Friday, 10 Sep, 6.56 pm ಪ್ರಜಾವಾಣಿ

ಜಿಲ್ಲೆ
ಬೆಂಗಳೂರು: ಐದನೇ ಮಹಡಿಯಿಂದ ಬಿದ್ದು ಗಾರೆ‌ ಮೇಸ್ತ್ರಿ ಸಾವು

ಬೆಂಗಳೂರು: ಜೆ.ಸಿ.ನಗರ ಠಾಣೆ ವ್ಯಾಪ್ತಿಯಲ್ಲಿರುವ‌ ನಿರ್ಮಾಣ ಹಂತದ ಕಟ್ಟಡದ ಐದನೇ ಮಹಡಿಯಿಂದ ಬಿದ್ದು ವೆಂಕಟಸ್ವಾಮಿ (46) ಎಂಬುವರು ಮೃತಪಟ್ಟಿದ್ದಾರೆ.

'ಡಿ.ಜೆ. ಹಳ್ಳಿಯ ವಾಹಬ್ ಗಾರ್ಡನ್ ನಿವಾಸಿ ವೆಂಕಟಸ್ವಾಮಿ, ನಿರ್ಮಾಣ ಹಂತದ ಕಟ್ಟಡದಲ್ಲಿ ಗಾರೆ ಕೆಲಸದ ಮೇಸ್ತ್ರಿ ಆಗಿದ್ದರು' ಎಂದು ಪೊಲೀಸರು ‌ಹೇಳಿದರು.

'ಠಾಣೆ ವ್ಯಾಪ್ತಿಯ ಬೋರ್ ಬ್ಯಾಂಕ್ ರಸ್ತೆ ಬಳಿಯ‌ ಜಾಗದಲ್ಲಿ 10 ದಿನಗಳಿಂದ ಕಟ್ಟಡ ನಿರ್ಮಾಣ ಕೆಲಸ ನಡೆಯುತ್ತಿದೆ. ಹಬ್ಬದ‌ ದಿನವಾದ ಶುಕ್ರವಾರವೂ ಕೆಲಸಕ್ಕೆ ‌ಬಂದಿದ್ದ ವೆಂಕಟಸ್ವಾಮಿ, ಐದನೇ ಮಹಡಿಯಲ್ಲಿ ಕೆಲಸ ಮಾಡುತ್ತಿದ್ದರು. ಇದೇ ವೇಳೆಯೇ ಆಯ ತಪ್ಪಿ ಬಿದ್ದಿದ್ದರು. ತೀವ್ರ‌ ಗಾಯಗೊಂಡು ಅವರು ಅಸುನೀಗಿದ್ದಾರೆ' ಎಂದೂ‌ ಮಾಹಿತಿ ನೀಡಿದರು.

'ಕೆಲಸದ ಸ್ಥಳದಲ್ಲಿ ಯಾವುದೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿರಲಿಲ್ಲ. ಜಾಗದ ಮಾಲೀಕ ಹಾಗೂ ಗುತ್ತಿಗೆದಾರನ ಬಗ್ಗೆ‌ ಮಾಹಿತಿ ಕಲೆಹಾಕಲಾಗುತ್ತಿದೆ' ಎಂದೂ‌ ಪೊಲೀಸರು ಹೇಳಿದರು.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Prajavani
Top