Dailyhunt Logo
  • Light mode
    Follow system
    Dark mode
    • Play Story
    • App Story
ಭಾಗವತ್‌ ವೀಸಾ ರದ್ದುಗೊಳಿಸಿ: ಅಮೆರಿಕ ಸರ್ಕಾರಕ್ಕೆ ಯುಎಸ್‌ಸಿಐಆರ್‌ಎಫ್‌ ಒತ್ತಾಯ

ಭಾಗವತ್‌ ವೀಸಾ ರದ್ದುಗೊಳಿಸಿ: ಅಮೆರಿಕ ಸರ್ಕಾರಕ್ಕೆ ಯುಎಸ್‌ಸಿಐಆರ್‌ಎಫ್‌ ಒತ್ತಾಯ

ವಾಷಿಂಗ್ಟನ್‌: 'ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್‌) ಸರಸಂಘಚಾಲಕ ಮೋಹನ್‌ ಭಾಗವತ್‌ ಅವರಿಗೆ ನೀಡಲಾಗಿರುವ ವೀಸಾವನ್ನು ಕೂಡಲೇ ರದ್ದುಗೊಳಿಸಬೇಕು' ಎಂದು ಅಮೆರಿಕದ ಅಂತರರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ಆಯೋಗವು (ಯುಎಸ್‌ಸಿಐಆರ್‌ಎಫ್‌) ಡೊನಾಲ್ಡ್‌ ಟ್ರಂಪ್‌ ಸರ್ಕಾರವನ್ನು ಒತ್ತಾಯಿಸಿದೆ.

ಆಗಸ್ಟ್‌ 29ರಂದು ಮ್ಯಾಡಿಸನ್‌ ಸ್ಕ್ವೇರ್‌ನ ಇನ್ಫೊಸಿಸ್ ಥಿಯೇಟರ್‌ನಲ್ಲಿ 'ಅಮೆರಿಕದಲ್ಲಿನ ಹಿಂದೂಗಳ ಭಾಗವಹಿಸುವಿಕೆ ಮತ್ತು ಚರ್ಚೆ' (ಎಎಚ್‌ಇಎಡಿ) ಸಂಸ್ಥೆಯು 'ವಿಶ್ವ ಏಕತೆ ಸಂಭ್ರಮಾಚರಣೆ' ಕಾರ್ಯಕ್ರಮವನ್ನು ಆಯೋಜಿಸಿದೆ. ಈ ಕಾರ್ಯಕ್ರಮದಲ್ಲಿ ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಅವರು ಭಾಗವಹಿಸಿ, ಸಂವಾದದಲ್ಲಿ ಪಾಲ್ಗೊಳ್ಳಲಿದ್ದಾರೆ.

'ಭಾಗವತ್‌ ಅವರು ಅಮೆರಿಕಕ್ಕೆ ಭೇಟಿ ನೀಡುತ್ತಿರುವ ವಿಚಾರವು ತೀವ್ರ ಕಳವಳ ಉಂಟುಮಾಡಿದೆ. ಸಂಘ ಪರಿವಾರದ ಸದಸ್ಯರು ಧಾರ್ಮಿಕ ಅಲ್ಪಸಂಖ್ಯಾತರ ಮೇಲೆ ನಿರಂತರ ದಾಳಿಗಳನ್ನು ನಡೆಸುತ್ತಿದ್ದಾರೆ. ಧಾರ್ಮಿಕ ಸ್ವಾತಂತ್ರ್ಯದ ಉಲ್ಲಂಘನೆಯಲ್ಲಿ ಭಾಗಿಯಾಗುತ್ತಿರುವ ವಿರುದ್ಧ ಅಮೆರಿಕ ಸರ್ಕಾರವು ಶಿಕ್ಷೆ ವಿಧಿಸಬೇಕು. ಭಾಗವತ್‌ ಅವರ ವೀಸಾವನ್ನೂ ಕೂಡಲೇ ರದ್ದುಗೊಳಿಸಬೇಕು' ಎಂದು ಯುಎಸ್‌ಸಿಐಆರ್‌ಎಫ್‌ನ ಅಧ್ಯಕ್ಷ ಆಸೀಫ್‌ ಮಹಮ್ಮೂದ್‌ ಒತ್ತಾಯಿಸಿದ್ದಾರೆ.

ಯುಎಸ್‌ಸಿಐಆರ್‌ಎಫ್‌ನ ವಾದವನ್ನು ಭಾರತ ತಿರಸ್ಕರಿಸಿದೆ.

'ಭಾಗವತ್‌ ವಿರುದ್ಧ ಆರೋಪ ಮಾಡಿರುವ ಸಂಸ್ಥೆಯು ವಿಶ್ವಾಸಾರ್ಹತೆಯ ಕೊರತೆ ಹೊಂದಿದ್ದು, ಪಕ್ಷಪಾತದ ಸಂಸ್ಥೆಯಾಗಿದೆ' ಎಂದು ತಿಳಿಸಿದೆ.

Dailyhunt
Disclaimer: This content has not been generated, created or edited by Dailyhunt. Publisher: Prajavani