Dailyhunt Logo
  • Light mode
    Follow system
    Dark mode
    • Play Story
    • App Story
ಬೆಂಗಳೂರು |  ಹೋಟೆಲ್‌ನಲ್ಲಿ ಗುಂಡು ಪತ್ತೆ: ಆರೋಪಿ ಸೆರೆ

ಬೆಂಗಳೂರು | ಹೋಟೆಲ್‌ನಲ್ಲಿ ಗುಂಡು ಪತ್ತೆ: ಆರೋಪಿ ಸೆರೆ

ಬೆಂಗಳೂರು: ಇಲ್ಲಿನ ಜಯಮಹಲ್‌ ಪ್ಯಾಲೇಸ್‌ ಹೋಟೆಲ್‌ನಲ್ಲಿ ಜೀವಂತ ಗುಂಡುಗಳು ಪತ್ತೆಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಅನಿವಾಸಿ ಭಾರತೀಯ ಪ್ರಜೆಯನ್ನು ಜೆ.ಸಿ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಅರ್ಮಾನ್ ಮುತಾಹರ್(34) ಬಂಧಿತ. ಆರೋಪಿಯನ್ನು ಬಂಧಿಸಿ, ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಗಿದೆ.

ಹೋಟೆಲ್‌ನಲ್ಲಿದ್ದ ಏಳು ಜೀವಂತ ಗುಂಡು
ಗಳಿರುವ ರೂಗರ್ ಕಂಪನಿಯ ಮ್ಯಾಗ್ಜಿನ್‌ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಹೇಳಿದರು.

ಹೋಟೆಲ್‌ ವ್ಯವಸ್ಥಾಪಕ ನೀಡಿದ ದೂರಿನ ಮೇಲೆ ಪ್ರಕರಣದ ತನಿಖೆ
ನಡೆಸಲಾಗುತ್ತಿದೆ.

ಕೆಲವು ವರ್ಷಗಳ ಹಿಂದೆ ಉದ್ಯೋಗದ ನಿಮಿತ್ತ ಅರ್ಮಾನ್ ಅಮೆರಿಕಕ್ಕೆ ತೆರಳಿದ್ದರು. ಆರಂಭದಲ್ಲಿ ಅಲ್ಲಿನ ವಿಮಾನ ನಿಲ್ದಾಣದಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದರು. ಬಳಿಕ, ಆ ಕೆಲಸ ಬಿಟ್ಟು ಸಾಫ್ಟ್‌ವೇರ್‌ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿ ದ್ದರು. ಆಗಾಗ್ಗೆ ಆರ್‌. ಟಿ.ನಗರಕ್ಕೆ ಬಂದು ತಾಯಿ, ಸಹೋದರಿಯನ್ನು ಭೇಟಿಯಾಗಿ ಯೋಗಕ್ಷೇಮ ವಿಚಾರಿಸುತ್ತಿದ್ದರು. ಅಲ್ಲದೇ ಹೋಟೆಲ್‌ನಲ್ಲಿ ಸ್ನೇಹಿತರ ಜತೆಗೂ ಪಾರ್ಟಿ ನಡೆಸಿ ಅಮೆರಿಕಕ್ಕೆ ತೆರಳುತ್ತಿದ್ದರು ಎಂದು ಪೊಲೀಸರು ಹೇಳಿದರು.

ಅದೇ ರೀತಿ ಕಳೆದ ಏಪ್ರಿಲ್‌ನಲ್ಲೂ ಬೆಂಗಳೂರಿಗೆ ಬಂದಿದ್ದ ಆರೋಪಿ, ಏ.27 ರಂದು ಜೆ.ಸಿ ನಗರದ ಜಯಮಹಲ್‌ ಪ್ಯಾಲೇಸ್‌ ಹೋಟೆಲ್‌ನಲ್ಲಿ ಕೊಠಡಿಯೊಂದನ್ನು ಬಾಡಿಗೆ ಪಡೆದುಕೊಂಡು ಏ.28ರ ಬೆಳಿಗ್ಗೆ ಖಾಲಿ ಮಾಡಿದ್ದರು. ಕೊಠಡಿಯಲ್ಲೇ ಏಳು ಜೀವಂತ ಗುಂಡು ಇರುವ ಮ್ಯಾಗ್ಜಿನ್‌ ಬಿಟ್ಟು ಹೋಗಿದ್ದರು. ಕೆಲ ಹೊತ್ತಿನ ಬಳಿಕ ಹೋಟೆಲ್‌ಗೆ ಕರೆಮಾಡಿ, 'ತನ್ನ ಕೋಣೆಯಲ್ಲಿ ಗುಂಡುಗಳನ್ನು ಬಿಟ್ಟು ಬಂದಿದ್ದು, ಸುರಕ್ಷಿತವಾಗಿ ತೆಗೆದು ಇಟ್ಟಿರಿ. ವಾಪಸ್ ಬಂದು ತೆಗೆದುಕೊಂಡು ಹೋಗುತ್ತೇನೆ' ಎಂಬುದಾಗಿ ಹೇಳಿದ್ದರು. ಅದರಂತೆ ಹೋಟೆಲ್‌ ಸಿಬ್ಬಂದಿ ಜೀವಂತ ಗುಂಡುಗಳನ್ನು ಹೋಟೆಲ್‌ ವ್ಯವಸ್ಥಾಪಕರಿಗೆ ಹಸ್ತಾಂತರಿಸಿದ್ದರು. ಆ ನಂತರ ಹೋಟೆಲ್‌ಗೂ ಬಾರದೆ, ವ್ಯವಸ್ಥಾಪಕ ಕರೆ ಮಾಡಿದರೂ ಅರ್ಮಾನ್ ಮುತಾಹರ್ ನಿರ್ಲಕ್ಷ್ಯ ವಹಿಸಿದ್ದರು. ಅದಾದ ಮೇಲೆ ಹೋಟೆಲ್ ವ್ಯವಸ್ಥಾಪಕರು ದೂರು ನೀಡಿದ್ದರು ಎಂದು ಮೂಲಗಳು ಹೇಳಿದರು.

