Sunday, 05 Sep, 10.26 am ಪ್ರಜಾವಾಣಿ

Breaking Shimoga
ಭದ್ರಾವತಿ: ಗೊಂಧಿ ಅಣೆಕಟ್ಟೆಯಲ್ಲಿ ಈಜಲು ಹೋಗಿ ವಿದ್ಯಾರ್ಥಿಗಳ ಸಾವು

ಭದ್ರಾವತಿ: ತಾಲ್ಲೂಕಿನ ಗೊಂಧಿ ಅಣೆಕಟ್ಟಿನ ಬಳಿ ಈಜಲು ಹೋದ ಇಬ್ಬರು ಕಾಲೇಜು ವಿದ್ಯಾರ್ಥಿಗಳು ನೀರಿನ ಸುಳಿಗೆ ಸಿಕ್ಕಿ ಶನಿವಾರ ಮೃತಪಟ್ಟಿದ್ದಾರೆ.

ಶಿವಮೊಗ್ಗ ಎಜುಕೇರ್ ಕಾಲೇಜಿನ ಪ್ರಥಮ ಬಿಕಾಂ. ವಿದ್ಯಾರ್ಥಿಗಳಾದ ಶಶಾಂಕ್ ಹಾಗೂ ಕಿರಣ (19) ಮೃತಪಟ್ಟವರು. ಇವರು ಶಿವಮೊಗ್ಗ ತಾಲ್ಲೂಕಿನ ಕೊಮ್ಮನಾಳ್, ಗಾಡಿಕೊಪ್ಪದವರು.

ಭದ್ರಾ ಜಲಾಶಯ ವೀಕ್ಷಣೆಗೆ ಬಂದಿದ್ದ ಐದು ವಿದ್ಯಾರ್ಥಿಗಳು ಬಳಿಕ ಗೊಂಧಿ ಜಲಾಶಯ ಬಳಿ ಈಜಲು ನೀರಿಗಿಳಿದಿದ್ದಾರೆ. ಈ ವೇಳೆ ಈಜಲು ಬಾರದ ಶಶಾಂಕ್ ಹಾಗೂ ಕಿರಣ ಸುಳಿಗೆ ಸಿಕ್ಕಿ ಮೃತಪಟ್ಟಿದ್ದಾರೆ.

ಆಗ್ನಿಶಾಮಕ ದಳ ಹಾಗೂ ಪೊಲೀಸರ ನೆರವಿನೊಂದಿಗೆ ಗ್ರಾಮಸ್ಥರು ಶವವನ್ನು ಹೊರ ತೆಗೆದರು. ಪ್ರಕರಣ ದಾಖಲಾಗಿದೆ.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Prajavani
Top