Dailyhunt Logo
  • Light mode
    Follow system
    Dark mode
    • Play Story
    • App Story
ಬೇಟೆ ಆತಂಕ, ಅಳಿವಿನಂಚಿನ ಪ‍ಟ್ಟಿಯಲ್ಲಿರುವ ಜಿರಾಫೆಗಳ ಅರಣ್ಯ ಜೀವನ ಹೇಗಿರಲಿದೆ

ಬೇಟೆ ಆತಂಕ, ಅಳಿವಿನಂಚಿನ ಪ‍ಟ್ಟಿಯಲ್ಲಿರುವ ಜಿರಾಫೆಗಳ ಅರಣ್ಯ ಜೀವನ ಹೇಗಿರಲಿದೆ

ಸಂಕ್ಷಿಪ್ತ ಮಾಹಿತಿ - ಪೂರ್ಣ ವಿವರಣೆಗೆ ಕ್ಲಿಕ್ ಮಾಡಿಪ್ರಮುಖ ಮುಖ್ಯಾಂಶಗಳ ಸಂಕ್ಷಿಪ್ತ ಸಾರಾಂಶ

ಬೇಟೆ ಆತಂಕ, ಅಳಿವಿನಂಚಿನ ಪ‍ಟ್ಟಿಯಲ್ಲಿರುವ ಜಿರಾಫೆಗಳ ಅರಣ್ಯ ಜೀವನ ಹೇಗಿರಲಿದೆ

ಒಂದು ಸಾಲಿನಲ್ಲಿಜಿರಾಫೆಗಳು ವನ್ಯಜೀವಿಗಳ ಬೇಟೆ ಮತ್ತು ಮನುಷ್ಯನ ಹಸ್ತಕ್ಷೇಪದಿಂದ ಅಳಿವಿನಂಚಿನಲ್ಲಿದ್ದು, ಅವುಗಳ ರಕ್ಷಣೆಗಾಗಿ ಜಾಗತಿಕ ಪ್ರಯತ್ನಗಳು ನಡೆಯುತ್ತಿವೆ.

ಪ್ರಮುಖ ಪ್ರಶ್ನೋತ್ತರ


ಜಿರಾಫೆಗಳು ಯಾವ ಕಾರಣದಿಂದ ಅಳಿವಿನಂಚಿನಲ್ಲಿವೆ?

ಜಿರಾಫೆಗಳನ್ನು ಕ್ರೀಡೆಗಾಗಿ ಮತ್ತು ಮೋಜಿನ ಉದ್ದೇಶದಿಂದ ಅಕ್ರಮವಾಗಿ ಬೇಟೆಯಾಡಲಾಗುತ್ತಿದೆ. ಟ್ರೋಫಿ ಬೇಟೆಗಾರರು ಹಣ ಪಾವತಿಸಿ ಇವುಗಳನ್ನು ಕೊಲ್ಲುತ್ತಿರುವುದರಿಂದ ಇವುಗಳ ಸಂಖ್ಯೆ ಕ್ಷೀಣಿಸುತ್ತಿದೆ.


ಜಿರಾಫೆಗಳ ನೈಸರ್ಗಿಕ ಆವಾಸಸ್ಥಾನ ಎಲ್ಲಿವೆ?

ಜಿರಾಫೆಗಳು ಮುಖ್ಯವಾಗಿ ಆಫ್ರಿಕಾದ ಹುಲ್ಲುಗಾವಲುಗಳು ಮತ್ತು ಸವನ್ನಾ ಕಾಡುಗಳಲ್ಲಿ ವಾಸಿಸುತ್ತವೆ. ವಿಶೇಷವಾಗಿ ಕೀನ್ಯಾ, ತಾಂಜಾನಿಯಾ, ಉಗಾಂಡ, ನಮೀಬಿಯಾ ಮತ್ತು ದಕ್ಷಿಣ ಆಫ್ರಿಕಾದಲ್ಲಿ ಇವುಗಳ ಸಂಖ್ಯೆ ಹೆಚ್ಚು.


ಜಿರಾಫೆಗಳ ರಕ್ಷಣೆಗೆ ಕೈಗೊಂಡಿರುವ ಕ್ರಮಗಳೇನು?

