ದುಬೈ: ಒಮಾನ್ನ ದುಕ್ಮ್ ಬಂದರಿನಲ್ಲಿ ಲಂಗರು ಹಾಕಲಾಗಿರುವ ತೈಲ ಹಡಗಿನಲ್ಲಿದ್ದ ಭಾರತೀಯ ಪ್ರಜೆಯೊಬ್ಬರು ಅನಾರೋಗ್ಯದದಿಂದ ಮೃತಪಟ್ಟಿದ್ದಾರೆ ಎಂದು ಮಸ್ಕತ್ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಶನಿವಾರ ತಿಳಿಸಿದೆ.
ಮೃತರನ್ನು ನಿಶಾಂತ್ ಉಯಿರ್ಥನಾಥನ್ ಎಂದು ಗುರುತಿಸಲಾಗಿದೆ.
ಇವರು 'ಎಂಟಿ ಸೆಲೆಸ್ಟಿಯಲ್' (MT Celestial) ಎಂಬ ಹಡಗಿನಲ್ಲಿದ್ದಾಗ ತೀವ್ರ ಆರೋಗ್ಯ ಸಮಸ್ಯೆಯಿಂದಾಗಿ ಕೊನೆಯುಸಿರೆಳೆದಿದ್ದಾರೆ ಎಂದು ರಾಯಭಾರ ಕಚೇರಿ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಪೋಸ್ಟ್ ಮಾಡಿದೆ.
ಮೃತ ದೇಹ ದುಕ್ಮ್ ಬಂದರಿನಲ್ಲಿರುವ ಹಡಗಿನಲ್ಲಿದೆ. ಹಡಗು ನಿರ್ವಹಣಾ ಕಂಪನಿ ಅಲ್ಲಿನ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿರುವುದಾಗಿ ರಾಯಭಾರ ಕಚೇರಿ ತಿಳಿಸಿದೆ.
ನಿಶಾಂತ್ ನಿಧನಕ್ಕೆ ತೀವ್ರ ಸಂತಾಪ ಸೂಚಿಸಿರುವ ರಾಯಭಾರ ಕಚೇರಿ, ಮೃತ ದೇಹವನ್ನು ಭಾರತಕ್ಕೆ ಶೀಘ್ರವಾಗಿ ಕಳುಹಿಸಲು ಅಗತ್ಯ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ ಎಂದೂ ಹೇಳಿದೆ.

