Dailyhunt Logo
  • Light mode
    Follow system
    Dark mode
    • Play Story
    • App Story
ಭಾರತ ತಂಡದ ಜೆರ್ಸಿ ಸ್ವೀಕರಿಸಿದ ವೈಭವ್ ಸೂರ್ಯವಂಶಿ: ಭಾವುಕ ವಿಡಿಯೊ ಇಲ್ಲಿದೆ

ಭಾರತ ತಂಡದ ಜೆರ್ಸಿ ಸ್ವೀಕರಿಸಿದ ವೈಭವ್ ಸೂರ್ಯವಂಶಿ: ಭಾವುಕ ವಿಡಿಯೊ ಇಲ್ಲಿದೆ

ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಉತ್ತಮ ಪ್ರದರ್ಶನ ತೋರವ ಮೂಲಕ, ಐರ್ಲೆಂಡ್ ಮತ್ತು ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಗಾಗಿ ಆಯ್ಕೆ ಮಾಡಿರುವ ಭಾರತ ತಂಡದಲ್ಲಿ ಸ್ಥಾನ ಪಡೆದಿರುವ ವೈಭವ್ ಸೂರ್ಯವಂಶಿ ಅವರು ತಮ್ಮ ಹೆಸರಿರುವ ಜರ್ಸಿ ಸ್ವೀಕರಿಸಿದ್ದಾರೆ.

ವೈಭವ್ ಸೂರ್ಯವಂಶಿ ಅವರು ತಮ್ಮ ಹೆಸರಿನ ಜೊತೆ 03 ನಂಬರ್‌ ಹೊಂದಿರುವ ಭಾರತ ತಂಡದ ನೀಲಿ ಬಣ್ಣದ ಜೆರ್ಸಿಯನ್ನು ಸ್ವೀಕರಿಸಿದ್ದಾರೆ.

ಬಳಿಕ, 'ಈ ಕ್ಷಣವನ್ನು ವಿವರಿಸಲು ನನಗೆ ಪದಗಳೇ ಇಲ್ಲ. ನನ್ನ ಬಾಲ್ಯದ ಕನಸು ನನಸಾಗಿದೆ' ಎಂದು ಹೇಳಿಕೊಂಡಿದ್ದಾರೆ. ಈ ವಿಡಿಯೊವನ್ನು ಬಿಸಿಸಿಐ ಹಂಚಿಕೊಂಡಿದೆ.

'ಇದನ್ನು ಪದಗಳಲ್ಲಿ ವ್ಯಕ್ತಪಡಿಸುವುದು ಕಷ್ಟ. ನಾನು ಮೊದಲು ಬ್ಯಾಟ್ ಎತ್ತಿಕೊಂಡು ಕ್ರಿಕೆಟ್ ಮೈದಾನಕ್ಕೆ ಅಭ್ಯಾಸ ಮಾಡಲು ಹೋದಾಗ, ಮುಂದೊಂದು ದಿನ ಭಾರತ ಕ್ರಿಕೆಟ್ ತಂಡದ ಜೆರ್ಸಿಯನ್ನು ಧರಿಸಬೇಕು ಎಂದುಕೊಂಡಿದ್ದೆ. ಆ ಕನಸು ಈಗ ನನಸಾಗಿದೆ' ಎಂದಿದ್ದಾರೆ.

'ಈ ಕ್ಷಣವನ್ನು ವಿವರಿಸಲು ನನಗೆ ಪದಗಳೇ ಇಲ್ಲ. ಇದೊಂದು ಕನಸಿನಂತೆ ಭಾಸವಾಗುತ್ತಿದೆ. ಜೆರ್ಸಿಯನ್ನು ನೋಡಿದ ಕ್ಷಣ, ನನಗೆ ತುಂಬಾ ಸಂತೋಷವಾಯಿತು. ನನಗೆ ನಗು ತಡೆಯಲಾಗುತ್ತಿಲ್ಲ. ಕೆಲವೊಮ್ಮೆ, ನಿಮ್ಮ ಜೀವನದಲ್ಲಿ ಎಂದಿಗೂ ಊಹಿಸದ ಸಂಗತಿಗಳು ಸಂಭವಿಸಿದಾಗ, ನಿಮಗೂ ಪ್ರತಿಕ್ರಿಯಿಸಲು ಸಾಧ್ಯವಾಗುವುದಿಲ್ಲ. ಈಗ ನನಗೂ ಹಾಗೆ ಆಗುತ್ತಿದೆ' ಎಂದು ಹೇಳಿದ್ದಾರೆ.

ವೈಭವ್ ಸೂರ್ಯವಂಶಿ ಅವರಿಗೆ ಥ್ರೋಡೌನ್ ಸ್ಪೆಷಲಿಸ್ಟ್ ಕರ್ನಾಟಕದ ರಾಘವೇಂದ್ರ ದಿವಗಿ ಅವರು ಭಾರತ ತಂಡದ ಜೆರ್ಸಿ ತಂದು ಕೊಡುತ್ತಿರುವ ಹಾಗೂ ಅದನ್ನು ಸೂರ್ಯವಂಶಿ ಸ್ವೀಕರಿಸಿದ ಬಳಿಕ ಮಾತನಾಡಿರುವ ವಿಡಿಯೊವನ್ನು ಬಿಸಿಸಿಐ ತನ್ನ ಅಧಿಕೃತ ಸಮಾಜಿಕ ಮಾಧ್ಯಮದ ಖಾತೆಯಲ್ಲಿ ಹಂಚಿಕೊಂಡಿದೆ.

ವೈಭವ್ ಸೂರ್ಯವಂಶಿ ಇತ್ತೀಚೆಗೆ ಶ್ರೀಲಂಕಾದಲ್ಲಿ ಮುಕ್ತಾಯಗೊಂಡ ಭಾರತ, ಶ್ರೀಲಂಕಾ ಹಾಗೂ ಅಫ್ಗಾನಿಸ್ತಾ ಎ ತಂಡಗಳ ನಡುವಿನ ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ಎ ವಿರುದ್ಧ ಕೇವಲ 29 ಎಸೆತಗಳ್ಲಲಿ 94 ರನ್ ಸಿಡಿಸಿ ಮಿಂಚಿದ್ದಾರೆ. ಅದೇ ವೇಳೆ ಅವರು ಕೇವಲ 11 ಎಸೆತಗಳಲ್ಲಿ ಅರ್ಧಶತಕ ಸಿಡಿಸುವ ಮೂಲಕ ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಅತೀ ವೇಗದ ಅರ್ಧಶತಕ ಸಿಡಿಸಿದ ಆಟಗಾರ ಎಂಬ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Prajavani