ಜಿರಾಫೆ ಸಂರಕ್ಷಣಾ ಫೌಂಡೇಶನ್ ಮೂಲಕ ಜಿರಾಫೆಗಳನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗುತ್ತಿದೆ. ಇದಕ್ಕಾಗಿ ಸ್ಯಾಟಲೈಟ್ ಆಧಾರಿತ ಜನಸಂಖ್ಯೆ ಪುನರುತ್ಥಾನ ಕಾರ್ಯಕ್ರಮಗಳನ್ನು ಜಾರಿಗೆ ತರಲಾಗಿದೆ.


ವಿಶ್ವ ಜಿರಾಫೆ ದಿನವನ್ನು ಏಕೆ ಆಚರಿಸಲಾಗುತ್ತದೆ?

ಪ್ರತಿ ವರ್ಷ ಜೂನ್ 21 ರಂದು ಅತಿ ಎತ್ತರದ ಪ್ರಾಣಿಯಾದ ಜಿರಾಫೆಯನ್ನು ಗೌರವಿಸಲು ಈ ದಿನವನ್ನು ಆಚರಿಸಲಾಗುತ್ತದೆ. ವರ್ಷದ ಅತಿ ಉದ್ದದ ದಿನ ಇದಾಗಿರುವುದರಿಂದ ಈ ದಿನಾಂಕವನ್ನು ಆಯ್ಕೆ ಮಾಡಲಾಗಿದೆ.


ಜಿರಾಫೆಗಳ ದೈಹಿಕ ವಿಶೇಷತೆಗಳೇನು?

ಜಿರಾಫೆಗಳು ಸುಮಾರು 50 ಸೆ.ಮೀ ಉದ್ದದ ನಾಲಿಗೆಯನ್ನು ಹೊಂದಿದ್ದು, 5.5 ಮೀಟರ್‌ಗಳಿಗಿಂತ ಹೆಚ್ಚು ಎತ್ತರ ಬೆಳೆಯಬಲ್ಲವು. ಅವು ದೈನಂದಿನ ನಾಲುವೆಯ ಸಮಯದಲ್ಲಿ ಕೇವಲ 4 ಗಂಟೆ ಮಾತ್ರ ನಿದ್ರಿಸುತ್ತವೆ.

ಪ್ರಮುಖ ಅಂಕಿಅಂಶಗಳು

1.50 ಲಕ್ಷಅರಣ್ಯ ಪ್ರದೇಶಗಳಲ್ಲಿರುವ ಜಿರಾಫೆಗಳ ಅಂದಾಜು ಸಂಖ್ಯೆ1600ವಿಶ್ವದಾದ್ಯಂತ ಮೃಗಾಲಯದಲ್ಲಿರುವ ಜಿರಾಫೆಗಳ ಸಂಖ್ಯೆ15 ವರ್ಷಜಿರಾಫೆಯ ಸರಾಸರಿ ಆಯುಷ್ಯ (ಅರಣ್ಯದಲ್ಲಿ)68,837ದಕ್ಷಿಣ ಜಿರಾಫೆಗಳ ಸಂಖ್ಯೆ50 ಸೆ.ಮೀಜಿರಾಫೆಯ ನಾಲಿಗೆಯ ಉದ್ದ

ಎಐ ಬಳಸಿ ಸಂಸ್ಕರಿಸಲಾಗಿದೆ. ಪಿವಿ ಡಿಜಿಟಲ್ ತಂಡ ಪರಿಶೀಲಿಸಿದೆ

ಜಿರಾಫೆಗಳು ಸಾಮಾಜಿಕವಾಗಿ ಮಾತ್ರವಲ್ಲ ಬುದ್ಧಿವಂತ ಜೀವಿಗಳೂ ಹೌದು. ಜಿರಾಫೆ ಎನ್ನುವ ವಿಶಿಷ್ಟ ಪ್ರಾಣಿಯ ಮೂಲ ಆಫ್ರಿಕದ ಅರಣ್ಯ. ಈಗಲೂ ಆಫ್ರಿಕಾದ ಅರಣ್ಯದಲ್ಲಿಯೇ ಅವುಗಳ ಸಂಖ್ಯೆ ಅಧಿಕವಾಗಿದೆ. ಸುಮಾರು 1.50 ಲಕ್ಷ ಜಿರಾಫೆಗಳು ಅರಣ್ಯ ಪ್ರದೇಶದಲ್ಲಿ ಇರುವ ಅಂದಾಜಿದೆ. ಪೂರ್ವ, ದಕ್ಷಿಣ, ಪಶ್ಚಿಮ ಹಾಗೂ ಮಧ್ಯ ಆಫ್ರಿಕಾದ ಹಲವು ಭಾಗದಲ್ಲಿ ಜಿರಾಫೆಗಳ ನೆಲೆ ಉಳಿದಿದೆ.

