಕರಿಗೆ ತಲುಪಿಸುವ ಇ-ಕಾಮರ್ಸ್ ವೇದಿಕೆ 'ಬ್ಲಿಂಕಿಟ್'ನಲ್ಲಿ ಕೆಲಸ ಮಾಡುವ ಯುವಕನದು. ಆತ ಭಾರವಾದ ಬ್ಯಾಗ್ ಹೊತ್ತುಕೊಂಡು, ಜಗತ್ತಿನ ಪರಿವೆಯೇ ಇಲ್ಲದವನಂತೆ ನಿಂತಲ್ಲಿಯೇ ನಿಂತಿದ್ದನು. ಘಟನೆ ಪರಿಶೀಲಿಸಿದಾಗ, ಆತ ಝಾಂಬಿ ಎಂಬ ಡ್ರಗ್ಸ್ ತೆಗೆದುಕೊಂಡಿರುವುದು ಬೆಳಕಿಗೆ ಬಂದಿತ್ತು.

ಇದೀಗ ಅಂತಹದ್ದೆ ವಿಡಿಯೊ ಒಂದು ಬೆಂಗಳೂರಿನಲ್ಲಿ ಕಂಡು ಬಂದಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಈ ಕುರಿತು ಕನ್ನಡದ ನಟ ದುನಿಯಾ ವಿಜಯ್ ಅವರು ಪ್ರತಿಕ್ರಿಯೆ ನೀಡಿ, 'ಝಾಂಬಿ ಎಂಬ ಹೊಸ ಡ್ರಗ್ ಒಂದು ಬೆಂಗಳೂರಿಗೆ ಕಾಲಿಟ್ಟಿರುವ ಬಗ್ಗೆ ಮಾಹಿತಿ ಹರಿದಾಡುತ್ತಿದೆ. ಯುವಕರು ಹಾಗೂ ಪೋಷಕರು ಇದರ ಕುರಿತು ಎಚ್ಚರಿಕೆಯಿಂದ ಇರಬೇಕು' ಎಂದಿದ್ದಾರೆ.

ವಿಶೇಷವಾಗಿ, ಪೋಷಕರು ಮಕ್ಕಳ ಕುರಿತು ಕಾಳಜಿ ವಹಿಸಬೇಕು ಎಂದು ಕರೆ ನೀಡಿದ್ದಾರೆ. ಮುಂದುವರೆದು ಮಾತನಾಡಿದ ಅವರು, '‍ಪೊಲೀಸ್ ಇಲಾಖೆ ಈ ಬಗ್ಗೆ ಗಮನಹರಿಸಿ, ಈ ಡ್ರಗ್ಸ್‌ನ ಕುರಿತು ತನಿಖೆ ನಡೆಸಿ ಸತ್ಯಾಸತ್ಯತೆಯನ್ನು ಬಯಲಿಗೆ ತರಬೇಕು ಎಂದು ಮನವಿ ಮಾಡಿದ್ದಾರೆ. ಮಾತ್ರವಲ್ಲ, ಈ ರೀತಿಯ ಘಟನೆಗಳು ಕಂಡು ಬಂದರೆ ಕೂಡಲೆ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು' ಎಂದು ಕರೆ ನೀಡಿದ್ದಾರೆ.

ನಟ ದುನಿಯಾ ವಿಜಯ್ ಅವರು, ಬೆಂಗಳೂರಿನ ಡ್ರಗ್ಸ್ ದಂಧೆಯ ಕರಾಳತೆಯ ಕುರಿತು ಆಗಾಗ ಮಾತನಾಡುತ್ತಿರುತ್ತಾರೆ. ಕಳೆದ ವರ್ಷ ಬಿಡುಗಡೆಯಾದ 'ಭೀಮಾ' ಸಿನಿಮಾದ ಮೂಲಕ ಬೆಂಗಳೂರಿನಲ್ಲಿ ಗಾಂಜಾ ಮತ್ತು ಡ್ರಗ್ಸ್ ಯುವಕರ ಮೇಲೆ ಯಾವ ರೀತಿ ಪರಿಣಾಮ ಬೀರುತ್ತೆ, ಅದರಿಂದ ಯುವಕರು ದೂರ ಇರಬೇಕು ಎಂಬ ಸಂದೇಶ ನೀಡಿದ್ದರು.

Dailyhunt
Disclaimer: This content has not been generated, created or edited by Dailyhunt. Publisher: Prajavani