ಜೆ.ಸಿ ನಗರ ಠಾಣೆಯ ಪೊಲೀಸರು ಆರೋಪಿಯನ್ನು 10 ದಿನ ವಿಚಾರಣೆ ನಡೆಸಿದ್ದಾರೆ. ಜತೆಗೆ ರಾಜ್ಯದ ಬೇರೆ ಬೇರೆ ತನಿಖಾ ಸಂಸ್ಥೆಗಳೂ ಆರೋಪಿಯನ್ನು ವಿಚಾರಣೆ ನಡೆಸಿವೆ. ಸದ್ಯ ಉದ್ದೇಶ ಪೂರ್ವಕವಾಗಿ ತಂದಿಲ್ಲ ಎಂಬುದು ಗೊತ್ತಾಗಿದೆ ಎಂದು ಪೊಲೀಸರು ಹೇಳಿದರು. ಜೆ.ಸಿ.ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಎಲ್ಲಾ ತನಿಖಾ ಸಂಸ್ಥೆಗಳಿಂದಲೂ ವಿಚಾರಣೆ

ಪಂಜಾಬ್ ಮಹಿಳೆ ಜತೆಗೆ ಮದುವೆ

'ಅಮೆರಿಕದಲ್ಲಿ ಇರುವಾಗಲೇ ರೂಗರ್ ಎಂಬ ಪಿಸ್ತೂಲ್‌ ಖರೀದಿಸಿದ್ದೆ. ಅದಕ್ಕೆ ನಾಲ್ಕು ಮ್ಯಾಗ್ಜಿನ್‌ ಪಡೆದುಕೊಂಡಿದ್ದೆ. ಕೌಟುಂಬಿಕ ವಿಚಾರವಾಗಿ ಪತಿಯಿಂದ ದೂರವಾಗಿದ್ದ ಪಂಜಾಬ್‌ನ ಮಹಿಳೆಯನ್ನು ಮದುವೆಯಾಗಿದ್ದೆ. ಆದರೆ ಆಕೆ ಇತ್ತೀಚೆಗೆ ತನ್ನ ಮೊದಲ ಪತಿ ಜತೆಗೆ ಮತ್ತೆ ಆತ್ಮೀಯವಾಗುತ್ತಿದ್ದಳು. ಇದರಿಂದ ಬೇಸರವಾಗಿತ್ತು ಎಂಬುದಾಗಿ ಆರೋಪಿ ವಿಚಾರಣೆ ವೇಳೆ ತಿಳಿಸಿದ್ದಾನೆ' ಎಂದು ಪೊಲೀಸರು ಹೇಳಿದರು. 'ಮಹಿಳೆಯ ಮೊದಲ ಪತಿಗೂ ಒಮ್ಮೆ ಪಿಸ್ತೂಲ್‌ ತೋರಿಸಿ ಆರೋಪಿ ಬೆದರಿಸಿದ್ದರು. ಆಗ ಅವರು ಪಿಸ್ತೂಲ್‌ ಕಸಿದುಕೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದರು' ಎಂದು ಪೊಲೀಸರು ಹೇಳಿದರು. 'ಅರ್ಮಾನ್ ಮುತಾಹರ್ ಅವರು ತಮ್ಮ ಮನೆಯ ಬೀರುವಿನಲ್ಲಿ ಬಟ್ಟೆಯಲ್ಲಿ ಸುತ್ತಿ ಜೀವಂತ ಗುಂಡುಗಳನ್ನು ಇಟ್ಟಿದ್ದರು. ಭಾರತಕ್ಕೆ ಬರುವಾಗ ಬಟ್ಟೆಯ ಜತೆಗೆ ಜೀವಂತ ಗುಂಡುಗಳನ್ನೂ ತಂದಿದ್ದರು ಎಂಬುದು ಗೊತ್ತಾಗಿದೆ' ಎಂದು ಪೊಲೀಸರು ಹೇಳಿದರು.

ಎರಡು ದೇಶದ ವಿಮಾನ ನಿಲ್ದಾಣದಲ್ಲೂ ಅರ್ಮಾನ್ ಮುತಾಹರ್ ಅವರನ್ನು ತಪಾಸಣೆಗೆ ಒಳಪಡಿಸಲಾಗಿತ್ತು. ಜೀವಂತ ಗುಂಡುಗಳನ್ನು ಬಟ್ಟೆಯಲ್ಲಿ ಸುತ್ತಿದ್ದರಿಂದ ಮೆಟಲ್‌ ಡಿಟೆಕ್ಟರ್‌ನಲ್ಲೂ ಅವುಗಳು ಪತ್ತೆ ಆಗಿರಲಿಲ್ಲ ಎಂದು ಮೂಲಗಳು ಹೇಳಿವೆ.ಸಿಗದ ಸುಳಿವು
Dailyhunt
Disclaimer: This content has not been generated, created or edited by Dailyhunt. Publisher: Prajavani