ಪೂರ್ವ ಆಫ್ರಿಕಾದಲ್ಲಿ ಮುಖ್ಯವಾಗಿ ಕೀನ್ಯಾದ ಮಸಾಯ್‌ ಮಾರಾ ರಕ್ಷಿತಾರಣ್ಯ ಪ್ರದೇಶ, ಉಗಾಂಡ ಹಾಗೂ ಟಾಂಜಾನಿಯದ ಅರಣ್ಯ, ಮಧ್ಯ ಆಫ್ರಿಕಾದ ಚಾರ್‌, ಕ್ಯಾಮರೂನ್‌, ದಕ್ಷಿಣ ಆಫ್ರಿಕಾ ಗಣರಾಜ್ಯದ ಕ್ರೂಗರ್ ರಾಷ್ಟ್ರೀಯ ಉದ್ಯಾನ ಹಾಗೂ ನಮೀಬಿಯಾದಲ್ಲಿ ಜಿರಾಫೆಗಳು ಹೆಚ್ಚಿವೆ. ಹುಲ್ಲುಗಾವಲುಗಳು ಮತ್ತು ಸವನ್ನಾ ಕಾಡುಗಳೇ ಅವುಗಳ ಆವಾಸ ಸ್ಥಾನ.

ಎಲ್ಲಾ ಜಿರಾಫೆಗಳು ಆಫ್ರಿಕಾದ ಹುಲ್ಲುಗಾವಲುಗಳು ಮತ್ತು ತೆರೆದ ಕಾಡುಪ್ರದೇಶಗಳಲ್ಲಿ ವಾಸಿಸುತ್ತವೆ. ಜಿರಾಫೆಗಳ ವಿಧಗಳಲ್ಲಿ ಉತ್ತರ ಜಿರಾಫೆ, ದಕ್ಷಿಣ ಜಿರಾಫೆ, ಮಸಾಯಿ ಜಿರಾಫೆ ಮತ್ತು ರೆಟಿಕ್ಯುಲೇಟೆಡ್ ಜಿರಾಫೆ ಸೇರಿವೆ. ಯಾವು ಪ್ರತ್ಯೇಕವಾಗಿ ಇರಲು ಬಯಸುವ ಪ್ರಾಣಿಗಳು. ಅದರಲ್ಲೂ ಮನುಷ್ಯನಿಂದ ಅಂತರವನ್ನು ಕಾಪಾಡಿಕೊಳ್ಳಲು ಪ್ರಯತ್ನಿಸುತ್ತವೆ. ಜಿರಾಫೆಗಳ ಗುಂಪನ್ನು ಗೋಪುರ ಎಂದು ಕರೆಯಲಾಗುತ್ತದೆ,

