Dailyhunt Logo
  • Light mode
    Follow system
    Dark mode
    • Play Story
    • App Story
ಭಾರತೀಯ ನೃತ್ಯ ಕಲಾ ಶಾಲೆಗೆ ಶೇ 100 ಫಲಿತಾಂಶ

ಭಾರತೀಯ ನೃತ್ಯ ಕಲಾ ಶಾಲೆಗೆ ಶೇ 100 ಫಲಿತಾಂಶ

ನಾಪೋಕ್ಲು: ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದಿಂದ ಇತ್ತೀಚೆಗೆ ಮೈಸೂರಿನಲ್ಲಿ ನಡೆಸಿದ ಭರತನಾಟ್ಯ ಜೂನಿಯರ್ ಗ್ರೇಡ್ ಪರೀಕ್ಷೆಯಲ್ಲಿ ಭಾರತೀಯ ನೃತ್ಯ ಕಲಾ ಶಾಲೆಯ ಮೂರ್ನಾಡು ಮತ್ತು ಸಿದ್ದಾಪುರದ ವಿದ್ಯಾರ್ಥಿಗಳು ಉತ್ತಮ ಅಂಕಗಳೊಂದಿಗೆ ಶೇ 100 ಫಲಿತಾಂಶ ಗಳಿಸಿದ್ದಾರೆ.

ಭರತನಾಟ್ಯ ಪರೀಕ್ಷೆಗೆ ಹಾಜರಾಗಿದ್ದ ಎಲ್ಲ ವಿದ್ಯಾರ್ಥಿನಿಯರುಉನ್ನತ ಶ್ರೇಣಿ ಮತ್ತು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗುವ ಮೂಲಕ ನೃತ್ಯ ಶಾಲೆಗೆ ಹೆಸರು ತಂದಿದ್ದಾರೆ.

ಭಾರತೀಯ ನೃತ್ಯ ಕಲಾ ಶಾಲೆಯ ಮೂರ್ನಾಡಿನ ವಿದ್ಯಾರ್ಥಿಗಳಾದ ರಜತ ಸಿ.ಜೆ, ಶಿಲ್ಪಿತ ಬಿ.ಎಸ್, ದಕ್ಷಪ್ರಿಯ ಟಿ.ಪಿ, ಸಿದ್ದಾಪುರದ ವಿದ್ಯಾರ್ಥಿಗಳಾದ ಬಿ.ಎಲ್. ಸಾನ್ವಿಕ, ಕೆ.ಎಸ್. ಶೃಂಚನ, ಎಂ. ವೃತ್ತಿಕ ಮತ್ತು ವಿ.ವಿ. ಅಮಯ ಉತ್ತಮ ಅಂಕ ಪಡೆದವರು. ಇವರು ನೃತ್ಯ ಕಲಾ ಶಾಲೆಯ ನೃತ್ಯ ಗುರುಗಳಾದ ವಿದುಷಿ ಜಲಜ ನಾಗರಾಜ್ ಅವರ ಮಾರ್ಗದರ್ಶನದಲ್ಲಿ ನೃತ್ಯ ಶಿಕ್ಷಣ ಪಡೆಯುತ್ತಿದ್ದಾರೆ.

261104-51-1831366403

Dailyhunt
Disclaimer: This content has not been generated, created or edited by Dailyhunt. Publisher: Prajavani