ಜೆರುಸಲೇಂ: ಭಾರತೀಯ ಸೇನೆಯು ತನ್ನ 'ನೆಗೇವ್' ಮಷಿನ್ ಗನ್‌ಗೆ ಅಳವಡಿಸಲು ಇಸ್ರೇಲಿ ಸಂಸ್ಥೆ 'ಮೆಪ್ರೊಲೈಟ್ಸ್'ನ 'ಮೆಪ್ರೊx6' ದೂರದರ್ಶಕಗಳನ್ನು (ಟೆಲಿಸ್ಕೋಪ್) ಆಯ್ಕೆ ಮಾಡಿದೆ. 6x ಸಾಮರ್ಥ್ಯದ ಈ ಟೆಲಿಸ್ಕೋಪ್‌ಗಳು ಯಾವುದೇ ಹವಾಮಾನದಲ್ಲೂ ಕಾರ್ಯಾಚರಣೆಗೆ ಅನುವಾಗುವಂತಹ ಸ್ಪಷ್ಟ ಗೋಚರತೆ ಒದಗಿಸಬಲ್ಲವು ಎಂದು ಸಂಸ್ಥೆ ಹೇಳಿದೆ.
'ದೇಶಿ ಉತ್ಪಾದನೆಯನ್ನು ಉತ್ತೇಜಿಸಲು 'ಮೇಕ್ ಇನ್ ಇಂಡಿಯಾ' ಯೋಜನೆಯಡಿ ಟೆಲಿಸ್ಕೋಪ್‌ಗಳ ಉತ್ಪಾದನೆಗೆ ಸಂಬಂಧಿಸಿದ ಸಮಗ್ರ ತಂತ್ರಜ್ಞಾನ ವರ್ಗಾವಣೆಯ (ಟಿಒಟಿ) ಒಪ್ಪಂದ ಮಾಡಿಕೊಳ್ಳಲಾಗಿದೆ. ಭಾರತದ ಶಸ್ತ್ರಾಸ್ತ್ರ ತಯಾರಿಕಾ ಸಂಸ್ಥೆ 'ಆರ್‌ಆರ್‌ಪಿ ಡಿಫೆನ್ಸ್' ದೇಶಿಯವಾಗಿ ಟೆಲಿಸ್ಕೋಪ್‌ಗಳನ್ನು ಉತ್ಪಾದಿಸಿ ಅವುಗಳನ್ನು ಬಿಇಎಲ್‌ಗೆ ಪೂರೈಸಲಿದೆ. ಭಾರತೀಯ ಸೇನೆಗೆ ಟೆಲಿಸ್ಕೋಪ್‌ಗಳನ್ನು ಬಿಇಎಲ್ ವಿತರಿಸಲಿದೆ' ಎಂದು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.
'ಟೆಲಿಸ್ಕೋಪ್‌ಗಳ ನಿಖರತೆ, ಬಾಳಿಕೆ, ಕಾರ್ಯಾಚರಣೆಗೆ ಸಂಬಂಧಿಸಿದಂತೆ ಹಲವು ಆಯಾಮದಲ್ಲಿ ಪರೀಕ್ಷೆಗಳನ್ನು ನಡೆಸಿದ ಬಳಿಕ 'ಮೆಪ್ರೊx6' ಅನ್ನು ಆಯ್ಕೆ ಮಾಡಲಾಗಿದೆ. ಇದು ಮಹತ್ವದ ಮೈಲಿಗಲ್ಲು. ನಮ್ಮ ತಂತ್ರಜ್ಞಾನ ವರ್ಗಾವಣೆ ಮೂಲಕ ಸುಧಾರಿತ ತಂತ್ರಜ್ಞಾನವನ್ನು ಭಾರತಕ್ಕೆ ಒದಗಿಸುವುದಷ್ಟೇ ಅಲ್ಲದೇ ಭಾರತದ ರಕ್ಷಣಾ ವ್ಯವಸ್ಥೆ ಮತ್ತು ಉತ್ಪಾದನಾ ವ್ಯವಸ್ಥೆಯ ಭವಿಷ್ಯದ ಬೆಳವಣಿಗೆಗೆ ನಾವು ಕೊಡುಗೆ ನೀಡುತ್ತಿದ್ದೇವೆ ಎಂಬ ಹೆಮ್ಮೆ ಇದೆ' ಎಂದು ಮೆಪ್ರೊಲೈಟ್ಸ್‌ನ ಉಪಾಧ್ಯಕ್ಷ ಗೊಲಾನ್ ಕಲಿಮಿ ಹೇಳಿದ್ದಾರೆ.