ಅರಣ್ಯ ಪ್ರದೇಶದಲ್ಲಿ ಜಿರಾಫೆಗಳ ಬದುಕು ಸುಸೂತ್ರವಾಗಿಲ್ಲ. ಆಫ್ರಿಕನ್ ಜಿರಾಫೆಗಳನ್ನು ಕ್ರೀಡೆಗಾಗಿ ಬೇಟೆಯಾಡಲಾಗುತ್ತದೆ. ಟ್ರೋಫಿ ಬೇಟೆಗಾರರು ಈ ಕಾಡು ಪ್ರಾಣಿಗಳನ್ನು ಅವುಗಳ ನೈಸರ್ಗಿಕ ಆವಾಸಸ್ಥಾನದಲ್ಲಿ ಬೇಟೆಯಾಡಲು ಹಣ ಪಾವತಿಸುತ್ತಾರೆ. ಮೋಜಿಗಾಗಿಯೇ ನಡೆಯುವ ಅಕ್ರಮ ಬೇಟೆ ಹಾಗೂ ಟ್ರೋಫಿ ಬೇಟೆ ಕಾರಣಕ್ಕೆ ಪ್ರತಿ ವರ್ಷ ನೂರಾರು ಜಿರಾಫೆ ಜೀವ ಕಳೆದುಕೊಳ್ಳುತ್ತಿವೆ. ಜಿರಾಫೆಗಳು ಅಂತರರಾಷ್ಟ್ರೀಯ ನಿಸರ್ಗ ಮತ್ತು ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣಾ ಒಕ್ಕೂಟd(ಐಯುಸಿಎನ್) ಅಳಿವಿನಂಚಿನಲ್ಲಿರುವ ಪಟ್ಟಿಯಲ್ಲಿ ಕೆಂಪು ವಲಯದಲ್ಲಿ ಸೇರಿಸಲಾಗಿದೆ.

ಸಂರಕ್ಷಣಾ ಚಟುವಟಿಕೆ
ಜಿರಾಫೆಗಳನ್ನು ರಕ್ಷಿಸಲು ಆಫ್ರಿಕಾದಲ್ಲಿ ಕಳೆದ ಒಂದು ದಶಕದಲ್ಲಿ ನಾನಾ ಚಟುವಟಿಕೆಗಳನ್ನು ಕೈಗೊಳ್ಳಲಾಗಿದೆ. ಜಿರಾಫೆ ಸಂಕ್ಷಣಾ ಫೌಂಡೇಷನ್‌ ಮೂಲಕ ವಿವಿಧ ಅಲ್ಲಿನ ವಿವಿಧ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ. ಅದು ಸಂಪೂರ್ಣ ಸೆಟಲೈಟ್‌ ಆಧರಿತ ಜನಸಂಖ್ಯೆ ಪುನರುತ್ಥಾನ ಕಾರ್ಯಕ್ರಮವೂ ಆಗಿದೆ.

ಜಿರಾಫೆ ದಿನವೂ ಉಂಟು
ವಿಶ್ವ ಜಿರಾಫೆ ದಿನವನ್ನು ಪ್ರತಿ ವರ್ಷ ಜೂನ್ 21 ರಂದು ಆಚರಿಸಲಾಗುತ್ತದೆ. ವರ್ಷದ ಅತಿ ಉದ್ದದ ದಿನದಂದು ವಿಶ್ವದ ಅತಿ ಎತ್ತರದ ಪ್ರಾಣಿಯನ್ನು ಆಚರಿಸುವುದು ಸೂಕ್ತವೆಂದು ಭಾವಿಸಿ ಈ ದಿನಾಂಕವನ್ನು ಆಯ್ಕೆ ಮಾಡಲಾಗಿದೆ.

ಮೃಗಾಲಯದಲ್ಲಿ ನೆಲೆ

ಜಗತ್ತಿನ ಹಲವು ದೇಶಗಳ ಮೃಗಾಲಯಗಳಲ್ಲಿ ಜಿರಾಫೆಗಳ ಪ್ರದರ್ಶನ ಹಾಗೂ ಸಂತಾನಾಭಿವೃದ್ದಿ ಚಟುವಟಿಕೆ ನಿರಂತರವಾಗಿ ನಡೆದುಕೊಂಡು ಬಂದಿದೆ. ಅಮೆರಿಕದಲ್ಲಿಯೇ 80ಕ್ಕೂ ಹೆಚ್ಚು ಮೃಗಾಲಯಗಳಲ್ಲಿ ಜಿರಾಫೆ ಪ್ರಮುಖ ಆಕರ್ಷಣೆ. ಸಿಂಗಪುರ್‌ ಸಹಿತ ವಿಶ್ವದ ಪ್ರತಿಷ್ಠಿತ ಮೃಗಾಲಯಗಳೂ ಜಿರಾಫೆ ಪ್ರದರ್ಶನದಲ್ಲಿ ಹಿಂದೆ ಬಿದ್ದಿಲ್ಲ. ವಿಶ್ವಾದ್ಯಂತ 1600ಕ್ಕೂ ಹೆಚ್ಚು ಜಿರಾಫೆಗಳು ಮೃಗಾಲಯದಲ್ಲಿವೆ.

ಭಾರತದಲ್ಲೂ ಮೈಸೂರು, ಬೆಂಗಳೂರು, ಹಂಪಿ, ಬಿಹಾರ, ಹೈದ್ರಾಬಾದ್‌, ಚೆನ್ನೈ, ಲಖನೌ ಸಹಿತ ಹತ್ತಕ್ಕೂ ಹೆಚ್ಚು ಮೃಗಾಲಯಗಳಲ್ಲಿ ಜಿರಾಫೆಗಳ ವೀಕ್ಷಣೆಗೆ ಅವಕಾಶವಿದೆ.

ಮೃಗಾಲಯಗಳನ್ನು ಪ್ರಾಣಿ ವಿನಿಯಮ ಯೋಜನೆಯಡಿ ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಮಾತ್ರವಲ್ಲದೇ ಹೊರ ದೇಶಗಳಿಗೂ ನೀಡುವ ಸಂಪ್ರದಾಯ ಹಲವಾರು ವರ್ಷಗಳಿಂದ ಇದೆ. ಜಿರಾಫೆ ದತ್ತು ರೂಪದಲ್ಲಿ ನೀಡಲು ಕೆಲವು ಮೃಗಾಲಯಗಳು ಆನೆ, ಚಿಂಪಾಂಜಿ ಸಹಿತ ಪ್ರಮುಖ ಪ್ರಾಣಿಗಳನ್ನು ಪಡೆಯುತ್ತವೆ. ಶತಮಾನದ ಹಿಂದೆಯೇ ಭಾರತಕ್ಕೆ ಜಿರಾಫೆಗಳು ಬಂದು ಸದ್ಯ 100ಕ್ಕೂ ಹೆಚ್ಚು ಜಿರಾಫೆಗಳು ಇರುವ ಅಂದಾಜಿದೆ. ರೆಟಿಕುಲೇಟೆಡ್ ತಳಿಯ ಜಿರಾಫೆಗಳೇ ಮೃಗಾಲಯದಲ್ಲಿ ಹೆಚ್ಚು ಇರೋದು.

ದಕ್ಷಿಣ ಜಿರಾಫೆ(Giraffa giraffa) 68,837 ಮಸಾಯ್‌ ಜಿರಾಫೆ(Giraffa tippelskirchi) 43,926 ರೆಟಿಕುಲೇಟೆಡ್ ಜಿರಾಫೆ(Giraffa reticulata) 20901 ಉತ್ತರ ಜಿರಾಫೆ(Giraffa camelopardalis) 7037 ನುಬಿಯನ್‌ ಜಿರಾಫೆ (Nubian giraffe) 3977 ಕೊರ್ಡೋಫಾನ್‌ ಜಿರಾಫೆ( Kordofan giraffe) 2391 ಪಶ್ಚಿಮ ಆಫ್ರಿಕಾ ಜಿರಾಫೆ(Northern Giraffe) 49 ----ಬಗೆಬಗೆಯ ಜಿರಾಫೆಗಳು ಎಷ್ಟಿವೆಆಹಾರ ಏನು:ಜಿರಾಫೆಗಳು ಸಸ್ಯಾಹಾರಿಗಳು. ಅವು ಚಿಗುರುಗಳು ಮತ್ತು ಎಲೆ , ವಿಶೇಷವಾಗಿ ಮುಳ್ಳಿನ ಅಕೇಶಿಯ ಮರವನ್ನು ಇಷ್ಟಪಡುತ್ತವೆ. ಗಂಡು ಜಿರಾಫೆಯು ಒಂದೇ ದಿನದಲ್ಲಿ 65 ಕೆಜಿಯಷ್ಟು ಆಹಾರ ಸೇವಿಸುತ್ತವೆ. ಸಂತಾನಾಭಿವೃದ್ದಿ ಜಿರಾಫೆಯ ಗರ್ಭಾವಸ್ಥೆಯು 15 ತಿಂಗಳವರೆಗೆ ಇರುತ್ತದೆ. ಒಂದೂವರೆ ವರ್ಷದಿಂದ ಎರಡು ವರ್ಷದೊಳಗೆ ಮರಿ ಹಾಕುತ್ತದೆ. ನಾಲಿಗೆ ಮಹಿಮೆಜಿರಾಫೆಗಳಿಗೆ 50 ಸೆ.ಮೀ ಉದ್ದ ನಾಲಿಗೆಯಿದೆ. ಅವು ಮರಗಳಲ್ಲಿನ ಆಹಾರಕ್ಕಾಗಿ ಉದ್ದನೆ ನಾಲಿಗೆ ಚಾಚಿ ಸುಲಭವಾಗಿ ಆಹಾರ ಸೇವಿಸುತ್ತವೆ. ಎಷ್ಟು ಎತ್ತರವಿದೆ?ಇವುಗಳ ಎತ್ತರ 5.5 ಮೀಟರ್‌ಗಳಿಗಿಂತ ಹೆಚ್ಚು ಇರಬಹುದು. ಮರಿ ಜಿರಾಫೆಗಳು ಕೂಡ 3 ಮೀಟರ್‌ಗಿಂತ ಉದ್ದವೇ ಇರುತ್ತವೆ. ನವಜಾತ ಜಿರಾಫೆಯ ಎತ್ತರ 2 ಮೀಟರ್‌ಗೂ ಅಧಿಕ. ನಿದ್ರೆ ಹೇಗೆಜಿರಾಫೆಗಳು ದಿನದ 24 ಗಂಟೆಗಳಲ್ಲಿ ನಿದ್ರೆಗೆ ಮೀಸಲಿಡುವುದು ಬರೀ 4 ಗಂಟೆ ಮಾತ್ರ. 5 ನಿಮಿಷದಿಂದ 30 ನಿಮಿಷ ಕಾಲ ಸಣ್ಣ ನಿದ್ರೆ ಮಾಡುತ್ತವೆ. ಎಷ್ಟು ಕಾಲ ಬದುಕುತ್ತವೆ?ಜಿರಾಫೆಗಳು 20 ರಿಂದ 25 ವರ್ಷಗಳವರೆಗೆ ಬದುಕುಬಲ್ಲವು. ಮೃಗಾಲಯದಂತಹ ಸನ್ನಿವೇಶದಲ್ಲಿ ಇದು ಸಾಧ್ಯ. ಅರಣ್ಯ ಪ್ರದೇಶದಲ್ಲಿ ಬೇಟೆ, ದಾಳಿ ಕಾರಣದಿಂದ ಕೆಲವೊಮ್ಮೆ ಆಯುಷ್ಯ ಕಡಿಮೆ. ಅದು 15 ವರ್ಷವೂ ಆಗಬಹುದು. ಕೊಂಬಿನ ವಿಶೇಷಗಂಡು ಮತ್ತು ಹೆಣ್ಣು ಜಿರಾಫೆಗಳೆರಡಕ್ಕೂ ಒಂದು ಜೋಡಿ ಕೊಂಬು ಇರುತ್ತವೆ. ಇವುಗಳನ್ನು ಆಸಿಕೋನ್‌ಗಳು ಎಂದು ಕರೆಯಲಾಗುತ್ತದೆ. ಹೆಣ್ಣಿಗಿಂತ ಗಂಡು ಜಿರಾಫೆ ಕೊಂಬುಗಳು ಎದ್ದು ಕಾಣುತ್ತವೆ. ತಮ್ಮ ಪ್ರಾಬಲ್ಯ ಸಾಬೀತುಪಡಿಸುವಾಗ ಇಲ್ಲವೇ ಹೆಣ್ಣಿನೊಂದಿಗೆ ಜೊತೆಯಾಗುವ ಹಕ್ಕುಗಳಿಗೆ ಸ್ಪರ್ಧೆ ಏರ್ಪಟ್ಟಾಗ ಗಂಡಿನ ಕೊಂಬು ಬಳಕೆಯಾಗುತ್ತವೆ. ----ಜಿರಾಫೆ ಜೀವನದ ಸುತ್ತ
Dailyhunt
Disclaimer: This content has not been generated, created or edited by Dailyhunt. Publisher: Prajavani